ಬ್ರೇಕಿಂಗ್ ನ್ಯೂಸ್
21-09-25 02:30 pm Bangalore Correspondent ಕ್ರೈಂ
ಬೆಂಗಳೂರು, ಸೆ.21: ಐಎಎಸ್ ಅಧಿಕಾರಿ ಮಣಿವಣ್ಣನ್ಅವರಿಗೂ ಸೈಬರ್ ವಂಚಕರ ಕಾಟ ಎದುರಾಗಿದೆ. ಮಣಿವಣ್ಣನ್ ಹೆಸರಿನಲ್ಲಿ ಫೇಸ್ ಬುಕ್ ಖಾತೆಯನ್ನು ತೆರೆದು, ಫರ್ನಿಚರ್ ಮಾರಾಟದ ಹೆಸರಿನಲ್ಲಿ ಆಪ್ತರನ್ನೇ ವಂಚಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಿ. ಮಣಿವಣ್ಣನ್ಗೆ ನಕಲಿ ಫೇಸ್ಬುಕ್ ಅಕೌಂಟ್ ಕಾಟ ಶುರುವಾಗಿದೆ. ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸೈಬರ್ ವಂಚನೆ ಮಾಡಲಾಗುತ್ತಿದೆ. ಒಂದಲ್ಲ, ಎರಡಲ್ಲ ,ನಾಲ್ಕಕ್ಕೂ ಹೆಚ್ಚು ನಕಲಿ ಖಾತೆಯನ್ನು ಈ ವಂಚಕರು ತೆರೆದಿದ್ದಾರೆ. ಎಲ್ಲಾ ಖಾತೆಗಳಲ್ಲಿಯೂ ಮಣಿವಣ್ಣನ್ ಅವರ ಹೆಸರು, ಫೂಟೋ ಬಳಸಲಾಗಿದೆ.
ಈ ಖಾತೆಗಳಿಂದ ಮಣಿವಣ್ಣನ್ ಹೆಸರಿನಲ್ಲಿ ಅವರ ಆಪ್ತರಿಗೆ , ಸ್ನೇಹಿತರಿಗೆ ಮೆಸೇಜ್ ಮಾಡುತ್ತಾರೆ. ನಮ್ಮ ಸ್ನೇಹಿತರು ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವರ್ಗಾವಣೆ ಆಗುತ್ತಿದೆ. ಹೀಗಾಗಿ ಅವರ ಮನೆಯ ಫರ್ನಿಚರ್ ಮಾರಾಟ ಮಾಡಬೇಕೆಂದಿದ್ದಾರೆ. ನಾನು ಒಮ್ಮೆ ನೋಡಿದ್ದೇನೆ. ನಿಮಗೆ ಬೇಕಾದರೆ ನೀವು ಖರೀದಿಸಬಹುದು ಎಂದು ತರಾವರಿ ಮೆಸೇಜ್ಗಳನ್ನು ಕಳುಹಿಸುತ್ತಾರೆ. ನಿಮ್ಮ ನಂಬರ್ ಕಳುಹಿಸಿ ನನ್ನ ಸ್ನೇಹಿತರೇ ನಿಮಗೆ ಕರೆ ಮಾಡುತ್ತಾರೆ ಎಂದು ಮೆಸೇಜ್ ಬರುತ್ತದೆ. ಹಿರಿಯ ಐಎಎಸ್ ಅಧಿಕಾರಿಯ ಮೆಸೇಜ್ ಎಂದು ನಂಬಿದ ಇಬ್ಬರು ಗೆಳೆಯರು ಮೋಸಕ್ಕೆ ಒಳಗಾಗಿದ್ದಾರೆ. ಕೇಸ್ ದಾಖಲಿಸಿಕೊಂಡ ಸೈಬರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಕಳೆದ 9 ತಿಂಗಳಿನಲ್ಲಿ ಮಣಿವಣ್ಣನ್ ಎರಡನೇ ಬಾರಿ ಸೈಬರ್ ವಂಚಕರ ದಾಳಿಗೆ ಸಿಲುಕಿದ್ದಾರೆ. 2ನೇ ಪ್ರಕರಣ ಇದಾಗಿದ್ದು, ಮೊದಲನೇ ಪ್ರಕರಣ 9 ತಿಂಗಳ ಹಿಂದೆ ನಡೆದಿತ್ತು. ಆಗಲೂ ಖದೀಮರು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದರು. ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಆಗ ಕೇಸ್ ಆಗುತ್ತಿದ್ದಂತೆ ಅಕೌಂಟ್ ಡಿಆ್ಯಕ್ಟಿವೇಟ್ ಮಾಡಿದ್ದ ವಂಚಕರು ಈಗ ಮತ್ತೆ ಅದೇ ಹಾದಿ ಹಿಡಿದಿದ್ದಾರೆ. ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೇಟ್ ಮಾಡುವಂತೆ ಪೊಲೀಸರಲ್ಲಿ ಮಣಿವಣ್ಣನ್ ಮನವಿ ಮಾಡಿದ್ದಾರೆ.
Senior IAS officer and Social Welfare Department Principal Secretary P. Manivannan has once again fallen prey to cyber fraudsters, who created fake Facebook accounts in his name and duped his close friends by sending fraudulent messages.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm