ವರದಕ್ಷಿಣೆಗಾಗಿ ದೌರ್ಜನ್ಯ- ಕಿರುಕುಳ ; ಗಂಡನ ಮನೆಯಲ್ಲೇ ನವ ವಿವಾಹಿತ ಯುವತಿ ಆತ್ಮಹತ್ಯೆ, ಚಿನ್ನಕ್ಕಾಗಿ ಪೀಡಿಸಿದ್ದ ಗಂಡ, ಅತ್ತೆ ಸೆರೆಮನೆಗೆ 

26-12-25 10:44 pm       Bangalore Correspondent   ಕ್ರೈಂ

ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಬೇಸತ್ತು ನವವಿವಾಹಿತ ತರುಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ. ನಾಗಮಂಗಲದ ಪೀಣ್ಯ ಮೂಲದ ಐಶ್ವರ್ಯಾ (26) ಆತ್ಮಹತ್ಯೆ ಮಾಡಿಕೊಂಡವರು. ಪ್ರಕರಣ ಸಂಬಂಧಿಸಿ ಆಕೆಯ ಪತಿ ಲಿಖಿತ್‌ ಸಿಂಹ, ಗಂಡನ ಸಹೋದರ ವರುಣ್‌ ಸಿಂಹ, ತಾಯಿ ಅರುಣಾ ಸಿಂಹರನ್ನು ಬಂಧಿಸಲಾಗಿದೆ.

ಬೆಂಗಳೂರು, ಡಿ.26 : ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಬೇಸತ್ತು ನವವಿವಾಹಿತ ತರುಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ. ನಾಗಮಂಗಲದ ಪೀಣ್ಯ ಮೂಲದ ಐಶ್ವರ್ಯಾ (26) ಆತ್ಮಹತ್ಯೆ ಮಾಡಿಕೊಂಡವರು. ಪ್ರಕರಣ ಸಂಬಂಧಿಸಿ ಆಕೆಯ ಪತಿ ಲಿಖಿತ್‌ ಸಿಂಹ, ಗಂಡನ ಸಹೋದರ ವರುಣ್‌ ಸಿಂಹ, ತಾಯಿ ಅರುಣಾ ಸಿಂಹರನ್ನು ಬಂಧಿಸಲಾಗಿದೆ.

ಐಶ್ವರ್ಯಾ ಬುಧವಾರ ಸಂಜೆ ತನ್ನ ಮನೆಯಲ್ಲೇ ಅನುಮಾನಾಸ್ಪದ ರೀತಿ ಮೃತಪಟ್ಟಿದ್ದಾರೆ. ಐಶ್ವರ್ಯ ತಂದೆ ಕೃಷ್ಣ ವರದಕ್ಷಿಣೆ ಹಾಗೂ ಹಲ್ಲೆ ಆರೋಪದಡಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾಗಮಂಗಲದ ಚೀಣ್ಯ ಮೂಲದ ಐಶ್ವರ್ಯ ಎಂಬಿಎ ವ್ಯಾಸಂಗ ಮಾಡಿದ್ದು, ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಮಲ್ಲಸಂದ್ರ ನಿವಾಸಿ ಲಿಖಿತ್‌ ಸಿಂಹನನ್ನು ಅಕ್ಟೋಬರ್‌ 26ರಂದು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲೇ ಹೆಚ್ಚಿನ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿದ್ದರು. ಮದುವೆಗೆ 18 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ, ಮದುವೆಯಾದ 15 ದಿನಕ್ಕೆ ಪತಿ ಮತ್ತು ಆತನ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ನೀಡಿ, ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಿಂದ ಬೇಸತ್ತ ಆಕೆ ತವರು ಮನೆಗೆ ಹೋಗಿ, ಪೋಷಕರ ಬಳಿ ಹೇಳಿಕೊಂಡಿದ್ದರು.

ಬಳಿಕ ಡಿ.24ರಂದು ಬೆಳಗ್ಗೆ ಆಕೆಯ ಪೋಷಕರು ಗಂಡನ ಮನೆಗೆ ಬಂದು ರಾಜಿ ಸಂಧಾನ ಮಾಡಿ ಹೋಗಿದ್ದರು. ಲಿಖಿತ್‌ ಮತ್ತು ಕುಟುಂಬ ಸದಸ್ಯರು ತವರು ಮನೆಯಿಂದ ಹಣ ಹಾಗೂ ಚಿನ್ನಾಭರಣ ತರುವಂತೆ ಐಶ್ವರ್ಯಾಗೆ ಕಿರುಕುಳ ಕೊಡುತ್ತಿದ್ದರು. ಲಿಖಿತ್‌, ಪತ್ನಿಯೊಂದಿಗೆ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡಿ ನಿಂದಿಸುತ್ತಿದ್ದರು. ವಿಷಯ ತಿಳಿದು ಐಶ್ವರ್ಯಾ ಕುಟುಂಬಸ್ಥರು ಲಿಖಿತ್‌ ಮನೆಗೆ ಬಂದು ಮಾತುಕತೆ ನಡೆಸಿ ಹೋಗಿದ್ದರು. ಆದರೆ, ಅದೇ ದಿನ ರಾತ್ರಿ 8 ಗಂಟೆ ಸುಮಾರಿಗೆ ಲಿಖಿತ್‌ ಕರೆ ಮಾಡಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾಗಿ ಯುವತಿ ಪೋಷಕರು ಆರೋಪಿಸಿದ್ದಾರೆ.

A 26-year-old newly married woman, Aishwarya from Nagamangala’s Peenya area, died by suicide at her husband’s residence in Bagalagunte, Bengaluru, allegedly due to dowry harassment and domestic abuse. Police have arrested her husband Likhith Singh, his brother Varun Singh, and their mother Aruna Singh following a complaint from Aishwarya’s father, Krishna.