Udupi, Karkala, Youth suicide: ಖಾಸಗಿ ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ; ನಾಲ್ವರ ಹೆಸರು ಬರೆದಿಟ್ಟು ಸಾವಿಗೆ ಶರಣಾದ ಕಾರ್ಕಳದ ಯುವಕ !

10-10-25 09:48 pm       Udupi Correspondent   ಕ್ರೈಂ

ಖಾಸಗಿ ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ನಡೆಸುತ್ತಿದ್ದ ಸ್ನೇಹಿತರಿಗೆ ಹೆದರಿ ಯುವಕನೊಬ್ಬ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಠಾಣೆ ವ್ಯಾಪ್ತಿಯ ಬೆಳ್ಮಣ್ ನಲ್ಲಿ ನಡೆದಿದೆ.

ಉಡುಪಿ, ಅ.10 : ಖಾಸಗಿ ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ನಡೆಸುತ್ತಿದ್ದ ಸ್ನೇಹಿತರಿಗೆ ಹೆದರಿ ಯುವಕನೊಬ್ಬ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಠಾಣೆ ವ್ಯಾಪ್ತಿಯ ಬೆಳ್ಮಣ್ ನಲ್ಲಿ ನಡೆದಿದೆ.

ಅ.9ರ ಗುರುವಾರ ಸಂಜೆ ಬೆಳ್ಮಣ್ ನಲ್ಲಿರುವ ಲಾಡ್ಜ್ ನಲ್ಲಿ ಅಭಿಷೇಕ್ ಆಚಾರ್ಯ (23) ಎಂಬ ಯುವಕ ಸಾವಿಗೆ ಶರಣಾಗಿದ್ದಾನೆ. ಅಭಿಷೇಕ್ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು ಈ ವೇಳೆ ಸ್ಥಳೀಯ ಹುಡುಗಿಯೊಂದಿಗೆ ಸ್ನೇಹದಲ್ಲಿದ್ದ. ಇವರು ಜೊತೆಗಿದ್ದಾಗ ತಮ್ಮದೇ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗುತ್ತಿದ್ದು, ಅದು ಅಭಿಷೇಕ್ ಸ್ನೇಹಿತರಿಗೆ ಸಿಕ್ಕಿತ್ತು.

ಆ ವಿಡಿಯೋ ಮುಂದಿಟ್ಟು ಜಾಲತಾಣದಲ್ಲಿ ಹರಿಯ ಬಿಡುತ್ತೇವೆ ಎಂದು ಹೇಳಿ ಬೆದರಿಕೆ ಹಾಕಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಯುವಕ ಡೆತ್ ನೋಟ್ ಬರೆದಿಟ್ಟು ಅದರಲ್ಲಿ ಬ್ಲಾಕ್ಮೇಲ್ ಮಾಡಿದ್ದ ನಾಲ್ವರ ಹೆಸರನ್ನೂ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಡೆತ್ ನೋಟ್ ಮತ್ತು ಆತನ ಮೊಬೈಲನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ತಪಾಸಣೆ ಬಳಿಕ ಸಾವಿನ ಹಿಂದಿನ ಕಾರಣ ಸಿಗಬಹುದೆಂದು ಪೊಲೀಸರು ತಿಳಿಸಿದ್ದಾರೆ.

A 23-year-old youth allegedly died by suicide in a Belman lodge under Karkala police limits after being blackmailed by friends using his private video.  The deceased has been identified as Abhishek Acharya (23), who worked in a private company in Mangaluru. Police said Abhishek was in a relationship with a local girl, and a personal video of the two was recorded