ಬ್ರೇಕಿಂಗ್ ನ್ಯೂಸ್
28-09-25 11:08 pm Mangalore Correspondent ಕ್ರೈಂ
ಮಂಗಳೂರು, ಸೆ.28 : ಸಹಾಯ ಬೇಡಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡ ಸಮಿತ್ ರಾಜ್ ದರೆಗುಡ್ಡೆ ವಿರುದ್ಧ ಪ್ರಕರಣ ದಾಖಲಾಗಿದೆ.
2023ರಲ್ಲಿ ಸೋದರನಿಗೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಶಾಸಕರಿಂದ ನೆರವು ಕೊಡಿಸಲೆಂದು ಯುವತಿ, ಬೇರೊಬ್ಬರ ಮೂಲಕ ನಂಬರ್ ಪಡೆದು ಸಮಿತ್ ರಾಜ್ ನನ್ನು ಸಂಪರ್ಕಿಸಿದ್ದಳು. ಆನಂತರ ಶಾಸಕರು ಬಂದು ಸಹಾಯ ಮಾಡಿದರೂ, ಸಮಿತ್ ರಾಜ್ ಈಕೆಗೆ ಪದೇ ಪದೇ ಕರೆ ಮಾಡಲು ತೊಡಗಿದ್ದ. ಅಲ್ಲದೆ, ಮದುವೆಯಾಗುತ್ತೇನೆಂದು ಹೇಳಿ ಪ್ರೀತಿಸುವ ನಾಟಕ ಮಾಡಿದ್ದ. ಮನೆಯಲ್ಲಿ ಕೇಳಿ ಎಂದಿದ್ದಕ್ಕೆ ತಾಯಿ, ಆಕೆಗೆ ಸಣ್ಣ ವಯಸ್ಸು. ಈಗ ಮದುವೆ ಮಾಡಲ್ಲ ಎಂದಿದ್ದರು. ಆದರೆ ಸಮಿತ್ ಮಾತ್ರ ಯುವತಿಯ ಬೆನ್ನು ಬಿದ್ದಿದ್ದ.
ನಿರಂತರ ಫೋನ್ ಮಾಡುವುದು, ಕಾಲೇಜು ಬಳಿಗೆ ಬಂದು ಕಿರುಕುಳ ನೀಡುತ್ತಿದ್ದ. 2023ರ ಮಾರ್ಚ್ 23 ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ಸಮಿತ್ ರಾಜ್, ಆಕೆಯನ್ನು ಕರೆದುಕೊಂಡು ಬಜ್ಪೆ ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಬಟ್ಟೆ ಬಿಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದ.ಅಲ್ಲದೆ, ಈಕೆಯ ಅರೆ ನಗ್ನ ಫೋಟೊಗಳನ್ನು ತೆಗೆದಿದ್ದ. ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆಂದು ಹೇಳಿ ಬೆದರಿಕೆ ಹಾಕಿದ್ದ.
ಆನಂತರ, ಅಶ್ಲೀಲ ಫೋಟೊಗಳನ್ನು ಜಾಲತಾಣದಲ್ಲಿ ಹಾಕುತ್ತೇನೆಂದು ಹೆದರಿಸಿ ಬರಲು ಹೇಳುತ್ತಿದ್ದ. ಅಲ್ಲದೆ, ನಗ್ನ ಫೋಟೊ ಕಳುಹಿಸಲು ಹೇಳಿ ಒತ್ತಾಯ ಮಾಡುತ್ತಿದ್ದ. ಈ ಬಗ್ಗೆ ಮೂಡುಬಿದ್ರೆ ಶಾಸಕರಿಗೆ ಹೇಳುತ್ತೇನೆ ಎಂದರೆ, ಅವರು ನಾನು ಹೇಳಿದಾಗೆ ಇದ್ದಾರೆ, ನನ್ನನ್ನು ಬಿಟ್ಟು ಹಾಕುವುದಿಲ್ಲ. ನಾನು ಹೇಳಿದರೆ ಸ್ಟೇಶನಿಗೂ ಬರುತ್ತಾರೆ, ನಾನು ಹಿಂದು ಜಾಗರಣ ವೇದಿಕೆ ಜಿಲ್ಲಾ ಮುಖಂಡನಾಗಿದ್ದು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿ ಬೆದರಿಸಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ಇದೇ ಸಮಿತ್ ರಾಜ್ ವಿರುದ್ಧ ದಾಖಲಾದ ಪ್ರಕರಣ ಸಂಬಂಧಿಸಿ ಆತನ ಮೊಬೈಲ್ ಚೆಕ್ ಮಾಡಿದಾಗ ನೂರಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು.
A fresh case has been registered against Hindu Jagarana Vedike leader Sumit Raj Daregudde at Moodbidri police station for allegedly sexually assaulting a young woman under the pretext of marriage. According to the complaint, the accused befriended the woman in 2023 after she sought help for her injured brother, and later harassed her with persistent calls and visits. He allegedly lured her into a car near Bajpe airport, attempted rape, and took semi-nude photos to blackmail her.
31-12-25 02:35 pm
Bangalore Correspondent
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಚಕ್ರವರ್ತಿ ಸೂಲಿ...
30-12-25 11:12 pm
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 03:35 pm
Mangalore Correspondent
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
31-12-25 07:05 pm
Mangalore Correspondent
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm
ಪುತ್ತೂರಿನ ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳ...
31-12-25 05:48 pm
ಸ್ಟಾಕ್ ಮಾರ್ಕೆಟ್ ಹೆಸ್ರಲ್ಲಿ ವಂಚಕರಿಂದ ಪಂಗನಾಮ ; 5...
30-12-25 10:40 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm