ಬ್ರೇಕಿಂಗ್ ನ್ಯೂಸ್
24-12-20 03:02 pm Mangalore Correspondent ಕ್ರೈಂ
ಉಳ್ಳಾಲ, ಡಿ.24 : ಹರೇಕಳದಲ್ಲಿ ಎಸ್ ಡಿಪಿಐ - ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ ಪ್ರಕರಣದ ಬೆನ್ನಲ್ಲೇ ಇಂದು ಮತ್ತೆ ಚುನಾವಣಾ ವಿಚಾರ ಮಂದಿಟ್ಟುಕೊಂಡು ಡಿವೈಎಫ್ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೀದಿಯಲ್ಲಿ ಹೊಡೆದಾಡಿದ್ದಾರೆ.
ಸಿಪಿಐಎಂ ಬೆಂಬಲಿತ, ಹರೇಕಳ ಪಂಚಾಯತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಎಂಬವರ ತಲೆಗೆ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಎಂಬಾತ ಮರದ ಸಲಾಕೆಯಲ್ಲಿ ಹಲ್ಲೆ ನಡೆಸಿದ್ದು ಗಾಯಾಳು ಇಕ್ಬಾಲ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚುನಾವಣೆ ನಡೆದು ಎರಡು ದಿನಗಳ ಬಳಿಕ ಹರೇಕಳದ ಫರೀದ್ ನಗರದಲ್ಲಿ ಘಟನೆ ನಡೆದಿದೆ.
ಹರೇಕಳದ 3 ನೇ ವಾರ್ಡ್ ನಿಂದ CPIM ಬೆಂಬಲಿತ ಅಭ್ಯರ್ಥಿಗಳಾಗಿ ಮಹಮ್ಮದ್ ಅಶ್ರಫ್, ಮಹಮ್ಮದ್ ಇಕ್ಬಾಲ್, ಅನುಸೂಯ ಅವರು ಸ್ಫರ್ಧಿಸಿದ್ದರು. ಇಂದು ಬೆಳಗ್ಗೆ ಫರೀದ್ ನಗರದಲ್ಲಿ ಮಹಮ್ಮದ್ ಅಶ್ರಫ್ ಅವರ ತಾಯಿ ಜೊತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮುನೀರ್ ಬಂದು ಚುನಾವಣಾ ವಿಚಾರದಲ್ಲಿ ತಗಾದೆ ತೆಗೆದು ಆಕೆಗೆ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ.
ಮಧ್ಯ ಪ್ರವೇಶಿಸಿದ ಇಕ್ಬಾಲ್ ಅವರು, ಮಹಿಳೆಯಲ್ಲಿ ಸುಮ್ಮನೆ ಯಾಕೆ ವಾಗ್ವಾದ ನಡೆಸುತ್ತೀಯ.. ಚುನಾವಣೆ ಮುಗಿದು ಹೋದ ಅಧ್ಯಾಯ ಎಂದು ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಮುನೀರ್ , ಇಕ್ಬಾಲ್ ಅವರನ್ನು ದೂಡಿದ್ದು ಈ ವೇಳೆ ಇಬ್ಬರ ನಡುವೆ ಹೊಡೆದಾಟ, ತಳ್ಳಾಟ ನಡೆದಿದೆ.
ಈ ವೇಳೆ ಮುನೀರ್ ಸ್ಥಳದಲ್ಲಿದ್ದ ಮರದ ಸೋಂಟೆಯಲ್ಲಿ ಇಕ್ಬಾಲ್ ತಲೆಗೆ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದು, ಗಾಯಗೊಂಡ ಇಕ್ಬಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆಯನ್ನು ಹರೇಕಳದ DYFY ಘಟಕವು ಖಂಡಿಸಿದ್ದು ಶೀಘ್ರ ಆರೋಪಿಯ ಬಂಧನಕ್ಕೆ ಒತ್ತಾಯಿಸಿದೆ.
ಇಕ್ಬಾಲ್ಗೆ ಗೆ ಹಲ್ಲೆಗೈದ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಕೂಡ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿ ಪ್ರತಿದೂರು ನೀಡಿದ್ದು ,ಕೊಣಾಜೆ ಪೊಲೀಸರು ಮುನೀರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Congress Member assaults Dyfi Member Mohammed Iqbal on his head at Harekala, Mangalore. The fight erupted after a clash between both the parties during the Panchyat Elections 2020 at Harekala in Mangalore.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm