ಬ್ರೇಕಿಂಗ್ ನ್ಯೂಸ್
16-06-25 03:05 pm HK News Desk ಕ್ರೈಂ
ಶಿವಮೊಗ್ಗ, ಜೂನ್ 16 : ಶಿವಮೊಗ್ಗದಲ್ಲಿ ನಕಲಿ ನೋಟು ಚಲಾವಣೆ ಆರೋಪದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶಿವಮೊಗ್ಗದ ಭದ್ರಾವತಿ ಪಟ್ಟಣದಲ್ಲಿ ನಕಲಿ ನೋಟು ಚಲಾವಣೆ ಮಾಡಿರುವ ಉದ್ಯಮಿ, ರಂಗೇಗೌಡ (57) ಎಂಬವರು ಬಂಧನವಾಗಿದ್ದಾರೆ. ಭದ್ರಾವತಿಯ ಭಂಡಾರಹಳ್ಳಿಯ ನಾಗಮ್ಮ ಲೇಔಟ್ ನಿವಾಸಿಯಾಗಿದ್ದು ಆರೋಪಿಯಿಂದ 500 ರೂ. ಮುಖಬೆಲೆಯ 13 ನೋಟುಗಳು, 200 ರೂ. ಮುಖ ಬೆಲೆಯ ಒಂದು ನೋಟು, 100 ರೂ ಮುಖ ಬೆಲೆಯ 1 ನೋಟು, 50 ರು. ಮುಖ ಬೆಲೆಯ 1 ನೋಟು ವಶಕ್ಕೆ ಪಡೆಯಲಾಗಿದೆ.
ರಂಗೇಗೌಡ ನಕಲಿ ನೋಟು ಚಲಾವಣೆ ಮಾಡ್ತಿರೋದಾಗಿ ವ್ಯಾಪಾರಿ ಅಜಯ್ ಎಂಬವರು ಪೊಲೀಸ್ ದೂರು ನೀಡಿದ್ದರು. ಡಿಸ್ಕವರ್ ಬೈಕಿನಲ್ಲಿ ಬಂದು 500 ರೂ. ನಕಲಿ ನೋಟು ಕೊಟ್ಟು ವ್ಯಾಪಾರ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ರಂಗೇಗೌಡ ಬೇರೆ ಬೇರೆ ಕಡೆ ನಕಲಿ ನೋಟು ವ್ಯವಹಾರ ಮಾಡಿರುವ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿದೆ. OFP 790829 ಮತ್ತು 9TV 978202 ಈ ನಂಬರಿನ 500 ರೂ. ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ತಿಳಿಸಿವಂತೆ ಪೊಲೀಸರು ಕೋರಿದ್ದಾರೆ.
A real estate businessman has been arrested in Shivamogga on charges of circulating counterfeit currency notes. The arrest was made by the Bhadravathi New Town Police following a complaint by a local trader. The accused, identified as Rangegowda (57), a resident of Nagamma Layout in Bhandarahalli, Bhadravathi, was allegedly involved in circulating fake currency in the region.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm