ಬ್ರೇಕಿಂಗ್ ನ್ಯೂಸ್
23-04-25 01:03 pm Mangalore Correspondent ಕ್ರೈಂ
ಮಂಗಳೂರು, ಎ.23 : ಉಳ್ಳಾಲದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಪೊಲೀಸರು ವಿನಾಕಾರಣ ಫಿಕ್ಸ್ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಸಿಸಿಟಿವಿ ದಾಖಲೆಗಳನ್ನು ಸಂಗ್ರಹಿಸಬೇಕೆಂದು ಹೈಕೋರ್ಟಿನಲ್ಲಿ ರಿಟ್ ಹಾಕಲಾಗಿದೆ. ವಕೀಲರಾದ ವಿಕ್ರಮ್ ರಾಜ್ ಮತ್ತು ಅಶ್ವಿನ್ ಕುಟಿನ್ಹಾರವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿ ನ್ಯಾಯಾಯಲಕ್ಕೆ ನೀಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಆದೇಶ ಹೊರಡಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಎಪ್ರಿಲ್ 16ರಂದು ರಾತ್ರಿ ಉಳ್ಳಾಲದಲ್ಲಿ ಗ್ಯಾಂಗ್ ರೇಪ್ ನಡೆಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮೂರನೇ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಮನೀಶ್ ಅಂದು ಮಂಗಳೂರು ಬಿಟ್ಟು ಉಳ್ಳಾಲಕ್ಕೆ ಹೋಗಿರಲಿಲ್ಲ. ಅಲ್ಲದೆ, ಈ ಕೃತ್ಯದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿದ್ದರೂ ಪೊಲೀಸರು ಫಿಕ್ಸ್ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಂಗಳೂರಿನ ಕೋರ್ಟಿಗೂ ಆರೋಪಿ ಪರವಾಗಿ ಅರ್ಜಿ ಸಲ್ಲಿಕೆಯಾಗಿತ್ತು.
ಅರ್ಜಿಗೆ ಪ್ರತಿಯಾಗಿ ಮಂಗಳವಾರ ಮಂಗಳೂರಿನ ಕೋರ್ಟಿಗೆ ಸರಕಾರಿ ವಕೀಲರು ಪೊಲೀಸರ ಪರವಾಗಿ ಆಕ್ಷೇಪ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಪರೋಕ್ಷವಾಗಿ ಮೂರನೇ ಆರೋಪಿ ಮನೀಶ್ ಕೃತ್ಯದಲ್ಲಿ ಪಾಲ್ಗೊಂಡಿಲ್ಲ ಎನ್ನುವ ವರದಿ ನೀಡಿದ್ದಾರೆ. ಆಮೂಲಕ ಪೊಲೀಸರು ವಿನಾಕಾರಣ ಬಂಧನ ಮಾಡಿದ್ದಾರೆಯೇ ಎಂಬ ಗಂಭೀರ ಅನುಮಾನ ಮೂಡುವಂತೆ ಮಾಡಿದೆ. ಪೊಲೀಸರ ಪರವಾಗಿ ಸರಕಾರಿ ಅಭಿಯೋಜಕರು ನೀಡಿರುವ ವರದಿಯಲ್ಲಿ, ಮೂರನೇ ಆರೋಪಿ ಮನೀಶ್ ಉಳಿದಿಬ್ಬರು ಆರೋಪಿಗಳ ಜೊತೆ ಸೇರಿ ಸಂತ್ರಸ್ತೆಗೆ ಬಿಯರ್ ಕುಡಿಸಿದ್ದು, ಆಕೆಯನ್ನು ಮುಟ್ಟಲು ಯತ್ನಿಸಿದಾಗ ಬೊಬ್ಬೆ ಹಾಕಿದ್ದಳೆಂದು ಅಲ್ಲಿಂದ ಓಡಿ ಹೋಗಿದ್ದನೆಂದು ನಮೂದಿಸಿದ್ದಾರೆ.
ಸದ್ರಿ ದೂರಿನಲ್ಲಿ ಈ ವಿಷಯ ಇಲ್ಲದಿದ್ದರೂ, ಪೊಲೀಸರು ಮೂರನೇ ಆರೋಪಿ ಪರವಾಗಿ ಈ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅತ್ಯಾಚಾರ ಪ್ರಕರಣದಲ್ಲಿ ಆತ ಪಾಲ್ಗೊಂಡಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಆಮೂಲಕ ಮನೀಶ್ ಕೃತ್ಯದಲ್ಲಿ ಪಾಲ್ಗೊಂಡಿಲ್ಲ ಎನ್ನುವುದನ್ನು ಒಪ್ಪಿರುವಂತೆ ಕಂಡುಬಂದಿದೆ ಎಂದು ಆರೋಪಿ ಪರ ವಕೀಲ ವಿಕ್ರಮ್ ರಾಜ್ ತಿಳಿಸಿದ್ದಾರೆ.
The High Court has directed local police to obtain and examine CCTV footage related to the incident of Ullal gang rape in Mangalore. This order comes amidst revelations from the police investigation that there is currently no evidence supporting the existence of a third accused in the case.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
05-09-25 11:43 am
Mangalore Correspondent
Mangalore, Honey Trap, Kundapur, Crime: ಹುಡುಗ...
04-09-25 01:10 pm
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm