ಬ್ರೇಕಿಂಗ್ ನ್ಯೂಸ್
02-05-25 12:00 pm Mangalore Correspondent ಕ್ರೈಂ
ಉಳ್ಳಾಲ, ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧದಿಂದ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತೊಕ್ಕೊಟ್ಟು ಮಾಯಾ ಬಾರ್ ಬಳಿ ನಡೆದಿದ್ದು, ಕೃತ್ಯವು ಬಜಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವೆಂದು ಹೇಳಲಾಗುತ್ತಿದೆ.
ಅಳೇಕಲ ನಿವಾಸಿ ಫೈಝಲ್ ಗಾಯಗೊಂಡಿರುವ ವ್ಯಕ್ತಿ. ಫೈಝಲ್ ಗುರುವಾರ ಮಧ್ಯರಾತ್ರಿ 12.30 ಗಂಟೆಗೆ ಒಂಭತ್ತುಕೆರೆಯ ಪತ್ನಿ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ತನ್ನ ಸ್ಕೂಟರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಒಂದರಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ತಲ್ವಾರು ಬೀಸಿದ್ದಾರೆನ್ನಲಾಗಿದೆ. ಮತ್ತೊಂದು ಬೈಕಲ್ಲಿ ಮತ್ತಿಬ್ಬರು ಯುವಕರು ಮಾರಕಾಯುಧಗಳೊಂದಿಗೆ ಬಂದಿದ್ದು ಎರಡು ಬೈಕಿನಲ್ಲಿ ನಾಲ್ವರು ಕಿಡಿಗೇಡಿಗಳೂ ಮಂಗಳೂರಿನ ಕಡೆ ಪಲಾಯನಗೈದಿದ್ದಾರೆಂದು ದೂರು ನೀಡಲಾಗಿದೆ.
ಘಟನೆಯಿಂದ ಫೈಝಲ್ ಬೆನ್ನಿಗೆ ಗಾಯವಾಗಿದ್ದು ಈ ಬಗ್ಗೆ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸರು ಘಟನೆ ನಡೆದಿದೆ ಎನ್ನಲಾದ ತೊಕ್ಕೊಟ್ಟುವಿನ ಮಾಯಾ ಬಾರ್ ಬಳಿಯ ಸಿಸಿಟಿವಿ ಫೂಟೇಜ್ ಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ಉಳ್ಳಾಲ ತಾಲೂಕಿನಲ್ಲಿ ಬಂದ್ ಯಶಸ್ವಿ
ತೊಕ್ಕೊಟ್ಟುವಿನಲ್ಲಿ ಹಿಂದೂ ಕಾರ್ಯಕರ್ತರು ಬೆಳಗ್ಗೆ ಹಿಂದೂಗಳ ಅಂಗಡಿ, ಮಳಿಗೆಗಳನ್ನು ಬಂದ್ ಮಾಡುವಂತೆ ಮಾಲೀಕರಲ್ಲಿ ವಿನಂತಿಸಿದ್ದಾರೆ. ಮಂಗಳೂರಿಗೆ ಬಾಡಿಗೆ ಹೊಡೆಯುತ್ತಿದ್ದ ರಿಕ್ಷಾಗಳನ್ನು ತಡೆದು ಚಾಲಕರಲ್ಲಿ ಬಂದ್ ಗೆ ಬೆಂಬಲ ನೀಡುವಂತೆ ಹೇಳಿದ್ದಾರೆ. ಸಾರಿಗೆ ಬಸ್ಸುಗಳು ಓಡಾಟ ನಡೆಸದೆ ಉಳ್ಳಾಲ, ತೊಕ್ಕೊಟ್ಟು ಪ್ರದೇಶಗಳು ಖಾಲಿಯಾಗಿ ಬಿಕೋ ಎನ್ನುತ್ತಿವೆ.
Tensions continue to rise in the wake of Suhas Shetty's murder, as a youth from Thokottu was reportedly targeted in an attempted attack by armed miscreants. According to sources, two individuals on a bike allegedly attempted to attack a youth named Fazil, who was on his way to work.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm