ಬ್ರೇಕಿಂಗ್ ನ್ಯೂಸ್
28-09-25 12:25 pm Mangalore Correspondent ಕ್ರೈಂ
ಮಂಗಳೂರು, ಸೆ.28: ನಗರದ ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರ ಸಿಬ್ಬಂದಿ ಮುಸ್ತಫ ಎಂಬವರನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿ ದರೋಡೆ ಮಾಡಿದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.26ರಂದು ರಾತ್ರಿ 8.30ರ ವೇಳೆಗೆ ಅಂಗಡಿಯಿಂದ ಸುಮಾರು 15 ಕೋಟಿ ರೂ. ಮೌಲ್ಯದ 1,650 ಗ್ರಾಂ ತೂಕದ ಮೆಲ್ಟ್ ಮಾಡಿದ ಚಿನ್ನವನ್ನು ಶುದ್ಧ ಚಿನ್ನವಾಗಿ ಪರಿವರ್ತಿಸಲು ರಥಬೀದಿಯ ಸಂತೋಷ್ ಎಂಬವರ ಚಿನ್ನದ ಅಂಗಡಿಗೆ ಮುಸ್ತಾಫ ಅವರು ತನ್ನ ಸ್ಕೂಟರ್‌ನ ಸೀಟಿನ ಅಡಿಯ ಡಿಕ್ಕಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದರು. ಜಿಎಚ್‌ಎಸ್ ರಸ್ತೆಯ ಮೂಲಕ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ತಲುಪಿದಾಗ ಹಿಂದಿನಿಂದ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮುಸ್ತಾಫ ಅವರ ಸ್ಕೂಟರ್ ಅಡ್ಡವಾಗಿ ಇಟ್ಟು ನನ್ನ ವಾಹನಕ್ಕೆ ಯಾಕೆ ತಾಗಿಸಿಕೊಂಡು ಹೋಗುತ್ತೀಯಾ ಎಂದು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.
ತಲವಾರು ತೋರಿಸಿ ಬೆದರಿಕೆ
ಸ್ಕೂಟರ್ ಸವಾರನ ವರ್ತನೆಗೆ ಮುಸ್ತಾಫ ಗಾಬರಿಗೊಂಡಿದ್ದು, ಆ ವೇಳೆ ಹಿಂದಿನಿಂದ ಬಿಳಿ ಬಣ್ಣದ ಕಾರಿನಲ್ಲಿ ಬಂದ ನಾಲ್ವರ ಪೈಕಿ ಒಬ್ಬ ಕಾರಿನಿಂದ ಇಳಿದು, ಅವರ ಪ್ಯಾಂಟ್ ಎಳೆದಿದ್ದು, ಆಗ ಮೊಬೈಲ್ ಕೆಳಗೆ ಬಿದ್ದಿದೆ. ಬಳಿಕ ತಲವಾರು ತೋರಿಸಿ ಬೆದರಿಸಿ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹೋಗಿದ್ದಾರೆ.
ಈ ವೇಳೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರ ಪೈಕಿ ಹಿಂಬದಿ ಸವಾರ ಅವರ ಕೆಳಗೆ ಬಿದ್ದಿದ್ದ ಮೊಬೈಲ್ ತೆಗೆದುಕೊಂಡು ಮುಸ್ತಫಾ ಅವರ ಸ್ಕೂಟರ್‌ನಲ್ಲೇ ಕಾರನ್ನು ಹಿಂಬಾಲಿಸಿ ಬಂದಿದ್ದಾರೆ. ದಾರಿ ಮಧ್ಯದಲ್ಲಿ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಸ್ಪೇಟ್ ಬ್ಯಾಂಕ್, ಪಾಂಡೇಶ್ವರ ಮಾರ್ಗವಾಗಿ ಗೋರಿಗುಡ್ಡ ಉಜ್ಜೋಡಿ ಫೈ ಓವರ್ ರಸ್ತೆಯ ಕೆಳಗಡೆಯಿಂದ ಸರ್ವಿಸ್ ರಸ್ತೆಯಲ್ಲಿ ಸಾಗಿದ್ದು, ಈ ವೇಳೆ ಬಂಗಾರದ ಗಟ್ಟಿಯ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ದ್ವಿಚಕ್ರ ವಾಹನದಲ್ಲಿ ಇರುವುದಾಗಿ ತಿಳಿಸಿದ್ದು, ಕಾರು ಎಕ್ಕೂರು ಬಳಿ ತಲುಪಿದಾಗ ಹಿಂಬಾಲಿಸಿಕೊಂಡು ಬಂದ ದ್ವಿಚಕ್ರ ವಾಹನದಲ್ಲಿದ್ದ ಆರೋಪಿ ಬಂಗಾರದ ಗಟ್ಟಿಯನ್ನು ಕಾರಿನಲ್ಲಿ ಕುಳಿತವರಿಗೆ ನೀಡಿದ್ದಾನೆ.
ರಾತ್ರಿ ಸುಮಾರು 9.15ರ ವೇಳೆಗೆ ಮುಸ್ತಾಫ ಅವರನ್ನು ಕಾರಿನಿಂದ ಇಳಿಸಿ ಸ್ಕೂಟರನ್ನು ಅಲ್ಲೇ ಬಿಟ್ಟು ತೊಕ್ಕೊಟ್ಟು ಕಡೆಗೆ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಮುಸ್ತಫಾ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅಂಗಡಿಯ ಮ್ಯಾನೇಜರ್‌ಗೂ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದು ಮುಸ್ತಫ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಳಿವು ಲಭ್ಯ, ಶೀಘ್ರವೇ ಸೆರೆ ; ಕಮಿಷನರ್
ಚಿನ್ನಾಭರಣ ಅಂಗಡಿ ಸಿಬ್ಬಂದಿಯ ಅಪಹರಿಸಿದ್ದಲ್ಲದೆ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ಲಭ್ಯವಾಗಿದೆ. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿ ಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಗರ ಅಪರಾಧ ಪತ್ತೆ ದಳ ಮತ್ತು ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿನ್ನಾಭರಣ ಅಂಗಡಿಯ ಜತೆ ನಂಟು ಇದ್ದ ವ್ಯಕ್ತಿಗಳೇ ಈ ಕೃತ್ಯವೆಸಗಿರುವ ಬಗ್ಗೆ ಮಾಹಿತಿ ಲಭಿಸಿದೆ. ದರೋಡೆ ಯೋಜನೆ ರೂಪಿಸಿದ ವ್ಯಕ್ತಿ ಮತ್ತು ಆರೋಪಿಗಳ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿದೆ. ಒಂದೆರಡು ದಿನದಲ್ಲಿ ಆರೋಪಿಗಳ ಬಂಧನವಾಗುವ ಸಾಧ್ಯತೆಯಿದೆ ಎಂದರು.
A gold heist worth ₹1.5 crore has been reported in the city, where miscreants kidnapped a jewelry shop employee and fled with 1,650 grams of gold. The crime is suspected to have been carried out by persons known to the shop.
28-09-25 12:39 pm
Bangalore Correspondent
ದಾವಣಗೆರೆಗೆ ಕಾಲಿಟ್ಟ 'ಐ ಲವ್ ಮೊಹಮ್ಮದ್ʼ ಫ್ಲೆಕ್ಸ್...
27-09-25 02:40 pm
ಪಿಐಎಲ್ ಹಾಕಿದವರಿಗೆ ಸುಪ್ರೀಂ ಕೋರ್ಟ್ ಬೈದು ಕಳುಹಿಸಿ...
27-09-25 02:20 pm
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಪಂಚಭೂತಗಳಲ್ಲ...
26-09-25 07:39 pm
ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಉಳಿದುಕೊಂಡಿದ್ದ...
26-09-25 07:37 pm
27-09-25 11:16 pm
HK News Desk
HDFC Banks Dubai branch: ಎಚ್ ಡಿಎಫ್ ಸಿ ದುಬೈ ಶಾ...
27-09-25 05:53 pm
ಧರ್ಮಸ್ಥಳ ಪ್ರಕರಣ ; ಕನ್ನಡ ಸುದ್ದಿವಾಹಿನಿಗಳಿಂದ ಸುಪ...
25-09-25 10:38 pm
'ಆಪರೇಶನ್ ಸಿಂಧೂರ' ಬಗ್ಗೆ ಪಾಕಿಸ್ತಾನದಲ್ಲಿ ಸುಳ್ಳಿನ...
25-09-25 05:09 pm
ಕೇರಳದಲ್ಲಿ ಹೆಚ್ಚುತ್ತಿರುವ 'ಮೆದುಳು ತಿನ್ನುವ ರೋಗ'...
25-09-25 05:05 pm
27-09-25 07:35 pm
Mangalore Correspondent
Puttur Baby News, DNA: ಸಹಪಾಠಿಗೆ ಮಗು ಕರುಣಿಸಿದ...
27-09-25 01:33 pm
Sandhya Shenoy: ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜ...
27-09-25 01:02 pm
ನಿಗಮ ಮಂಡಳಿಗೆ ನೇಮಕ ; ಮೆಸ್ಕಾಂ ಹರೀಶ್ ಕುಮಾರ್, ಕರಾ...
26-09-25 11:02 pm
Veerendra Heggade: ನಮ್ಮ ಹೊಳಪು ಹಾಗೇ ಉಳಿದಿದೆ, ಇ...
26-09-25 08:25 pm
28-09-25 12:25 pm
Mangalore Correspondent
Malpe Onwer Murder, AKMS: ಮಲ್ಪೆಯಲ್ಲಿ ಹಾಡಹಗಲೇ...
27-09-25 02:16 pm
ಐಐಎಸ್ಸಿ ವಿಜ್ಞಾನಿಗೇ ಸೈಬರ್ ದೋಖಾ ; ಮಹಿಳಾ ವಿಜ್ಞಾನ...
27-09-25 01:06 pm
Accused Arrested for Opium Trafficking in Man...
25-09-25 08:18 pm
ನಿವೃತ್ತ ಬ್ಯಾಂಕರ್ ಡಿಜಿಟಲ್ ಅರೆಸ್ಟ್ ; ತಿಂಗಳ ಕಾಲ...
23-09-25 11:01 am