ಬ್ರೇಕಿಂಗ್ ನ್ಯೂಸ್
28-07-25 11:20 pm Mangalore Correspondent ಕ್ರೈಂ
ಮಂಗಳೂರು, ಜುಲೈ 28 : ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆದ್ದಿರುವುದಾಗಿ ಹೇಳಿ ಮಂಗಳೂರಿನ ಮಹಿಳೆಯೊಬ್ಬರನ್ನು ಸೈಬರ್ ವಂಚಕರು ಯಾಮಾರಿಸಿದ್ದು ಆಕೆಯಿಂದಲೇ 7 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ. ವಂಚನೆಗೀಡಾದ ಮಹಿಳೆ ಉರ್ವಾ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ಜುಲೈ 23ರಂದು ಫೇಸ್ಬುಕ್ ನೋಡುತ್ತಿದ್ದಾಗ ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಲಿಂಕ್ ಇದ್ದುದನ್ನು ನೋಡಿ, ಅದರಲ್ಲಿನ ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು ಹಾಕಿದ್ದರು. ಜುಲೈ 27ರಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿ 8 ಲಕ್ಷ ರೂ. ಗೆದ್ದಿರುವುದಾಗಿ ಹೇಳಿದ್ದಾನೆ. ಅಲ್ಲದೆ, ಹಣ ಪಡೆಯಲು ನಿಗದಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದಿದ್ದಾನೆ.
ಆತನ ಸೂಚನೆಯಂತೆ, ಮಹಿಳೆ ತನ್ನ ಆಧಾರ್ ಕಾರ್ಡ್, ಪಾನ್ ಕಾರ್ಡ್, ತನ್ನ ಫೋಟೋವನ್ನೂ ಕಳುಹಿಸಿದ್ದಾರೆ. ಆನಂತರ, ನೋಂದಣಿ ಶುಲ್ಕವೆಂದು ಹೇಳಿ ಹಣ ಕಟ್ಟಲು ಹೇಳಿದ್ದು, ಹಂತ ಹಂತವಾಗಿ ಮಹಿಳೆ ಅದನ್ನು ಪಾವತಿಸುತ್ತ ಹೋಗಿದ್ದಾರೆ. ಒಟ್ಟು 7.76 ಲಕ್ಷ ರೂಪಾಯಿ ಮೊತ್ತವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಅಷ್ಟರಲ್ಲಿ ತಾನು ಮೋಸ ಹೋಗಿರುವುದಾಗಿ ತಿಳಿದು ಉರ್ವಾ ಠಾಣೆಗೆ ಬಂದು ದೂರು ನೀಡಿದ್ದಾರೆ. ಸೈಬರ್ ವಂಚಕರು ವಾಟ್ಸಪ್ ಮೆಸೇಜ್ ಮಾಡಿ ಷೇರ್ ಮಾರ್ಕೆಟ್ ಸೇರಿದಂತೆ ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟು ಜನರನ್ನು ಯಾಮಾರಿಸುವುದನ್ನ ನೋಡಿದ್ದೇವೆ. ಆದರೆ ಈ ಕೇಸಿನಲ್ಲಿ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲೂ ದೋಖಾ ಎಸಗಿದ್ದಾರೆ.
In a disturbing case of cyber fraud, a woman from Mangaluru was conned out of ₹7.76 lakh by cybercriminals who tricked her into believing she had won ₹8 lakh through the popular TV quiz show 'Kaun Banega Crorepati' (KBC). The incident has been reported at the Urwa Police Station.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm