ಬ್ರೇಕಿಂಗ್ ನ್ಯೂಸ್
20-07-25 12:16 pm HK News Desk ಕ್ರೈಂ
ಲಕ್ನೋ, ಜುಲೈ 19 : ಮತಾಂತರಕ್ಕೆ ವಿದೇಶಿ ಫಂಡಿಂಗ್, ಹಿಂದು ಯುವತಿಯರೇ ಟಾರ್ಗೆಟ್.. ಚಾಂಗೂರ್ ಬಾಬಾನ ಮತಾಂತರ ಜಾಲ ಪತ್ತೆ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಅಲರ್ಟ್ ಆಗಿದ್ದಾರೆ. ಮತ್ತಷ್ಟು ವಿದೇಶಿ ಹಣಕಾಸಿನ ನೆರವು ಮತ್ತು ಐಸಿಸ್ ಉಗ್ರರ ಶೈಲಿಯ ಮತಾಂತರ ದಂಧೆಯನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಆರು ರಾಜ್ಯಗಳಲ್ಲಿ ಹತ್ತು ಜನರನ್ನು ಬಂಧಿಸಿದ್ದಾರೆ.
ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ, ಮತಾಂತರ ದಂಧೆ ತಡೆಯುವ ನಿಟ್ಟಿನಲ್ಲಿ ಪೊಲೀಸರು 'ಮಿಷನ್ ಅಸ್ಮಿತಾ' ಕಾರ್ಯಾಚರಣೆ ಆರಂಭಿಸಿದ್ದಾರೆ. ಮತಾಂತರ ಸಿಂಡಿಕೇಟ್ ನ ಪ್ರಮುಖರಾದ ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಜಹಾಂಗೀರ್ ಆಲಂ ಖಾಸ್ಮಿ ಅವರನ್ನು ಎಟಿಎಸ್ ಬಂಧಿಸಿದೆ ಎಂದು ತಿಳಿಸಿದ್ದಾರೆ.
ಜಮಾಲುದ್ದೀನ್ ಎಂದು ಕರೆಯಲ್ಪಡುವ ಛಾಂಗೂರ್ ಬಾಬಾ ನೇತೃತ್ವದ ಮತಾಂತರ ಜಾಲದ ಆರೋಪಿಗಳ ವಿಚಾರಣೆಯನ್ನು ಎಸ್ ಐಟಿ ಮತ್ತು ವಿಶೇಷ ಕಾರ್ಯಪಡೆ ನಡೆಸಿದ್ದು ಭಯಾನಕ ವಿಚಾರಗಳು ಪತ್ತೆಯಾಗಿವೆ. ಲವ್ ಜಿಹಾದ್, ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜೊತೆಗೆ ಸೇರಿಕೊಂಡು ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಆರು ರಾಜ್ಯಗಳಲ್ಲಿ 10 ಜನರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ತಿಳಿಸಿದರು.
ಆರೋಪಿಗಳು ಯುವತಿಯರನ್ನು ಗುರಿಯಾಗಿಸಿದ್ದು, ಮತಾಂತರಕ್ಕೆ ಅನುಕೂಲವಾಗುವಂತೆ ಆಮಿಷವೊಡ್ಡುವುದು, ಲವ್ ಜಿಹಾದ್ ಮತ್ತಿತರ ವಿಧಾನಗಳ ಮೂಲಕ ಪ್ರಭಾವ ಬೀರಿದ್ದಾರೆ. ISIS ಶೈಲಿಯಲ್ಲಿ ಮತಾಂತರ ನಡೆಸಲಾಗುತ್ತಿದೆ. ಈ ಗುಂಪುಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಎಸ್‌ಡಿಪಿಐ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಸಾಧ್ಯತೆಗಳಿವೆ. ಈ ಮತಾಂತರ ಕಾರ್ಯಕ್ಕೆ "ಕೆನಡಾ, ಅಮೇರಿಕಾ, ಲಂಡನ್ ಮತ್ತು ದುಬೈಯಿಂದ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ಮತ್ತಷ್ಟು ಮಂದಿ ಈ ಜಾಲದಲ್ಲಿ ತೊಡಗಿಸಿದ್ದು ಅವರನ್ನು ಬಂಧಿಸಲಾಗುವುದು ಎಂದು ಡಿಜಿಪಿ ಹೇಳಿದರು.
The Uttar Pradesh Police on Saturday said they have busted a large-scale illegal religious conversion racket and arrested 10 people from six states. The probe began in Agra in March after two sisters -- aged 33 and 18 -- were reported missing. Investigations revealed that they were allegedly coerced into religious conversion and were undergoing radicalization, the police said.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm