ಬ್ರೇಕಿಂಗ್ ನ್ಯೂಸ್
04-04-25 03:03 pm Mangalore Correspondent ಕ್ರೈಂ
ಮಂಗಳೂರು, ಎ.4 : ಸಂಸತ್ತಿನಲ್ಲಿ ವಕ್ಫ್ ಮಸೂದೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿ ಅಕ್ರಮದ ಬಗ್ಗೆ ವರದಿ ನೀಡಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗ ಮತ್ತು ವಕ್ಫ್ ಕಮಿಟಿಯ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ ಕರೆಗಳು ಬಂದಿವೆ.
ಎರಡು ದಿನಗಳಿಂದ ನಿರಂತರ ಇಂಟರ್‌ನೆಟ್ ಕರೆ ಮೂಲಕ ಬೆದರಿಕೆ ಬರುತ್ತಿದೆ. ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ನಿನ್ನನ್ನು ಬಿಡುವುದಿಲ್ಲ, ನಿನ್ನ ವರದಿಯಿಂದ ತೊಂದರೆಯಾಗಿದೆ ಅನ್ನೋ ಕರೆಗಳು ಬರುತ್ತಿದೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.
ನೀನು ಬಹಳಷ್ಟು ನಾಯಕರು, ವ್ಯಕ್ತಿಗಳ ವಿರುದ್ಧ ತಪ್ಪು ಮಾಹಿತಿ ಕೊಟ್ಟಿದ್ದೀಯ. ಎಲ್ಲರೂ ನೊಂದಿದ್ದಾರೆ. ಯಾರು ಕೂಡ ನಿನ್ನನ್ನು ಕ್ಷಮಿಸಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ನನ್ನ ಕಸಿನ್ ಒಬ್ಬರು ಪೊಲೀಸ್ ಆಫೀಸರ್. ನನಗೆ ಕರೆ ಮಾಡಿ ಜೋಪಾನವಾಗಿರಪ್ಪ, ಮನೆಯಿಂದ ಹೊರಗಡೆ ಒಬ್ಬನೇ ಹೋಗಬೇಡ ಅಂತ ಸಲಹೆ ನೀಡಿದ್ದಾರೆ ಎಂದು ಮಾಣಿಪ್ಪಾಡಿ ಮಾಹಿತಿ ಹಂಚಿಕೊಂಡಿದ್ದಾರೆ
ನನ್ನ ವರದಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿದ್ದೇನೆ. ಕಲಬುರಗಿಯಲ್ಲಿ ದೊಡ್ಡ ದೊಡ್ಡ ಮಾಲ್, ಬಿಲ್ಡಿಂಗ್‌ಗಳಿವೆ. ಅವರ ಹೆಸರಲ್ಲಿ ಅಲ್ಲದಿದ್ದರೂ, ಬೇರೆಯವರ ಹೆಸರಲ್ಲಿ ಒತ್ತುವರಿಯಾಗಿದೆ. ಬಹುಪಾಲು ಬೇನಾಮಿ ಆಸ್ತಿ ಎಂದು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ ಈಗ ದೇಶಾದ್ಯಂತ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ವಕ್ಫ್ ವಿಚಾರದಲ್ಲಿ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆಗಳು ಬಂದಿದ್ದು ಮಸೂದೆ ತಿದ್ದುಪಡಿಗೆ ಇವರು ಕೊಟ್ಟ ಅಂಶಗಳೇ ಕಾರಣ ಎಂದು ವಿಶ್ಲೇಷಣೆ ಮಾಡಲಾಗಿದೆ.
Former Karnataka State Minority Commission chairman Anwar Manippady has reportedly received multiple threat calls after his report was cited during a discussion on the Waqf Amendment Bill in the Lok Sabha. During the debate, Union Home Minister Amit Shah had referred to the Karnataka Waqf land report submitted by Manippady. Following this, the former commission chief allegedly started receiving threat calls in Hindi, Marathi, English, Tulu, and other North Indian languages.
06-04-26 08:51 pm
HK News Staffer
ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ...
05-04-26 10:45 pm
ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಶರಣ್ಯ ಮೂರು...
05-04-26 07:24 pm
ಟೋಲ್ ಬೂತ್ಗಳಲ್ಲಿ ಇನ್ಮುಂದೆ ಸಂಚಾರ ಸರಾಗ ; ದೇಶಾದ್...
04-04-26 07:33 pm
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
06-04-26 06:16 pm
HK News Staffer
ಗಲ್ಫ್ ಯುದ್ಧ ಎಫೆಕ್ಟ್ ; ಇಸ್ರೇಲ್ ಗೆ ಏರ್ ಇಂಡಿಯಾ ವ...
06-04-26 06:09 pm
ಯುಎಇಯಿಂದ ಪಾಕಿಸ್ತಾನಕ್ಕೆ ಬಿಗ್ ಶಾಕ್ ; 2 ಬಿಲಿಯನ್...
05-04-26 12:37 pm
ಇರಾನ್ ಗೆ ಅಮೆರಿಕ ಮತ್ತೆ 48 ಗಂಟೆಗಳ ಗಡುವು ; ಒಂದು...
04-04-26 10:53 pm
ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಪಟ್ಟಿ ಬಿಡುಗಡೆ; ತಮಿಳ...
03-04-26 07:52 pm
06-04-26 07:58 pm
HK News Staffer
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
06-04-26 05:40 pm
HK News Staffer
ಆತ್ಮಹತ್ಯೆ ಮಾಡಿಕೊಂಡ ಪತ್ನಿಯನ್ನು ನೋಡಲು ಆಸ್ಪತ್ರೆಗ...
06-04-26 02:34 pm
ಹಂದಿ ಬೇಟೆಗಾಗಿ ತೋಟದಲ್ಲಿ ಇಟ್ಟಿದ್ದ ನಾಡಬಾಂಬ್ ಸ್ಫೋ...
05-04-26 11:03 am
ನಾಸಿಕ್ ಭೀಕರ ದುರಂತ; ನಿಯಂತ್ರಣ ತಪ್ಪಿ ಬಾವಿಗೆ ಬಿದ್...
04-04-26 05:42 pm
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm