ಬ್ರೇಕಿಂಗ್ ನ್ಯೂಸ್
06-09-25 10:37 am HK News Desk ಕ್ರೈಂ
ಮುಂಬೈ, ಸೆ.6 : ವಾಣಿಜ್ಯ ರಾಜಧಾನಿ ಮುಂಬೈಗೆ 14 ಮಂದಿ ಉಗ್ರರು ನುಗ್ಗಿದ್ದಾರೆಂಬ ಮಾಹಿತಿ ರವಾನೆಯಾಗಿದ್ದು ದೇಶದಲ್ಲಿ ಸಂಚಲನ ಎಬ್ಬಿಸಿದೆ. ಮುಂಬೈನಲ್ಲಿ ಗಣೇಶೋತ್ಸವ ಸಡಗರದ ನಡುವೆಯೇ ಉಗ್ರರು ದಾಳಿ ಬಗ್ಗೆ ಆತಂಕ ಮನೆ ಮಾಡಿದೆ.
ಭಯೋತ್ಪಾದಕರು ನಗರಕ್ಕೆ ಪ್ರವೇಶಿಸಿದ್ದು, ಸುಮಾರು 400 ಕೆ.ಜಿಯಷ್ಟು 'ಆರ್‌ಡಿಎಕ್ಸ್' ಅನ್ನು 34 ವಾಹನಗಳಲ್ಲಿ ಇರಿಸಿದ್ದಾರೆ ಎಂಬ ಬೆದರಿಕೆ ಸಂದೇಶವು ಮುಂಬೈ ನಗರದ ಸಂಚಾರ ಪೊಲೀಸರ ನಿಯಂತ್ರಣ ಕೊಠಡಿಯ ವಾಟ್ಸಪ್ ಸಂಖ್ಯೆಗೆ ಮಾಹಿತಿ ರವಾನೆಯಾಗಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ.
ಬೆದರಿಕೆ ಸಂದೇಶದ ಮೂಲ ಹಾಗೂ ಸತ್ಯಾಸತ್ಯತೆ ಕುರಿತು ಅಪರಾಧ ವಿಭಾಗ ತನಿಖೆ ಕೈಗೊಂಡಿದೆ. ಅಲ್ಲದೆ ಈ ಕುರಿತು ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮತ್ತು ಇತರ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂದೇಶ ಕಳಿಸಿದ ವ್ಯಕ್ತಿ 'ಲಷ್ಕರೆ-ಜಿಹಾದಿ' ಸಂಘಟನೆಗೆ ಸೇರಿರುವುದಾಗಿ ಉಲ್ಲೇಖಿಸಿದ್ದಾನೆ ಎಂದು ತಿಳಿಸಿದ್ದಾರೆ.
ಶನಿವಾರ ಅನಂತ ಚತುರ್ದಶಿಯಂದು ಮುಂಬೈನಲ್ಲಿ ನೂರಾರು ಗಣೇಶ ಮೆರವಣಿಗೆ, ವಿಸರ್ಜನೆಗೆ ಸಿದ್ಧತೆ ನಡೆಸಲಾಗಿದೆ. ಇದರ ನಡುವೆಯೇ 34 ವಾಹನಗಳಲ್ಲಿ ಆರ್ ಡಿಎಕ್ಸ್ ತುಂಬಿದ್ದು ಒಂದು ಕೋಟಿ ಜನರ ರಕ್ತ ಹರಿಸುತ್ತೇವೆಂದು ಬೆದರಿಕೆ ಹಾಕಿದ್ದು ಆತಂಕ ಮನೆ ಮಾಡಿದೆ. ಬೆದರಿಕೆ ಸಂದೇಶ ಬೆನ್ನಲ್ಲೇ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಎಲ್ಲ ಕಡೆ ತಪಾಸಣೆ ಬಿಗುಗೊಳಿಸಿದ್ದಾರೆ. ಅಲ್ಲದೆ, ಗಣೇಶ ವಿಸರ್ಜನೆ, ಪ್ರತಿಷ್ಠಾಪನೆ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಹಾಕಿದ್ದಾರೆ.
A major security alert has been sounded in Mumbai after intelligence inputs suggested that 14 militants linked to Lashkar have entered the city. The threat comes at a time when Mumbai is immersed in Ganesh Chaturthi celebrations, heightening concerns of a possible terror strike.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm