ಬ್ರೇಕಿಂಗ್ ನ್ಯೂಸ್
01-04-25 10:42 pm Bangalore Correspondent ಕ್ರೈಂ
ಬೆಂಗಳೂರು, ಎ.1 : ಒಂದು ಮುತ್ತಿಗೆ 50 ಸಾವಿರ, ಜೊತೆಗೆ ಸುತ್ತಾಡಿದರೆ 15 ಲಕ್ಷ..! ಹೌದು.. ಇದು ಬೆಂಗಳೂರಿನ ಟೀಚರಮ್ಮನ ಲವ್ ಕಮ್ ಬ್ಲಾಕ್ಮೇಲ್ ಸ್ಟೋರಿ. ಮಗುವನ್ನು ಪ್ರೀಸ್ಕೂಲ್ ಒಯ್ದು ಪರಿಚಯ ಆಗಿದ್ದ ಟೀಚರಮ್ಮ ಕೊಟ್ಟ ಮುತ್ತು ಉದ್ಯಮಿಯ ಜೀವ ಬಾಯಿಗೆ ಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ಎಂಬ ಟೀಚರ್ ಇದರ ಕಥಾನಾಯಕಿಯಾಗಿದ್ದು ಉದ್ಯಮಿಯ ಬ್ಲಾಕ್ಮೇಲ್ ಮಾಡಿ ಕಂಬಿ ಎಣಿಸುತ್ತಿದ್ದಾಳೆ. 2023ರಲ್ಲಿ ತನ್ನ ಮಗುವನ್ನು ಪ್ರೀಸ್ಕೂಲ್ಗೆ ಸೇರಿಸಲು ಹೋದ ಉದ್ಯಮಿಯೊಬ್ಬರು ಶ್ರೀದೇವಿಗೆ ಪರಿಚಯ ಆಗಿದ್ದರು. ದಿನವೂ ಮಗುವನ್ನ ಪ್ಲೇ ಹೋಮ್ಗೆ ಬಿಡಲು ಹೋಗುತ್ತಿದ್ದ ಉದ್ಯಮಿ ಹಾಗೂ ಶ್ರೀದೇವಿ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತ್ತು. ಇದೇ ವೇಳೆ, ಶ್ರೀದೇವಿ ತನ್ನ ಪ್ರೀಸ್ಕೂಲ್ ನಿರ್ವಹಣೆಗೆ ಅಂತ ಉದ್ಯಮಿಯಿಂದ 2 ಲಕ್ಷ ರೂ. ಸಾಲ ಪಡೆದಿದ್ದಾರೆ. ಸ್ನೇಹ ಬೆಳೆದಿದ್ದ ಕಾರಣ ಶ್ರೀದೇವಿಗೆ ಸುಲಭದಲ್ಲಿ ಹಣ ಕೊಟ್ಟಿದ್ದಾರೆ.
2024ರ ನವೆಂಬರ್ನಲ್ಲಿ ತನ್ನ ತಂದೆಗೆ ಹುಷಾರಿಲ್ಲ ಅಂತ ಮತ್ತೆ 2 ಲಕ್ಷ ರೂಪಾಯಿ ಕೇಳಿದ್ದಾಳೆ. ಹಣ ವಾಪಸ್ ಕೇಳಿದಾಗ ಕಷ್ಟ ಸರ್, ಶಾಲೆ ಪಾರ್ಟ್ನರ್ ಆಗಿ ಎಂದಿದ್ದರಂತೆ. ಈ ಗ್ಯಾಪಲ್ಲಿ ಉದ್ಯಮಿ ಹಾಗೂ ಶ್ರೀದೇವಿ ಮಧ್ಯೆ ಸಲುಗೆ ಬೆಳೆದು ಸುತ್ತಾಟ ಶುರುವಾಗಿತ್ತು. ಉದ್ಯಮಿ ಕೂಡ ಶ್ರೀದೇವಿ ಜೊತೆ ಮಾತಾಡಲೆಂದೇ ಹೊಸ ಸಿಮ್, ಫೋನ್ ಖರೀದಿ ಮಾಡಿದ್ದರು.
50 ಸಾವಿರಕ್ಕೊಂದು ಮುತ್ತು!
2025ರ ಜನವರಿ ಮೊದಲ ವಾರದಲ್ಲಿ ಉದ್ಯಮಿ ತನ್ನ ಹಣ ವಾಪಸ್ ಕೇಳಿದ್ದರು. ಆಗ ನೇರವಾಗಿ ಉದ್ಯಮಿ ಮನೆಗೆ ತೆರಳಿದ್ದ ಶ್ರೀದೇವಿ, ಸಲುಗೆಯಿಂದ ಮಾತನಾಡಿದ್ದಲ್ಲದೆ ತುಟಿಗೆ ಮುತ್ತಿಟ್ಟು ಮತ್ತೆ 50 ಸಾವಿರ ಕಿತ್ತುಕೊಂಡಿದ್ದಳಂತೆ. ಬಳಿಕ ನಿನ್ನ ಜೊತೆ ರಿಲೇಷನ್ ಶಿಪ್ನಲ್ಲಿ ಇರ್ತೇನೆಂದು ಹೇಳಿ ಉದ್ಯಮಿಯನ್ನು ಯಾಮಾರಿಸಿದ್ದಳು.
