Mulki Fraud, Mangalore Police: ಹಣ ಡಬಲ್ ಆಮಿಷದಲ್ಲಿ ಹೂಡಿಕೆ ಸ್ಕೀಮ್ ; ಹಲವರಿಗೆ ಕೋಟ್ಯಂತರ ರೂ‌ಪಾಯಿ ವಂಚನೆ, ಮುಲ್ಕಿಯ ಕ್ರೈಸ್ತ ದಂಪತಿ ಅರೆಸ್ಟ್, ಮುಂಬೈನಲ್ಲಿ ಅಡಗಿದ್ದವರು ಕಡೆಗೂ ಪೊಲೀಸ್ ಬಲೆಗೆ 

21-10-25 10:51 pm       Mangalore Correspondent   ಕ್ರೈಂ

ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಆಗುತ್ತೆ, ದೊಡ್ಡ ಮಟ್ಟದ ಲಾಭ ಸಿಗುತ್ತದೆ ಎಂದು ನಂಬಿಸಿ ಹಲವಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಮುಲ್ಕಿ ಪೊಲೀಸರು ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. 

ಮಂಗಳೂರು, ಅ.21 : ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಆಗುತ್ತೆ, ದೊಡ್ಡ ಮಟ್ಟದ ಲಾಭ ಸಿಗುತ್ತದೆ ಎಂದು ನಂಬಿಸಿ ಹಲವಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಮುಲ್ಕಿ ಪೊಲೀಸರು ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. 

ಕವತ್ತಾರು ನಿವಾಸಿಗಳಾದ ರಿಚರ್ಡ್ ಡಿಸೋಜ (52) ಮತ್ತು ಆತನ ಪತ್ನಿ ರಶ್ಮಿ ರೀಟಾ ಪಿಂಟೋ (47) ಬಂಧಿತರು. ಇನ್ವೆಸ್ಟ್ ಮೆಂಟ್ ಸ್ಕೀಮ್ ಹೆಸರಲ್ಲಿ ಹಲವಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಮತ್ತು ಒಡವೆಯನ್ನು ಪಡೆದು ವಂಚಿಸಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಕಂಪನಿ ಹೆಸರಲ್ಲಿ ಇವರು ಜನರನ್ನು ಇನ್ವೆಸ್ಟ್ ಮಾಡುವಂತೆ ಪ್ರೇರೇಪಣೆ ಮಾಡುತ್ತಿದ್ದರು.‌

ಹಣ ವಂಚನೆ ಮಾಡಿದ ಬಗ್ಗೆ ದಂಪತಿ ವಿರುದ್ಧ 2024ರಲ್ಲಿ ಮತ್ತು 2025ರಲ್ಲಿ ಎರಡು ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಆರೋಪಿ ದಂಪತಿ ಮುಂಬೈಗೆ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದರು. ಮುಲ್ಕಿ ಪೊಲೀಸರು ಬೆನ್ನು ಹತ್ತಿ ಇಬ್ಬರನ್ನೂ ಮುಂಬೈನಲ್ಲಿ ಅರೆಸ್ಟ್ ಮಾಡಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ರಿಚರ್ಡ್ ಡಿಸೋಜಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ವಂಚನೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ದಂಪತಿಯಿಂದ ಮೋಸಕ್ಕೊಳಗಾದವರು ಇದ್ದರೆ ಬಂದು ದೂರು ನೀಡಿ ಸಾಕ್ಷ್ಯಗಳನ್ನು ನೀಡಬಹುದು ಎಂದು ಮುಲ್ಕಿ ಪೊಲೀಸರು ತಿಳಿಸಿದ್ದಾರೆ.

Mulki police have arrested a couple, Richard D’Souza (52) and his wife Rashmi Rita Pinto (47), for allegedly running a fake investment scheme that duped several people of crores of rupees and gold ornaments. The couple had promised to double investors’ money through a bogus company.