ಬ್ರೇಕಿಂಗ್ ನ್ಯೂಸ್
17-05-25 05:00 pm Bangalore Correspondent ಕ್ರೈಂ
ಬೆಂಗಳೂರು, ಮೇ 17 : ಸಿಗರೇಟ್ ತಂದು ಕೊಡದಿರುವ ಕೋಪಕ್ಕೆ R15 ಬೈಕ್ಗೆ ಕಾರಿನಿಂದ ಗುದ್ದಿದ ಪರಿಣಾಮ ಓರ್ವ ಸಾಫ್ಟ್ ವೇರ್ ಉದ್ಯೋಗಿ ಜೀವ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆ ಕ್ರಾಸ್ನ ಕನಕಪುರ ರಸ್ತೆ ತಿರುವಿನ ಬಳಿ ನಡೆದಿದೆ.
ಸಂಜಯ್ ಉಸಿರು ಚೆಲ್ಲಿದ ಸಾಫ್ಟ್ವೇರ್ ಇಂಜಿನಿಯರ್. ಆರೋಪಿ ಕಾರು ಚಾಲಕ ಪ್ರತೀಕ್ನನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂಜಯ್ ಹಾಗೂ ಚೇತನ್ ಎನ್ನುವ ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ ಗಳು. ವರ್ಕ್ ಫ್ರಮ್ ಹೋಂ ಕೆಲಸ ಮಾಡಿ ಟೀ ಕುಡಿಯಲು ಮೇ 10 ರಂದು ಬೆಳಗಿನ ಜಾವ 4 ಗಂಟೆಗೆ ಕೋಣನಕುಂಟೆ ಕ್ರಾಸ್ನಲ್ಲಿ ತಳ್ಳು ಗಾಡಿ ಬಳಿಗೆ ಬಂದಿದ್ದರು.

ಈ ವೇಳೆ ಬರ್ತ್ಡೇ ಪಾರ್ಟಿ ಮುಗಿಸಿಕೊಂಡು ಆರ್ಆರ್ ನಗರ ಮನೆ ಕಡೆಗೆ ಕೊಲೆಗಾರ ಪ್ರತೀಕ್ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಆಗ ಕೋಣನಕುಂಟೆ ಕ್ರಾಸ್ ಬಳಿ ಕಾರು ನಿಲ್ಲಿಸಿ, ಕೆಳಗೆ ಇಳಿಯದೇ ಸಿಗರೇಟ್ ತಂದು ಕೊಡುವಂತೆ ಟೀ ಕುಡಿಯುತ್ತಿದ್ದ ಸಂಜಯ್ ಅಂಡ್ ಚೇತನ್ಗೆ ಹೇಳ್ತಾರೆ. ಆದ್ರೆ ಇದಕ್ಕೆ ಇಬ್ಬರು ವಿರೋಧ ವ್ಯಕ್ತಪಡಿಸುತ್ತಾರೆ. ನೀವೇ ಬೇಕಿದ್ರೆ ಬಂದು ಸಿಗರೇಟ್ ತೆಗೆದುಕೊಳ್ಳಿ ಅಂತ ತಮ್ಮ ಪಾಡಿಗೆ ತಾವು ಟೀ ಕುಡಿಯುತ್ತಿದ್ದರು.
ಈ ವೇಳೆ ಟೀ ಅಂಗಡಿ ಬಳಿಯೇ ಪ್ರತೀಕ್ ದಂಪತಿ ಹಾಗೂ ಸಾಫ್ಟ್ವೇರ್ ಉದ್ಯೋಗಿಗಳ ಮಧ್ಯೆ ಗಲಾಟೆ ನಡೆದಿದೆ. ಸ್ಥಳದಲ್ಲಿದ್ದ ಜನರು ಈ ಗಲಾಟೆಯನ್ನು ತಿಳಿಗೊಳಿಸಿ ಕಳುಹಿಸಿದ್ದರು. ಸಾಫ್ಟ್ವೇರ್ ಉದ್ಯೋಗಿಗಳು ಇಬ್ಬರು ತಮ್ಮ R15 ಬೈಕ್ ಹತ್ತಿಕೊಂಡು ಮನೆಗೆ ಹೊರಟಿದ್ರು . ಆದರೆ ಕೋಣನಕುಂಟೆ ಕ್ರಾಸ್ನ ಕನಕಪುರ ರಸ್ತೆ ತಿರುವಿನ ಬಳಿ ಬೈಕ್ ಯೂಟರ್ನ್ ತೆಗೆದುಕೊಳ್ಳುವ ಸಮಯದಲ್ಲಿ ಬೈಕ್ಗೆ ಕಾರಿನಿಂದ ಭೀಕರವಾಗಿ ಪ್ರತೀಕ್ ಡಿಕ್ಕಿ ಹೊಡೆದಿದ್ದಾನೆ.
ಆರೋಪಿ ಪ್ರತೀಕ್ ಕಾರಿನಿಂದ ಗುದ್ದಿದ ರಭಸಕ್ಕೆ ಸಂಜಯ್ ಬೈಕ್ ಅಂಗಡಿ ಶೆಟರ್ಗೆ ಬಡಿದು ಬಿದ್ದಿದೆ. ಈ ವೇಳೆ ಇಬ್ಬರು ಪ್ರಜ್ಞಾ ಹೀನರಾಗಿ ಕೆಳಗೆ ಬಿದ್ದಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಂಜಯ್ ಸ್ಥಿತಿ ಚಿಂತಾಜನಕ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ 2 ದಿನದ ಹಿಂದೆ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀರು ಆರೋಪಿ ಪ್ರತೀಕ್ನನ್ನು ಬಂಧಿಸಿದ್ದಾರೆ.
Car runs over #Bengaluru techie, killing him, after he refuses to buy cigarettes for driver
— The Times Of India (@timesofindia) May 17, 2025
Read: https://t.co/5tz9lSAODS pic.twitter.com/1rpJY9GfeO
A 29-year-old software engineer was killed, and his friend injured in a violent hit-and-run incident in Bengaluru, reportedly triggered by a dispute over a cigarette.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm