Fake Gold Scam, Belthangady Anugraha Society: ಬೆಳ್ತಂಗಡಿ ಅನುಗ್ರಹ ಸೊಸೈಟಿಗೂ ನಕಲಿ ಚಿನ್ನ ; ಪುತ್ತೂರಿನ ಅಬ್ದುಲ್ ರಮೀಜ್ ಮೇಲೆ ಮತ್ತೊಂದು ಕೇಸು, ಬೇರೆ ಬೇರೆ ಕಡೆ ನಕಲಿ ಚಿನ್ನ ಅಡವಿಟ್ಟು ಮೋಸ ಪತ್ತೆ, ನಕಲಿ ಜಾಲದ ಬಗ್ಗೆ ಸೊಸೈಟಿಗಳದ್ದು ದಿವ್ಯ ಮೌನ ! 

18-10-25 03:27 pm       Mangalore Correspondent   ಕ್ರೈಂ

ಇಲ್ಲಿನ ಸಂತೆಕಟ್ಟೆ ಸಮೀಪ ಕಾರ್ಯಾಚರಿಸುತ್ತಿರುವ ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖೆಯಲ್ಲೂ ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿದ ಘಟನೆ ನಡೆದಿದೆ.‌

ಬೆಳ್ತಂಗಡಿ, ಅ.18: ಇಲ್ಲಿನ ಸಂತೆಕಟ್ಟೆ ಸಮೀಪ ಕಾರ್ಯಾಚರಿಸುತ್ತಿರುವ ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖೆಯಲ್ಲೂ ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿದ ಘಟನೆ ನಡೆದಿದೆ.‌ ಅಬ್ದುಲ್ ರಮೀಜ್ ಎಂಬಾತ ರೂ. 4,75,750 ಸಾಲ ಪಡೆದು ವಂಚಿಸಿರುವ ಬಗ್ಗೆ ಸಂಘದ ವ್ಯವಸ್ಥಾಪಕ ಪ್ರವೀಣ್ ಕ್ಲಿಫರ್ಡ್ ಪಾಯಸ್ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖೆಯಲ್ಲಿ ನಕಲಿ ಚಿನ್ನದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸಂಘದ ವ್ಯವಸ್ಥಾಪಕ ಪ್ರವೀಣ್ ಕ್ಲಿಪರ್ಡ್ ಪಾಯಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಅಬ್ದುಲ್ ರಮೀಜ್ ಎಂಬಾತ 2025 ಸೆಪ್ಟೆಂಬರ್ ತಿಂಗಳ 9 ರಂದು ಮತ್ತು ಅಕ್ಟೋಬರ್ ತಿಂಗಳ 8 ರಂದು ಸಹಕಾರ ಸಂಘಕ್ಕೆ ಬಂದು ಕ್ರಮವಾಗಿ 22.900 ಗ್ರಾಂ ಮತ್ತು 33.910 ಗ್ರಾಂ ತೂಕದ ಚಿನ್ನಾಭರಣವೆಂದು ನಂಬಿಸಿ ಚಿನ್ನವನ್ನು ಅಡವಿಟ್ಟು, ಕ್ರಮವಾಗಿ ರೂ. 1,91,000 ರೂ ಮತ್ತು ರೂ. 2,84,750 ರೂ. ಸಾಲ ಪಡೆದಿದ್ದಾನೆ. ಅ.14 ರಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಅಬ್ದುಲ್ ರಮೀಜ್ ಮಂಗಳೂರಿನ ಇತರೇ ಸಹಕಾರಿ ಸಂಸ್ಥೆಗಳಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಸಾಲ ಪಡೆದು ಮೋಸ ಮಾಡಿರುವ ವಿಚಾರ ತಿಳಿದುಬಂದಿತ್ತು. 

ಇದರಿಂದ ಸಂಶಯಗೊಂಡು ಬೆಳ್ತಂಗಡಿ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಆರೋಪಿ ಇಟ್ಟಿದ್ದ ಚಿನ್ನವನ್ನು ಪರಿಶೀಲಿಸಿದಾಗ ನಕಲಿ ಎಂಬುದು ಪತ್ತೆಯಾಗಿತ್ತು. ಒಟ್ಟು 56.810 ಗ್ರಾಂ ತೂಕದ ನಕಲಿ ಚಿನ್ನಾಭರ ಇಟ್ಟಿದ್ದು ರೂ.4,75,750 ಸಾಲ ಪಡೆದಿದ್ದಾನೆ. ಬ್ಯಾಂಕ್ ವ್ಯವಸ್ಥಾಪಕರ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಕಾವೂರಿನ ಆತ್ಮಶಕ್ತಿ ಸಹಕಾರಿ ಸಂಘ ಮತ್ತು ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ಇದೇ ಅಬ್ದುಲ್ ರಮೀಜ್ ನಕಲಿ ಚಿನ್ನ ಇಟ್ಟು ದೊಡ್ಡ ಮೊತ್ತದ ಸಾಲ ಪಡೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

The Belthangady branch of Ujire Anugraha Multipurpose Co-operative Society has become the latest victim of a fake gold loan scam involving Abdul Rameez of Puttur. The accused allegedly pledged fake gold ornaments weighing 56.810 grams and obtained a loan of ₹4,75,750 from the society.