ಮುತ್ತು ಕೊಟ್ಟರೆ ಹಣ ಬರುತ್ತೆ ಎಂದು ತಿಳಿದ ಕೂಡಲೇ ಶ್ರೀದೇವಿಯ ಅಸಲಿ ಆಟ ಶುರುವಾಗಿತ್ತು. ಈ ವೇಳೆ ಮತ್ತೆ 15 ಲಕ್ಷ ಹಣಕ್ಕೆ ಶ್ರೀದೇವಿ ಡಿಮ್ಯಾಂಡ್ ಮಾಡಿದ್ದಾರೆ. ಪದೇ ಪದೆ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ರಿಂದ ಉದ್ಯಮಿ ತನ್ನಲ್ಲಿದ್ದ ಸಿಮ್ಮನ್ನು ಮುರಿದು ಹಾಕಿದ್ದರು. ಆನಂತರ, ಮಾರ್ಚ್ 12ರಂದು ಉದ್ಯಮಿ ಪತ್ನಿಗೆ ಕರೆ ಮಾಡಿ ಮಕ್ಕಳ ಸ್ಕೂಲ್ ಟಿ.ಸಿ ಕೊಡುತ್ತೇನೆ, ನಿಮ್ಮ ಪತಿಯನ್ನ ಸ್ಕೂಲ್ಗೆ ಕಳಿಸಿ ಎಂದಿದ್ದಾರೆ. ಇದರ ಬೆನ್ನಲ್ಲೇ ಉದ್ಯಮಿ ಪ್ರೀ ಸ್ಕೂಲ್ಗೆ ತೆರಳಿದ್ದು ಶ್ರೀದೇವಿ ಜೊತೆಗಿದ್ದ ಸಾಗರ್, ಗಣೇಶ್ ಎಂಬ ಯುವಕರು ನೇರವಾಗಿ ಆವಾಜ್ ಹಾಕಿದ್ದಾರೆ. ಸಾಗರ್ ಜೊತೆ ಎಂಗೇಜ್ಮೆಂಟ್ ಆಗಿದೆ. ನೀನು ಯಾಕೆ ಹುಡುಗಿ ತಿರುಗಾಡ್ತಿದ್ಯಾ? ಈ ವಿಚಾರ ನಿನ್ನ ಪತ್ನಿಗೆ ತಿಳಿಸ್ತೇನೆಂದು ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಆಗ ಉದ್ಯಮಿ ಶ್ರೀದೇವಿಗೆ ಬಾಯ್ ಫ್ರೆಂಡ್ ಇರೋ ವಿಚಾರ ನನಗೆ ಗೊತ್ತಿಲ್ಲ. ಶ್ರೀದೇವಿ ಜೊತೆ ಊಟ, ತಿಂಡಿ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.
ಮಾರ್ಚ್ 17ರಂದು ಮತ್ತೆ ಉದ್ಯಮಿಗೆ ಶ್ರೀದೇವಿ ಕರೆ ಮಾಡಿದ್ದು, 15 ಲಕ್ಷ ಕೊಡುವಂತೆ ಪೀಡಿಸಿದ್ದಾಳೆ. ಹಣ ಕೊಟ್ಟರೆ ಅಶ್ಲೀಲ ವಿಡಿಯೋ, ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದ್ರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾಳೆ. ನಿರಂತರ ಬ್ಲ್ಯಾಕ್ ಮೇಲ್ ಹಾಗೂ ಸುಲಿಗೆಯಿಂದ ಬೇಸತ್ತ ಉದ್ಯಮಿ ಕೊನೆಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಟೀಚರ್ ಶ್ರೀದೇವಿ ಕಳ್ಳಾಟ ಬೆಳಕಿಗೆ ಬಂದಿದ್ದು ಶ್ರೀದೇವಿ, ಗಣೇಶ್ ಮತ್ತು ಸಾಗರ್ ಅವರನ್ನು ಬಂಧಿಸಿದ್ದಾರೆ.
The Bengaluru Central Crime Branch (CCB) arrested three individuals, including a kindergarten teacher, for allegedly blackmailing and extorting money from a businessman. The accused, identified as Sridevi Rudagi, Ganesh Kale, and Sagar More, all hail from Vijayapura district.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm