ಬ್ರೇಕಿಂಗ್ ನ್ಯೂಸ್
05-04-25 04:27 pm HK News Staff ಕ್ರೈಂ
ಬೆಂಗಳೂರು, ಎ.5: ಫೇಸ್‌ಬುಕ್‌ನಲ್ಲಿ ಅಪರಿಚಿತ ಮಹಿಳೆಯೊಬ್ಬಳ ಸೂಚನೆಯಂತೆ 63 ವರ್ಷದ ಮಲಯಾಳಿ ವ್ಯಕ್ತಿಯೊಬ್ಬರು, ನಕಲಿ ಸೈಬರ್ ತಾಣದಲ್ಲಿ ಹೂಡಿಕೆ ಮಾಡಿ ಬರೋಬ್ಬರಿ 3 ಕೋಟಿ ರೂ. ಕಳಕೊಂಡಿದ್ದಾರೆ. ವ್ಯಾಪಾರ ವೇದಿಕೆ ಹೆಸರಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದು ಸಿಇಎನ್ ಕ್ರೈಮ್ ಬ್ರ್ಯಾಂಚ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಸಂಜನಾ ಹೆಸರಿನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದ ಆನ್‌ಲೈನ್ ವಂಚಕರು, ಹಲಸೂರಿನ ವ್ಯಕ್ತಿಯನ್ನು ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ವಂಚಕರ ಮಾತನ್ನು ನಂಬಿ, ಅಪಾರ ಪ್ರಮಾಣದ ಹೂಡಿಕೆ ಮಾಡಿದ್ದರು. ಜನವರಿ 4ರಂದು ಸಂಜನಾ ಸಂಜು ಹೆಸರಿನ ಖಾತೆಯಿಂದ ಸಂದೇಶ ಬಂದಿತ್ತು. ಆಕೆ ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಪ್ರತಿಕ್ರಿಯಿಸಿದ್ದರಿಂದ ಇಬ್ಬರೂ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿ ವಾಟ್ಸಾಪ್ ಕರೆಯಲ್ಲಿ ಮಾತನಾಡುತ್ತಿದ್ದರು.
ಕೆಲವು ದಿನಗಳ ಬಳಿಕ 'ಫಾರೆಕ್ಸ್' ಎಂಬ ವ್ಯಾಪಾರ ವೇದಿಕೆಯಲ್ಲಿ ಹೂಡಿಕೆ ಮಾಡುವಂತೆ ಯುವತಿ ಪ್ರೇರೇಪಿಸಿದ್ದಳು. ಇದಕ್ಕಾಗಿ ಲಿಂಕ್ ('www.plussmarts.com) ಕೊಟ್ಟಿದ್ದು ಅದನ್ನು ಒತ್ತಿದ ಬಳಿಕ ಯುಕೆ ಮೂಲದ ಕಂಪನಿಯ ಸಮೂಹಕ್ಕೆ ಒಯ್ದಿತ್ತು. ಅಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಿಗುವುದಾಗಿ ಹೇಳಿದ್ದಳು. ಈ ವ್ಯಕ್ತಿ ತನ್ನ ಇಮೇಲ್ ಐಡಿ ಬಳಸಿ ಖಾತೆ ತೆರೆದು ಹಣ ಹೂಡಿಕೆ ಮಾಡಿದ್ದರು. ಅನೇಕ ಬ್ಯಾಂಕ್‌ಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿರುವ ಬೇರೆ ಬೇರೆ ಖಾತೆಗಳಿಗೆ ಹಣ ಹೋಗುತ್ತಿರುವುದನ್ನು ಗಮನಿಸಿದ್ದರು.
ಎರಡು ತಿಂಗಳ ಕಾಲ ಹಣ ಹಾಕುತ್ತ ಹೋಗಿದ್ದು ಹೂಡಿಕೆ ಮತ್ತು ಲಾಭವು ಆನ್‌ಲೈನ್‌ನಲ್ಲಿ ಕಾಣಿಸುತ್ತಿತ್ತು. ಅವರ ಖಾತೆಯಲ್ಲಿ 708,204.9 ಅಮೆರಿಕನ್ ಡಾಲರ್ (ಅಂದಾಜು 5.8 ಕೋಟಿ ರೂ.) ಇರುವುದಾಗಿ ತೋರಿಸಿತ್ತು. ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಶೇ.30ರಷ್ಟು ಆದಾಯ ತೆರಿಗೆ ಪಾವತಿಸುವಂತೆ ಸೂಚಿಸಿದ್ದರು. ಈ ಮಾತನ್ನು ನಂಬಿದ ವ್ಯಕ್ತಿ, ಸ್ನೇಹಿತರಿಂದ ಹಣವನ್ನು ಸಾಲವಾಗಿ ಪಡೆದು 96 ಲಕ್ಷ ರೂ. ತೆರಿಗೆ ರೂಪದಲ್ಲಿ ಪಾವತಿಸಿದ್ದಾರೆ.
ಮಾರ್ಚ್ 27ರಂದು ತೆರಿಗೆ ಪಾವತಿಸಿದ್ದರೆ, ಮರುದಿನ ನಿಮ್ಮ ಖಾತೆಯನ್ನು ಅಧಿಕಾರಿಗಳು ಅನುಮಾನಾಸ್ಪದ ಎಂದು ಪರಿಗಣಿಸಿದ್ದಾರೆ. ಹಣ ವರ್ಗಾವಣೆ ತಡೆಯಲು, ಒಟ್ಟು ಮೊತ್ತದಲ್ಲಿ ಶೇ. 15ರಷ್ಟು ಭದ್ರತಾ ಠೇವಣಿ ಪಾವತಿಸಬೇಕು ಎಂದು ಪ್ರತಿಕ್ರಿಯೆ ಬಂದಿತ್ತು.
ಮತ್ತೆ 85 ಲಕ್ಷ ರೂ. ಪಾವತಿಸಲು ಕೇಳಿದಾಗ ವ್ಯಕ್ತಿಗೆ ಅನುಮಾನ ಬಂದಿದ್ದು ಬೇರೆಯವರಲ್ಲಿ ಈ ಬಗ್ಗೆ ಕೇಳಿದಾಗ, ಹಣ ಹೂಡಿಕೆಗೆ ಬಳಸಿದ್ದ ಲಿಂಕ್ ನಕಲಿ ಎಂದು ತಿಳಿದುಬಂತು. ಇತ್ತ ಸಂಜನಾ ಸಂಪರ್ಕಿಸುತ್ತಿದ್ದ ನಂಬರ್ 8754084752, ಮಾರ್ಚ್ 31ರಿಂದ ಸ್ವಿಚ್ ಆಫ್ ಆಗಿದೆ. ಒಟ್ಟಾರೆ 3.1 ಕೋಟಿ ರೂ. ಮೊತ್ತವನ್ನು ಈ ವ್ಯಕ್ತಿ ಕಳಕೊಂಡಿದ್ದಾರೆ.
A 63-year-old Malayali man has reportedly lost Rs. 3 crore after falling victim to a fraudulent investment scheme linked to a fake online platform. The man was lured by an unknown woman on Facebook, who encouraged him to invest in a business platform that turned out to be a scam.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm