ಬ್ರೇಕಿಂಗ್ ನ್ಯೂಸ್
13-01-26 03:37 pm HK News Desk ಕ್ರೈಂ
ನವದೆಹಲಿ, ಜ.13 : 'ಡಿಜಿಟಲ್ ಅರೆಸ್ಟ್' ನೆಪದಲ್ಲಿ ವೃದ್ಧ ವೈದ್ಯ ದಂಪತಿಯನ್ನು ವಂಚಿಸಿದ ಸೈಬರ್ ವಂಚಕರು ಬರೋಬ್ಬರಿ 14 ಕೋಟಿ ರೂಪಾಯಿ ದೋಚಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ವಾಸವಿರುವ ದಂಪತಿಗೆ ಪೊಲೀಸ್ ಅಧಿಕಾರಿಗಳು ಎಂದು ಹೇಳಿ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿದ್ದಾಗಿ ಹೇಳಿ ಹಣ ಕಿತ್ತುಕೊಂಡಿದ್ದಾರೆ.
ದಂಪತಿಗೆ ನೀವು ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರಿ, ನಿಮ್ಮ ಮೊಬೈಲ್ ನಿಂದ ಅಶ್ಲೀಲ ವಿಡಿಯೋ ರವಾನೆಯಾಗಿದೆ ಎಂದು ಹೇಳಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ ಮೊಬೈಲ್ ನಂಬರ್ ಕಟ್ ಆಗುತ್ತದೆ ಎಂದೂ ಹೇಳಿದ್ದರು. ವಿಡಿಯೊ ಕಾಲ್ ಮೂಲಕ ದಂಪತಿಗೆ ಕಿರುಕುಳ ನೀಡಿದ್ದಾರೆ. ಬಳಿಕ ದಂಪತಿಗೆ ವಿವಿಧ ಬ್ಯಾಂಕ್ ಖಾತೆಗಳನ್ನು ಕಳುಹಿಸಿ, ಅವರಿಂದ ಹಂತ ಹಂತವಾಗಿ 14 ಕೋಟಿ ರೂ. ವರ್ಗಾಯಿಸಿಕೊಂಡಿದ್ದಾರೆ.
ವೈದ್ಯ ದಂಪತಿ ಅಮೆರಿಕದಿಂದ ಹಿಂದಿರುಗಿದ್ದು ದೆಹಲಿಯ ಕೈಲಾಶ್ ನಲ್ಲಿ ವಾಸಿಸುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲೇ ನೆಲೆಸಿದ್ದಾರೆ. ಡಿಸೆಂಬರ್ 24ರಿಂದ ಜನವರಿ 9ರ ವರೆಗೆ ನಿರಂತರ ವಿಡಿಯೊ ಕರೆ ಮಾಡಿದ್ದು ಮುಂಬೈನಲ್ಲಿ ಕೇಸು ದಾಖಲಾಗಿದೆ ಎಂದು ಹೇಳಿ ವೃದ್ಧ ದಂಪತಿಗೆ ಬೆದರಿಕೆ ಹಾಕಿದ್ದರು. ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಲಿಕ್ಕಿದೆ ಎಂದು ಹೇಳಿ ಆರೋಪಿಗಳನ್ನ ಯಾಮಾರಿಸಿ ಮಾಹಿತಿ ಪಡೆದಿದ್ದರು.
ಪದೇ ಪದೇ ಕರೆ ಮಾಡಿ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಡಿಪಾಸಿಟ್ ಮಾಡಲು ಹೇಳುತ್ತಿದ್ದರು. ಮುಂಬೈನ ಕೊಲಾಬ ಠಾಣೆಯ ಅಧಿಕಾರಿ ಎಂದು ಹೇಳಿ ಪೊಲೀಸ್ ಬಟ್ಟೆ ಧರಿಸಿದ್ದ ವಿಕ್ರಮ್ ಸಿಂಗ್ ಎಂಬಾತ ನಿಮ್ಮ ವಿರುದ್ಧ ಮನಿ ಲಾಂಡರಿಂಗ್ ಕೇಸು ದಾಖಲಾಗಿದೆ ಎಂದು ಹೇಳಿದ್ದ. ನಾವು ಹೇಳಿದಂತೆ ಕೇಳಬೇಕೆಂದು ಹೇಳಿ ಬ್ಯಾಂಕ್ ಖಾತೆಯ ವಿವರ ಪಡೆದಿದ್ದರು ಎಂದು ದಂಪತಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಜನವರಿ 9ರ ವೇಳೆಗೆ ದಂಪತಿ ತಮಗಾದ ವಂಚನೆಯನ್ನು ಅರಿತು ಪೊಲೀಸರನ್ನು ಸಂಪರ್ಕಸಿ, ದೂರು ದಾಖಲಿಸಿದ್ದಾರೆ.
Cyber criminals posing as police officials duped an elderly doctor couple in Delhi of nearly ₹14 crore by threatening them with a so-called “digital arrest.” The fraudsters accused the couple of involvement in illegal activities and money laundering, harassed them through continuous video calls, and coerced them into transferring money to multiple bank accounts over several days.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm