ಬ್ರೇಕಿಂಗ್ ನ್ಯೂಸ್
19-08-25 12:41 pm Mangalore Correspondent ಕ್ರೈಂ
ಉಳ್ಳಾಲ, ಆ.19: ನೀವಿಯ, ಕ್ಯಾಸ್ಕೊ, ಯೇನೆಕ್ಸ್ , ವೈವೈ ಬ್ರಾಂಡ್ ನ ನಕಲಿ ಉತ್ಪನ್ನಗಳನ್ನ ಮಾರಾಟ ನಡೆಸುತ್ತಿದ್ದ ತೊಕ್ಕೊಟ್ಟು ಹೃದಯಭಾಗದ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ "ಸ್ಪೋರ್ಟ್ಸ್ ವಿನ್ನರ್" ಮಳಿಗೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಸಿ ವಿಜಯಕ್ರಾಂತಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ನಕಲಿ ಉತ್ಪನ್ನಗಳನ್ನ ಜಪ್ತಿ ಮಾಡಿದೆ.
ಕ್ರೀಡೆಗೆ ಸಂಬಂಧಿತ ಉತ್ಪನ್ನಗಳನ್ನ ಮಾರಾಟ ಮಾಡುತ್ತಿರುವ ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ ಮಳಿಗೆಯಲ್ಲಿ ಪ್ರತಿಷ್ಟಿತ ನೀವಿಯ, ಕ್ಯಾಸ್ಕೊ, ಯೇನೆಕ್ಸ್ , ವೈವೈ ಕಂಪನಿಯ ನಕಲಿ ಉತ್ಪನ್ನಗಳನ್ನ ಮಾರಾಟ ನಡೆಸಲಾಗುತ್ತಿದೆ ಎಂದು ಹರ್ಯಾಣದ ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ. ಲಿಮಿಟೆಡ್ನ ಸಿಬ್ಬಂದಿ ಸ್ಟೀಫನ್ ರಾಜ್ ಎಂಬವರು ಸೋಮವಾರ ಉಳ್ಳಾಲ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಸ್ಟೀಫನ್ ರಾಜ್ ಅವರ ದೂರಿನ ಮೇರೆಗೆ ಖುದ್ದು ಎಸಿಪಿ ವಿಜಯಕ್ರಾಂತಿ ಅವರೇ ಸೋಮವಾರ ಸಂಜೆ ಪೊಲೀಸರ ತಂಡದೊಂದಿಗೆ ಮಳಿಗೆಗೆ ದಾಳಿ ನಡೆಸಿ ನಕಲಿ ಬ್ರಾಂಡ್ ಉತ್ಪನ್ನಗಳನ್ನ ಜಪ್ತಿಗೊಳಿಸಿದ್ದಾರೆ.
ಸ್ಪೋರ್ಟ್ಸ್ ವಿನ್ನರ್ ಮಳಿಗೆಯ ಮಾಲಕರು ಪ್ರತಿಷ್ಟಿತ ಕಂಪನಿಗಳ ಹೆಸರಿನ ನಕಲಿ ಉತ್ಪನ್ನಗಳನ್ನ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡಿ ಹಣ ಸಂಪಾದಿಸುತ್ತಿರುವ ಬಗ್ಗೆ ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ.(ಲಿ)ಗೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯ ನಿರೀಕ್ಷಕರಾದ ವಿರೂಪಾಕ್ಷ ಸ್ವಾಮಿ ಮತ್ತು ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಸ್ಪೋರ್ಟ್ಸ್ ವಿನ್ನರ್ ಮಳಿಗೆಯ ಮಾಲಕರ ವಿರುದ್ಧ ಕಾಪಿರೈಟ್ ಆಕ್ಟ್ 1957 (U/s-51(1)(b) 63 ಕಲಂನಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
In a major crackdown on counterfeit sports goods, the Mangaluru South police, led by ACP Vijayakranti, raided the "Sports Winners" store located in the Smart City building at the heart of Thokottu and seized fake products bearing the names of reputed brands—Nivia, Cosco, Yonex, and VIVA.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm