ಬ್ರೇಕಿಂಗ್ ನ್ಯೂಸ್
29-03-25 10:33 pm HK News Desk ಕ್ರೈಂ
ಹೈದರಾಬಾದ್, ಮಾ.29 : ಹೈದರಾಬಾದ್, ರಾಜಾಮುಂಡ್ರಿಯಲ್ಲಿ ಫೇಮಸ್ ಪ್ಯಾಸ್ಟರ್ ಆಗಿದ್ದ ಪಡಗಾಲ ಪ್ರವೀಣ್ ಕುಮಾರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೊಂದು ಪ್ರೀ ಪ್ಲಾನ್ಡ್ ಮರ್ಡರ್ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೈದರಾಬಾದ್ ಬಳಿಯ ತಿರುಮಲಗಿರಿ ಎಂಬಲ್ಲಿ ಪ್ಯಾಸ್ಟರ್ ಆಗಿದ್ದ ಪ್ರವೀಣ್ ಕುಮಾರ್ ಹೈದರಾಬಾದ್ ನಿಂದ ತನ್ನ ಬುಲೆಟ್ ಬೈಕಿನಲ್ಲಿ ರಾಜಾಮುಂಡ್ರಿಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಮಾ.18ರ ರಾತ್ರಿ ಪ್ರವೀಣ್ ಕುಮಾರ್ ತನ್ನ ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಸ್ಕಿಡ್ ಆಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬೈಕ್ ಸ್ಕಿಡ್ ಆಗಿದ್ದು, ಇವರು ನೆಲಕ್ಕುರುಳಿದ ಅವರ ಮೇಲೆಯೇ ಬೈಕ್ ಬಿದ್ದಿತ್ತು. ರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದ್ದರೂ, ಯಾರೂ ಇದನ್ನು ಗಮನಿಸಿರಲಿಲ್ಲ. ಮರುದಿನ ಬೆಳಗ್ಗೆ 9 ಗಂಟೆ ವೇಳೆಗೆ ಪೊಲೀಸರ ಗಮನಕ್ಕೆ ಬಂದಿತ್ತು. ಸಿಸಿಟಿವಿ ಆಧರಿಸಿ ಪೊಲೀಸರು ಬೈಕ್ ಸ್ಕಿಡ್ ಆಗಿ ಬಿದ್ದು ಪ್ರವೀಣ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.


ಆದರೆ ಸ್ಥಳೀಯ ಕ್ರಿಶ್ಚಿಯನ್ ಪ್ರಮುಖರು ಮತ್ತು ಪ್ರವೀಣ್ ಕುಟುಂಬಸ್ಥರು ಈ ಘಟನೆಯ ಹಿಂದೆ ಬೇರೇನೋ ಸಂಚು ಆಗಿದೆ ಎನ್ನುತ್ತಿದ್ದಾರೆ. ಅಪಘಾತ ಅನ್ನುವುದಕ್ಕಿಂತಲೂ ಇದರ ಹಿಂದೆ ಏನೋ ಸಂಚು ಆಗಿರುವುದಾಗಿ ಸಂಶಯ ಪಡುತ್ತಿದ್ದಾರೆ. ಹೀಗಾಗಿ ಓಪನ್ ಪೋಸ್ಟ್ ಮಾರ್ಟಂ ಆಗಬೇಕು ಮತ್ತು ಘಟನೆಯ ಸಮಗ್ರ ತನಿಖೆ ಆಗಬೇಕೆಂದು ಆಗ್ರಹ ಮಾಡಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಎಸ್ಪಿ ನರಸಿಂಹ ಕಿಶೋರ್ ತನಿಖೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಸಿಸಿಟಿವಿ ಪ್ರಕಾರ, ಲಾರಿ ಮತ್ತು ಕಾರು ಸಂಚರಿಸಿದ ಸಂದರ್ಭದಲ್ಲಿ ದೊಡ್ಡದಾಗಿ ಧೂಳು ಎದ್ದಿತ್ತು. ಇದರಿಂದಾಗಿ ವಾತಾವರಣ ಮಸುಕಾಗಿ ಬೈಕ್ ಸ್ಕಿಡ್ ಆಗಿ ಬಿದ್ದಿರುವಂತೆ ತೋರುತ್ತಿದೆ. ಲಾರಿ ಮತ್ತು ಕಾರು ಯಾರದ್ದೆಂದು ಪತ್ತೆ ಮಾಡಬೇಕಷ್ಟೆ. ಇದರ ಹಿಂದೆ ಏನಾದರೂ ಸಂಚು ಅಡಗಿದ್ಯಾ ಎನ್ನುವುದನ್ನು ತನಿಖೆ ಮಾಡಬೇಕು ಎಂದಿದ್ದಾರೆ. ಕುಟುಂಬದ ದೂರಿನಂತೆ ಸಂಶಯಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪಡಿಗಾಲ ಪ್ರವೀಣ್ ಕುಮಾರ್ ಧಾರ್ಮಿಕ ಚಟುವಟಿಕೆಗಳಿಗಾಗಿ ಹೆಸರಾಗಿದ್ದರು. ಪಶ್ಚಿಮ ಗೋದಾವರಿ ಜಿಲ್ಲೆಯ ಚಾಗಲ್ಲು ಎಂಬಲ್ಲಿಗೆ ಕ್ರಿಶ್ಚಿಯನ್ ಸಮುದಾಯದ ಸಮ್ಮೇಳನ ಒಂದಕ್ಕೆ ಪ್ರವೀಣ್ ಕುಮಾರ್ ಬೈಕಿನಲ್ಲಿ ಹೊರಟಿದ್ದರು. ಆದರೆ ಮರುದಿನ ನಿಗೂಢ ರೀತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪ್ರವೀಣ್ ಕುಮಾರ್ ಪತ್ತೆಯಾಗಿದ್ದಾರೆ. ಪ್ಯಾಸ್ಟರ್ ಸಾವಿನ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಿದ್ದಾರೆ.
Pagadala Praveen Kumar, a Christian preacher from SBI Colony near Tirumalagiri in Hyderabad, allegedly died in a road accident early on Tuesday. Praveen, a former software engineer who later became a preacher, was traveling to Rajahmundry when the accident occurred on National Highway 16.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm