ಬ್ರೇಕಿಂಗ್ ನ್ಯೂಸ್
25-10-25 02:14 pm Mangaluru Correspondent ಕ್ರೈಂ
ಮಂಗಳೂರು, ಅ.25: ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಗೋಸಾಗಾಟ ತಡೆ ಮತ್ತು ಅದರಲ್ಲಿದ್ದ ಚಾಲಕನಿಗೆ ಗುಂಡು ಹಾರಿಸಿದ ಪ್ರಕರಣದ ಕುರಿತಾಗಿ ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಸ್ಪಷ್ಟನೆ ನೀಡಿದ್ದು ವಿಚಾರಣೆಯ ಸಂದರ್ಭದಲ್ಲಿ ತಿಳಿದುಬಂದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅರುಣ್ ಪುತ್ತಿಲ ಗೋವುಗಳನ್ನು ಇಳಿಸಲು ಪೊಲೀಸರಿಗೆ ನೆರವಾದ ವಿಚಾರದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.
ಗೋವು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಹಿಂಬಾಲಿಸಿ ಬಳಿಕ ನಿಲ್ಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ನಿಲ್ಲಿಸುವಲ್ಲಿ ಯಾವುದೇ ಖಾಸಗಿ ಸಂಸ್ಥೆಯ ಪಾತ್ರ ಇರುವುದಿಲ್ಲ ಅಥವಾ ಯಾವುದೇ ಸಂಸ್ಥೆಯ ಸಹಕಾರವನ್ನು ಪೊಲೀಸರು ಪಡೆದಿರುವುದು ಕಂಡುಬಂದಿಲ್ಲ. ಪ್ರಕರಣವನ್ನು ನ್ಯಾಯಸಮ್ಮತ ತನಿಖೆಗಾಗಿ ಮರು ದಿನವೇ ಪುತ್ತೂರು ಉಪ ವಿಭಾಗದ ವ್ಯಾಪ್ತಿಯಿಂದ ಬೇರೆ ಕಡೆಗೆ ವರ್ಗಾಯಿಸಲಾಯಿತು.
ಘಟನೆಯ ನಂತರ ಪಿಎಸ್ಐ ಬೆಳ್ಳಾರೆ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದರು. ಉಳಿದ ಅಧಿಕಾರಿಗಳು ತನಿಖಾ ಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸುತ್ತಿದ್ದರು. ಇದೇ ವೇಳೆ, ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಅದರಲ್ಲಿರುವ ಇತರ ಜಾನುವಾರುಗಳನ್ನು ಇಳಿಸಬಹುದೇ ಎಂದು ಪೊಲೀಸ್ ಸಿಬಂದಿಗೆ ಕೇಳಿದ್ದಾರೆ. ನಂತರ ಅಲ್ಲಿದ್ದ ಕಾನ್ಸ್ಟೇಬಲ್, ಠಾಣೆಯ ಇನ್ಸ್ಪೆಕ್ಟರ್ಗೆ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್ ಪುತ್ತಿಲ ಕಾನ್ಸ್ಟೇಬಲ್ ಅವರಲ್ಲಿದ್ದ ಮೊಬೈಲ್ ಕೇಳಿ ಪಡೆದು ಇನ್ಸ್ಪೆಕ್ಟರ್ ಜೊತೆ ಮಾತಾಡಿರುವುದಾಗಿದೆ. ಅದಕ್ಕೆ ಇನ್ಸ್ಪೆಕ್ಟರ್ ರವರು ಅನುಮತಿ ಕೊಟ್ಟಿರುತ್ತಾರೆ ಎಂದು ಕಂಡುಬಂದಿರುತ್ತದೆ.
ನಂತರ ಪೊಲೀಸರ ಜೊತೆಗೆ ಸ್ಥಳೀಯರು ಹಾಗೂ ಅರುಣ್ ಕುಮಾರ್ ಪುತ್ತಿಲ ಜಾನುವಾರುಗಳನ್ನು ವಾಹನದಿಂದ ಇಳಿಸುವ ಕೆಲಸ ಮಾಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ಬಗ್ಗೆ ಬೇರೆಯದೇ ರೀತಿಯಲ್ಲಿ ಪ್ರಚಾರಗೊಂಡಿರುತ್ತದೆ. ಲಾರಿಯಲ್ಲಿದ್ದ ಜಾನುವಾರುಗಳ ಇನ್ನಷ್ಟು ಸಾವನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ನಿರೀಕ್ಷಕರು ಅನುಮತಿ ಕೊಟ್ಟಿರುವುದು ಕಂಡುಬಂದಿರುತ್ತದೆ. ಪ್ರಕರಣದಲ್ಲಿ, ಯಾವುದೇ ಧಾರ್ಮಿಕ ಸಂಘಟನೆ ಅಥವಾ ವ್ಯಕ್ತಿಯೊಂದಿಗೆ ಪೊಲೀಸರ ಯಾವುದೇ ಸಹಭಾಗಿತ್ವ ಅಥವಾ ದುರುದ್ದೇಶ ಕಂಡುಬಂದಿಲ್ಲ. ಆದರೆ ದೂರವಾಣಿಯಲ್ಲಿ ಮಾತನಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ನಂತರ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶಗಳಿಗೆ ದಾರಿ ಮಾಡಿಕೊಡುವ ತಪ್ಪು ನಿರ್ಣಯ ತೆಗೆದುಕೊಂಡಿದ್ದಕ್ಕಾಗಿ ಇನ್ಸ್ಪೆಕ್ಟರ್ ಅವರಿಗೆ ಚಾರ್ಜ್ ಮೆಮೊ ನೀಡಲಾಗುತ್ತದೆ. ಮುಂದಿನ ದಿವಸಗಳಲ್ಲಿ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ಮಾಡಲು ಅವಕಾಶ ನೀಡದೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುವುದು.
ಪೊಲೀಸರು ಗೋಸಾಗಾಟದ ವಾಹನ ತಡೆದ ಘಟನೆಯನ್ನು ಎಲ್ಲರೂ ವಿಮರ್ಶೆ ಮಾಡಬಹುದು. ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡುಬಂದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಅರುಣ್ ಎಚ್ಚರಿಕೆ ನೀಡಿದ್ದಾರೆ.
Dakshina Kannada Superintendent of Police Dr. Arun has issued a clarification regarding the Puttur rural police station case involving the interception of a cattle transport vehicle and the firing incident that injured the driver. He shared details that emerged during the investigation and addressed questions surrounding the role of Arun Kumar Puthila in assisting police officers at the scene. According to SP Arun, the police pursued and stopped a vehicle transporting cattle and subsequently registered a case. He emphasized that no private organization was involved in stopping the vehicle, nor did the police receive assistance from any group or institution. To ensure a fair and impartial probe, the investigation was transferred the very next day outside the Puttur sub-division’s jurisdiction.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
25-10-25 02:28 pm
HK News Desk
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
25-10-25 05:02 pm
Mangalore Correspondent
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm