Mangalore, Loan Fraud, Fake Gold: ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ನಕಲಿ ಚಿನ್ನ ಅಡವಿರಿಸಿ ವಂಚನೆ ; ಮೂವರು ಆರೋಪಿಗಳ ಬಂಧನ, 5 ಲಕ್ಷ ನಗದು, 45 ಗ್ರಾಮ್ ನಕಲಿ ಚಿನ್ನದ ಒಡವೆಗಳು ವಶಕ್ಕೆ 

12-10-25 03:52 pm       Mangalore Correspondent   ಕ್ರೈಂ

ಕಾವೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವನ್ನು ಅಡಮಾನವಿರಿಸಿ 6.24 ಲಕ್ಷ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಮಂಗಳೂರು, ಅ.12 : ಕಾವೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವನ್ನು ಅಡಮಾನವಿರಿಸಿ 6.24 ಲಕ್ಷ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಆಕಾಶಭವನ ನಿವಾಸಿ ಹಾರಿಫ್ ಅಬುಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮಹಮ್ಮದ್ ಆಶೀಕ್ ಕಟ್ಟತ್ತಾರ್ (34), ಪುತ್ತೂರು ಬೆಳಂದೂರು ನಿವಾಸಿ ಅಬ್ದುಲ್ ರಮೀಜ್ (33) ಬಂಧಿತರು. ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನವನ್ನು ಅಡವಿಟ್ಟು ಇವರು ಆತ್ಮಶಕ್ತಿ ಸಹಕಾರಿ ಸಂಘದಲ್ಲಿ 6.24 ಲಕ್ಷ ರು. ಸಾಲ ಪಡೆದಿದ್ದರು. 

ನಕಲಿ ಚಿನ್ನದ ಮಾಹಿತಿ ಸಿಗುತ್ತಿದ್ದಂತೆ ಸೊಸೈಟಿ ಕಡೆಯಿಂದ ಕಾವೂರು ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದು ಅವರಿಂದ 5 ಲಕ್ಷ ನಗದು, 45 ಗ್ರಾಮ್ ನಕಲಿ ಚಿನ್ನದ ಒಡವೆಗಳು, 20 ಲಕ್ಷ ಮೌಲ್ಯದ ಒಂದು ಕಾರು, ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸೊತ್ತಿನ ಒಟ್ಟು ಮೌಲ್ಯ 26.50 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ. ಕಾವೂರು ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಬೈಂದೂರು, ಎಸ್ಐ ಮಲ್ಲಿಕಾರ್ಜುನ ಬಿರಾದಾರ ಹಾಗೂ ಎಎಸ್ಐಗಳಾದ ಚಂದ್ರಹಾಸ ಸನಿಲ್, ಸಂಬಾಜೆ ಕದಂ, ಕೆಂಚನ್ ಗೌಡ, ಪ್ರಮೋದ್ ಕುಮಾರ್, ಪೇದೆಗಳಾದ ನಾಗರಾಜ ಬೈರಗೊಂಡ, ಪ್ರವೀಣ್, ರಿಯಾಜ್, ತೀರ್ಥಪ್ರಸಾದ್, ಆನಂದ ಅವರಿದ್ದ ತಂಡವು ಕಾರ್ಯಾಚರಣೆ ನಡೆಸಿದೆ.

Mangaluru police have arrested three men for defrauding the Atmashakti Multipurpose Cooperative Society in Kavoor by pledging fake gold ornaments to secure a ₹6.24 lakh loan. The accused Harif Abubakker (39) of Aakash Bhavan, Mohammed Ashiq Kattathar (34) of Bikarnakatte, and Abdul Rameez (33) of Belandur, Puttur  were caught after the society discovered the pledged gold was counterfeit.