Accused Arrested for Opium Trafficking in Mangalore: ಸೆಂಟ್ರಲ್ ಎಸಿಪಿ ತಂಡ ಮತ್ತು ಬರ್ಕೆ ಪೊಲೀಸರ ಜಂಟಿ ಕಾರ್ಯಾಚರಣೆ ; ಓಪಿಯಂ ಮಾದಕ ದ್ರವ್ಯ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳ ಬಂಧನ 

25-09-25 08:18 pm       Mangalore Correspondent   ಕ್ರೈಂ

ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿ ತಂಡ ಮತ್ತು ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಗರದ ಕೊಡಿಯಾಲ್ ಬೈಲಿನ ಗುಜರಾತಿ ಶಾಲೆಯ ಗ್ರೌಂಡ್ ಬಳಿಯ ಭಗವತಿ ನಗರದ ಬಳಿ ನಿಷೇಧಿತ ಕಪ್ಪು ಬಣ್ಣದ ಓಪಿಯಂ ಮಾದಕ ಪದಾರ್ಥವನ್ನು ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಮಂಗಳೂರು, ಸೆ.25: ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿ ತಂಡ ಮತ್ತು ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಗರದ ಕೊಡಿಯಾಲ್ ಬೈಲಿನ ಗುಜರಾತಿ ಶಾಲೆಯ ಗ್ರೌಂಡ್ ಬಳಿಯ ಭಗವತಿ ನಗರದ ಬಳಿ ನಿಷೇಧಿತ ಕಪ್ಪು ಬಣ್ಣದ ಓಪಿಯಂ ಮಾದಕ ಪದಾರ್ಥವನ್ನು ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ವಾಸುದೇವ(48) ಮತ್ತು ಈತನಿಗೆ ಮಾದಕ ವಸ್ತುವನ್ನು ಪೂರೈಸಿದ್ದ ರಾಜಸ್ಥಾನ್ ಮೂಲದ ಮಂಗಲ್ ಚೌಧರಿ(44) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು ನಲ್ವತ್ತು ಸಾವಿರ ರೂಪಾಯಿ ಬೆಲೆಬಾಳುವ 151 ಗ್ರಾಂ ಓಪಿಯಂ ಮಾದಕ ವಸ್ತು, 2 ಮೊಬೈಲ್, ಒಂದು ದ್ಬಿಚಕ್ರ ವಾಹನ ವಶಪಡಿಸಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಆ ಕ್ರ 99/25 ರಂತೆ ಪ್ರಕರಣ ದಾಖಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ಮಂಗಳೂರು ಕೇಂದ್ರ ಉಪ ವಿಭಾಗದ ಅಪರಾಧ ವಿಭಾಗ ಮತ್ತು ಬರ್ಕೆ ಠಾಣೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

In a joint operation, the Central ACP subdivision team and Barke Police arrested two Rajasthan-origin accused for trafficking opium near Bhagavathi Nagar, close to the Gujarati School Grounds in Kodialbail, Mangaluru.