ಬ್ರೇಕಿಂಗ್ ನ್ಯೂಸ್
29-10-25 10:09 pm Bangalore Correspondent ಕ್ರೈಂ
ಬೆಂಗಳೂರು, ಅ 29 : ವರ್ತೂರು ಮತ್ತು ಬೆಳ್ಳಂದೂರಿನ ಕ್ರೋಮಾ ಶೋ ರೂಮ್‌ಗೆ ನುಗ್ಗಿ ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ವರ್ತೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಿಕ್ಕಿಂನ ದಿವಾಸ್ ಕಮಿ (22) ಮತ್ತು ಆತನ ಪ್ರೇಯಸಿ, ನೇಪಾಳದ ಅಸ್ಮಿತಾ(26), ದಿವಾಸ್ ಕಮಿ ಸ್ನೇಹಿತ ಅರೋಹಣ್ ತಾಪಾ (24) ಬಂಧಿತರು.
ಆರೋಪಿಗಳಿಂದ ₹40 ಲಕ್ಷ ಮೌಲ್ಯದ 39 ಮೊಬೈಲ್‌ಗಳು, ಡಿಜಿಟಲ್ ವಾಚ್‌ಗಳು, ಚಿನ್ನಾಭರಣ, ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ದಿವಾಸ್ ಕಮಿ ಮತ್ತು ಆರೋಹಣ್ ತಾಪಾ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಸ್ವಿಗ್ಗಿ ಡೆಲಿವರಿ ಹುಡುಗರಾಗಿ ಕೆಲಸ ಮಾಡುತ್ತಿದ್ದರು. ನೇಪಾಳದ ಅಸ್ಮಿತಾ ಅವರಿಗೆ ಮದುವೆಯಾಗಿದ್ದು, ಪತಿಯಿಂದ ದೂರವಾಗಿ ಒಂದು ವರ್ಷದಿಂದ ದಿವಾಸ್ ಕಮಿ ಜತೆಗೆ ಸಹ ಜೀವನ ನಡೆಸುತ್ತಿದ್ದರು. ಅಸ್ಮಿತಾ ಅವರು ಮನೆಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಫುಡ್ ಡೆಲಿವರಿ ಹುಡುಗರಾಗಿ ಕೆಲಸ ಮಾಡುತ್ತಿದ್ದ ದಿವಾಸ್ ಕಮಿ ಮತ್ತು ಆರೋಹಣ್ ತಾಪಾ ಕ್ರೋಮಾ ಮೊಬೈಲ್ ಅಂಗಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಬೆಳ್ಳಂದೂರು ಮತ್ತು ವರ್ತೂರಿನಲ್ಲಿರುವ ಕ್ರೋಮಾ ಶೋ ರೂಮ್‌ಗಳ ಬಗ್ಗೆ ಇತ್ತೀಚೆಗೆ ಮಾಹಿತಿ ಸಂಗ್ರಹಿಸಿದ್ದರು. ಅಕ್ಟೋಬರ್ ಮೊದಲ ವಾರದಲ್ಲಿ ಬೆಳ್ಳಂದೂರಿನ ಕ್ರೋಮಾ ಶೋ ರೂಮ್ ಮತ್ತು ವರ್ತೂರಿನ ಕ್ರೋಮಾ ಶೋ ರೂಮ್‌ನಲ್ಲಿ ಮೊಬೈಲ್ ಕಳವು ಮಾಡಿ, ತುರ್ತು ನಿರ್ಗಮನ ಬಾಗಿಲು ತೆರೆದು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ಕಳವು ಮಾಡುತ್ತಿದ್ದ ದುಬಾರಿ ಬೆಲೆಯ ಮೊಬೈಲ್‌ಗಳನ್ನು ಅಸ್ಮಿತಾಳಿಗೆ ನೀಡುತ್ತಿದ್ದರು ಅಸ್ಮಿತಾ ತನಗೆ ಪರಿಚಯವಿದ್ದವರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಳು. ಕೆಲವು ದಿನಗಳ ಹಿಂದೆ ಮೊಬೈಲ್ ಮಾರಾಟ ಮಾಡಿದ್ದ ಹಣದಲ್ಲಿ ಎಂಟು ಗ್ರಾಂ ಚಿನ್ನ ಖರೀದಿಸಿದ್ದ ದಿವಾಸ್ ಕಮಿ, ಪ್ರೇಯಸಿಗೆ ನೀಡಿದ್ದರು. ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ದಿವಾಸ್ ಕಮಿ ತನ್ನ ಪ್ರೇಯಸಿ ಅಸ್ಮಿತಾಗಾಗಿಯೇ ಮೊಬೈಲ್ ಕಳ್ಳತನ ಮಾಡಿದ್ದೆ ಎಂಬುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
In a bizarre love-driven crime, a young man stole high-end mobile phones from Croma showrooms in Varthur and Bellandur — all to please his girlfriend. The Varthur Police have arrested the accused along with his lover and an accomplice.
22-01-26 05:20 pm
HK News Desk
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
22-01-26 01:52 pm
HK News Desk
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೇರಳ, ಕರ್ನಾಟಕ, ತಮ...
21-01-26 11:10 am
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
22-01-26 02:55 pm
Mangalore Correspondent
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮ...
21-01-26 10:55 pm
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
22-01-26 02:40 pm
Bangalore Correspondent
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm