ಬ್ರೇಕಿಂಗ್ ನ್ಯೂಸ್
08-04-25 03:27 pm HK News Desk ಕ್ರೈಂ
ಕೊಯಂಬತ್ತೂರು, ಎ.8 : ತಮಿಳುನಾಡಿನ ಕೊಯಂಬತ್ತೂರು ನಗರದ ಕಿಂಗ್ಸ್ ಜನರೇಶನ್ ಚರ್ಚ್ ಪಾಸ್ಟರ್ ಆಗಿರುವ ಜಾನ್ ಜೇಬರಾಜ್ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಕೊಯಂಬತ್ತೂರು ಮಹಿಳಾ ಠಾಣೆಯಲ್ಲಿ ಮಾರ್ಚ್ 21ರಂದು ಎಫ್ಐಆರ್ ದಾಖಲಾಗಿದ್ದು, ಅದರ ಬೆನ್ನಲ್ಲೇ ಜಾನ್ ತಲೆಮರೆಸಿಕೊಂಡಿದ್ದಾನೆ.
ಪೋಕ್ಸೋ ಕಾಯ್ದೆಯ 9(1) ಲೈಂಗಿಕ ಕಿರುಕುಳ ಮತ್ತು ಸೆಕ್ಷನ್ 10ರಡಿ ಕೇಸು ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಜಾನ್ ಜೇಬರಾಜ್ ಕೊಯಂಬತ್ತೂರಿನ ಜಿ.ಎನ್ ಮಿಲ್ಸ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ 17 ಮತ್ತು 14 ವರ್ಷದ ಇಬ್ಬರು ಬಾಲಕಿಯರಿಗೆ ಕಿರುಕುಳ ನೀಡಿದ್ದಾನೆಂದು ದೂರು ದಾಖಲಾಗಿದೆ.
17 ವರ್ಷದ ಅನಾಥ ಬಾಲಕಿಯನ್ನು ಪಾಸ್ಟರ್ ಜಾನ್ ಜೇಬರಾಜ್ ಅವರ ಅಜ್ಜ ಸಾಕಿಕೊಂಡಿದ್ದರೆ, 14 ವರ್ಷದ ಹೆಣ್ಮಗಳು ಆತನ ನೆರೆಮನೆಯ ನಿವಾಸಿಯಾಗಿದ್ದಳು. ಇಬ್ಬರು ಹೆಣ್ಮಕ್ಕಳು ಜಾನ್ ಮನೆಯಲ್ಲಿ ನಡೆದಿದ್ದ ಪಾರ್ಟಿಗೆ ಬಂದಿದ್ದು, ಅಲ್ಲಿ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ. ಅಲ್ಲದೆ, ಈ ಬಗ್ಗೆ ಯಾರಿಗಾದ್ರೂ ಹೇಳಿದರೆ ಕೊಲ್ಲುತ್ತೇನೆಂದು ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ತಿಳಿಸಿದ್ದಾರೆ.
ವರ್ಷದ ಹಿಂದೆ ನಡೆದ ಘಟನೆ ಬಗ್ಗೆ ಇತ್ತೀಚೆಗೆ 14 ವರ್ಷದ ಮಗಳು ತನ್ನ ಮನೆಯವರಿಗೆ ತಿಳಿಸಿದ್ದು ಅದರಂತೆ ಕೊಯಂಬತ್ತೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಆದರೆ ದೂರು ದಾಖಲಾದ ಬೆನ್ನಲ್ಲೇ ಆರೋಪಿ ಜಾನ್ ತಪ್ಪಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Christian preacher Pastor John Jebaraj of Kings Generation Church, Coimbatore, has been booked under the Protection of Children from Sexual Offences (POCSO) Act, for allegedly sexually assaulting two minor girls. FIR was filed against him on March 21 by the Coimbatore Central All Women’s Police Station. The accused has been absconding since. According to reports, a special team has been formed to nab him
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 01:45 pm
HK News Staffer
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am
ಬಾಂಬ್ ಮಾದರಿಯ ವಸ್ತು ಸ್ಫೋಟಿಸಿ ರೀಲ್ಸ್ ಶೂಟಿಂಗ್ ;...
01-05-26 10:30 am
ಗುದದ್ವಾರದಲ್ಲಿ ಮೊಬೈಲ್ ಬಚ್ಚಿಟ್ಟು ಜೈಲು ಎಂಟ್ರಿಯಾದ...
01-05-26 09:39 am
ಸೌಜನ್ಯಾ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟಿಗೆ ಅ...
30-04-26 04:30 pm