ಬ್ರೇಕಿಂಗ್ ನ್ಯೂಸ್
28-03-25 09:25 pm Mangalore Correspondent ಕ್ರೈಂ
ಮಂಗಳೂರು, ಮಾ.28 : ಅತ್ತಾವರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ಪಿಯುಸಿ ವಿದ್ಯಾರ್ಥಿನಿಯರನ್ನು ಮುಂದಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣ 2022ರಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು 17ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣ ಮಂಗಳೂರಿನ ನ್ಯಾಯಾಲಯದಲ್ಲಿ ಆರೋಪ ಸಾಬೀತುಪಡಿಸಲಾಗದೆ ಬಿದ್ದು ಹೋಗಿದ್ದು, 17 ಮಂದಿ ಆರೋಪಿಗಳು ಖುಲಾಸೆಗೊಂಡಿದ್ದಾರೆ.
ಈ ಹಿಂದಿನ ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಇದ್ದಾಗ ಸಣ್ಣ ಸುಳಿವು ಆಧರಿಸಿ ಪೊಲೀಸರು ದಾಳಿ ನಡೆಸಿ ಗುಪ್ತವಾಗಿ ನಡೆಯುತ್ತಿದ್ದ ಪ್ರಕರಣವನ್ನು ಬಯಲು ಮಾಡಿದ್ದರು. ಮಂಗಳೂರಿನ ಪ್ರತಿಷ್ಠಿತ ಬಿಲ್ಡರುಗಳು, ಉಳ್ಳಾಲದ ಪ್ರತಿಷ್ಠಿತ ರಾಜಕಾರಣಿಗಳ ಆಪ್ತರು ಸೇರಿದಂತೆ ಪ್ರಮುಖ ಆರೋಪಿಗಳು ಇದರಲ್ಲಿ ಆರೋಪಿಗಳಾಗಿದ್ದರು. ಕಾಸರಗೋಡು ಜಿಲ್ಲೆಯ ಉಪ್ಪಳ ಮೂಲದ ಶಮೀನಾ ಎಂಬಾಕೆ ತನ್ನ ಗಂಡನೊಂದಿಗೆ ಸೇರಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಶಮೀನಾ, ಆಕೆಯ ಗಂಡ ಅಬುಬಕ್ಕರ್ ಸಿದ್ದಿಕ್, ಅಸ್ಮಾ, ಐಸಮ್ಮ, ರೆಹಮತ್ ಮತ್ತು ಉಮ್ಮರ್ ಕುಂಞ್ಞ ಸೇರಿಕೊಂಡು ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ನಡೆಸುತ್ತಿದ್ದರು.
ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಬಡ ಹೆಣ್ಮಕ್ಕಳನ್ನು ಗುರುತಿಸಿ ಅವರಿಗೆ ಐಷಾರಾಮಿ ಜೀವನದ ಆಮಿಷ ತೋರಿಸಿ, ಭರಪೂರ ಹಣ ಕೊಡುವುದಾಗಿ ನಂಬಿಸಿ ಅವರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಇಬ್ಬರು ಮುಸ್ಲಿಂ ಹೆಣ್ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿ, ಕೃತ್ಯ ನಡೆಸುತ್ತಿದ್ದ ಮೂವರು ಮಹಿಳೆಯರು ಸಹಿತ 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಇದರಲ್ಲಿ ಒಬ್ಬಾತ 75 ವರ್ಷದ ಮುದುಕ ವ್ಯಕ್ತಿಯೂ ಇದ್ದ. ಹದಿಹರೆಯದ ಹೆಣ್ಮಕ್ಕಳ ಆಸೆಯಿಂದ ಬರುತ್ತಿದ್ದ ಕೇರಳ ಮೂಲದ ಹಣವಂತರೂ ಇದ್ದರು. ಎಳತು ಪ್ರಾಯದ ಹುಡುಗಿಯರಿದ್ದಾರೆಂದು ನಂಬಿಸಿ ಅವರನ್ನು ಖಾಸಗಿ ಅಪಾರ್ಟ್ಮೆಂಟಿಗೆ ಬರಹೇಳಿ ಅಲ್ಲಿ ಯುವತಿಯರನ್ನು ಒಪ್ಪಿಸಲಾಗುತ್ತಿತ್ತು.
ಕಾಲೇಜು ಹೆಣ್ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಮಾಲ್ಗಳಲ್ಲಿ ಸುತ್ತಾಡಿಸಿ ಆನಂತರ, ಇತರರ ಜೊತೆಗೆ ಸೆಕ್ಸ್ ಮಾಡಲು ಒಪ್ಪಿದರೆ ಲಕ್ಷಾಂತರ ರೂಪಾಯಿ ಹಣ ನೀಡುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿದ್ದ ಪೊಲೀಸರು 86 ಸಾಕ್ಷಿಗಳನ್ನು ಒದಗಿಸಿದ್ದರು. ಆದರೆ, ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳು ಹಾಜರಾಗದೇ ಸಾಕ್ಷ್ಯ ಕೊರತೆಯಾಗಿದ್ದರಿಂದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರು ಜಿಲ್ಲಾ ಹೆಚ್ಚುವರಿ ಪೋಕ್ಸೋ ನ್ಯಾಯಾಲಯವು ಮಾ.28ರಂದು ಆದೇಶ ಮಾಡಿದೆ. ಮೊದಲ ಆರೋಪಿ ಸಮೀನಾ ವಿಚಾರಣೆ ಹಂತದಲ್ಲಿ ಇರುವಾಗಲೇ ಸಾವನ್ನಪ್ಪಿದ್ದಳು. ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಕೀಲರಾದ ಅರುಣ್ ಬಂಗೇರ, ವಿಕ್ರಮ್ ರಾಜ್, ಪ್ರಸಾದ್ ಬಂಗೇರ, ಮೊಹಮ್ಮದ್ ಅಸ್ಗರ್ ವಾದಿಸಿದ್ದರು.
Mangalore all 17 Accused in Nandigudde Flat Prostitution Case Involving PU Student Acquitted. “This is an organized prostitution racket. Among the 10 arrested, 7 accused were operating in a gang while three are clients who sexually assaulted the minor. The minor came in contact with one of the accused who was previously arrested. The accused developed contact with the minor by giving her gifts and money taking her into confidence.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm