ಬ್ರೇಕಿಂಗ್ ನ್ಯೂಸ್
15-01-26 11:07 pm Bangalore Correspondent ಕ್ರೈಂ
ಬೆಂಗಳೂರು, ಜ.15 : ದೇಶದ ಅತಿ ದೊಡ್ಡ ಸೈಬರ್ ವಂಚಕರ ಜಾಲವೊಂದನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದು, ಕೇವಲ 2-3 ವರ್ಷಗಳಲ್ಲಿ ಸಾವಿರ ಕೋಟಿಗೂ ಹೆಚ್ಚು ಮೋಸ ಮಾಡಿರುವ ಭಾರೀ ಸೈಬರ್ ವಂಚನೆಯನ್ನು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಬೆಂಗಳೂರಿನ ತಾಯಿ, ಮಗ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳ 12 ಮಂದಿಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಈವರೆಗೆ ದೇಶದ ವಿವಿಧೆಡೆ ಚಾಲ್ತಿಯಲ್ಲಿದ್ದ 4500 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದು, ಅವುಗಳಲ್ಲಿದ್ದ 240 ಕೋಟಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಬೆಂಗಳೂರು ಜೆಪಿ ನಗರದ ಅಂಜನಾಪುರ ನಿವಾಸಿ ಮೊಹಮ್ಮದ್ ಹುಝೈಫಾ(26), ಆತನ ತಾಯಿ ಶಬಾನಾ, ಉತ್ತರ ಪ್ರದೇಶದ ಅಂಕಿತ್ ಕುಮಾರ್ ಸಿಂಗ್, ಬಿಹಾರದ ಅಜಿತ್ ಕುಮಾರ್ ಯಾದವ್, ರಾಜಸ್ಥಾನದ ಅಭಿಷೇಕ್ ಸಿಂಗ್ ರಾಥೋಡ್, ವಿಶ್ವರಾಜ್ ಸಿಂಗ್ ಶೇಖಾವತ್, ಕುಶಾಲ್ ಸಿಂಗ್ ಚೌಹಾಣ್, ಸತ್ಯಂ ಕುಮಾರ್ ಪಾಂಡೆ, ಆಕಾಶ್ ಜೈಸ್ವಾಲ್, ಪ್ರದೀಪ್ ಸಿಂಗ್, ಪೀತಾಂಬರ್ ಸಿಂಗ್ ಮತ್ತು ಅಜಯ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 58 ಮೊಬೈಲ್ ಫೋನ್, ಏಳು ಲ್ಯಾಪ್ ಟಾಪ್, ಒಂಬತ್ತು ಸ್ಮಾರ್ಟ್ ವಾಚ್, 531 ಗ್ರಾಮ್ ಚಿನ್ನದ ಒಡವೆಗಳು, 4.89 ಲಕ್ಷ ನಗದು ಸೇರಿ ಒಂದು ಕೋಟಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಸೈಬರ್ ಫ್ರಾಡ್ ಜಾಲದ ಮಾಸ್ಟರ್ ಮೈಂಡ್ ಎನ್ನಲಾದ ಮುಂಬೈ ಮೂಲದ ಪ್ರೇಮ್ ತನೇಜಾ ದುಬೈನಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ತನೇಜಾ ಒಟ್ಟು ಜಾಲವನ್ನು ವಿದೇಶದಲ್ಲಿದ್ದುಕೊಂಡೇ ಕಂಟ್ರೋಲ್ ಮಾಡುತ್ತಿದ್ದ ಮತ್ತು ತನ್ನ ಪಾತ್ರ ಎಲ್ಲಿಯೂ ಕಾಣಿಸಿಕೊಳ್ಳದಂತೆ ಜಾಗ್ರತೆ ವಹಿಸಿದ್ದ.

ಬೆಳಕಿಗೆ ಬಂದಿದ್ದು ಹೇಗೆ ?
ಬೆಂಗಳೂರಿನ ಅಕ್ಷಯ್ ನಗರದ ವ್ಯಕ್ತಿಯೊಬ್ಬರು ಮೂರು ಕೋಟಿ ರೂ. ವಂಚನೆಯಾದ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸ್ಟಾಕ್ ಟ್ರೇಡಿಂಗ್ ಹೆಸರಲ್ಲಿ ತನ್ನನ್ನು ವಂಚಿಸಿದ್ದ ಬಗ್ಗೆ ಪೂರಕ ಮಾಹಿತಿಗಳನ್ನೂ ನೀಡಿದ್ದರು. ಇದರಂತೆ, ಇಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್ ನೇತೃತ್ವದಲ್ಲಿ ಎಸಿಪಿ ಕೆ.ಎಂ. ಸತೀಶ್ ಮತ್ತು ಇನ್ಸ್ ಪೆಕ್ಟರ್ ಬಿಜಿ ಕುಮಾರಸ್ವಾಮಿ ಅವರಿದ್ದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಮೋಸದ ಜಾಲ ಹೇಗಿತ್ತು ?
ಪೊಲೀಸರು ಹೇಳುವ ಪ್ರಕಾರ, ಇವರು ಮೂರು ವರ್ಷಗಳ ಹಿಂದೆ ಆನ್ಲೈನ್ ಗೇಮ್ ಮತ್ತು ಬೆಟ್ಟಿಂಗ್ ನಡೆಸುವುದಕ್ಕಾಗಿ ಸ್ವಾಮೀಜಿ ಡಾಟ್ ಕಾಮ್ ಮತ್ತು ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ನಡೆಸಲು ನಿಯೋ ಸಿಸ್ಟಮ್ ಹೆಸರಿನಲ್ಲಿ ಏಪ್ ಗಳನ್ನು ರಚಿಸಿದ್ದರು. ಇವರ ವೆಬ್ ಸೈಟ್ ಮತ್ತು ಏಪ್ ಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕಾಗಿ ಫೇಸ್ಬುಕ್, ಇನ್ ಸ್ಟಾ ಗ್ರಾಮ್ ಮತ್ತು ಟೆಲಿಗ್ರಾಮ್ ನಲ್ಲಿ ವ್ಯಾಪಕ ಪ್ರಚಾರ ನೀಡಲಾಗಿತ್ತು. ಇದರಲ್ಲಿ ಹೂಡಿಕೆ ಮಾಡಿದವರಿಗೆ ಐದು ಪಟ್ಟು ಹಣ ಸಿಗುವ ಬಗ್ಗೆ ಭರವಸೆ ನೀಡಲಾಗಿತ್ತು.
ಆರಂಭದಲ್ಲಿ ಇವರ ಸ್ಟಾಕ್ ನಲ್ಲಿ ಒಂದು ಸಾವಿರ ಹಾಕಿದರೆ ಕೆಲವೇ ಗಂಟೆಗಳಲ್ಲಿ ಐದು ಸಾವಿರಕ್ಕೆ ಏರಿಕೆ ಆಗುತ್ತಿರುವುದನ್ನು ಏಪ್ ನಲ್ಲಿ ತೋರಿಸುತ್ತಿದ್ದರು. ಒಮ್ಮೆ ನಂಬಿಕೆ ಬಂದ ಕೂಡಲೇ ಜನರು ಲಕ್ಷ ಲಕ್ಷ ಹೂಡಿಕೆ ಮಾಡಲು ಆರಂಭಿಸುತ್ತಿದ್ದರು. ದೊಡ್ಡ ಮೊತ್ತ ಆದಕೂಡಲೇ ಹಣವನ್ನು ಹಿಂದಕ್ಕೆ ಪಡೆಯಲು ಆಗದಂತೆ ಏಪ್ ಬ್ಲಾಕ್ ಮಾಡುತ್ತಿದ್ದರು. ಆನಂತರ, ತಮ್ಮ ಸಂಪರ್ಕವನ್ನು ಕಡಿತಗೊಳಿಸಿ ವಂಚಿಸುತ್ತಿದ್ದರು. ಅಲ್ಲಿಗೆ ಹಣ ಕಳಕೊಂಡವರು ಇಂಗು ತಿಂದ ಮಂಗನಂತಾಗುತ್ತಿದ್ದರು. ಇಷ್ಟರಲ್ಲೇ ದೇಶ-ವಿದೇಶದಲ್ಲಿ ಲಕ್ಷಾಂತರ ಜನರು ಇದೇ ರೀತಿ ಹೂಡಿಕೆ ಮಾಡಿ, ಭಾರೀ ಮೊತ್ತವನ್ನು ಕಳಕೊಂಡಿದ್ದರು.

ಬ್ಯಾಂಕ್ ಖಾತೆ ಮಾಡಿಸಿದ್ರೆ 25 ಸಾವಿರ ಕಮಿಷನ್
ಈ ರೀತಿಯ ಹಣದ ಹೂಡಿಕೆ ಮತ್ತು ವಹಿವಾಟು ನಡೆಸುವುದಕ್ಕಾಗಿ ಸಾವಿರಾರು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ಇದನ್ನು ಬೆಂಗಳೂರಿನಲ್ಲಿದ್ದ ಮೊಹಮ್ಮದ್ ಹುಝೈಫಾ ಮತ್ತು ಆತನ ತಾಯಿ ಶಬಾನಾ ಕೂಲಿ ಕಾರ್ಮಿಕರ ಮೂಲಕ ಮಾಡಿಸುತ್ತಿದ್ದರು. ಅವರಿಗೆ ಪ್ರತಿ ಖಾತೆ ಓಪನ್ ಮಾಡಿಸಿಕೊಟ್ಟರೆ 25 ಸಾವಿರದಷ್ಟು ಕಮಿಷನ್ ಕೊಡುವುದಾಗಿ ಹೇಳಿ ಮಾಡಿಸುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ ಮೊಹಮ್ಮದ್ ಹುಝೈಫಾ 7500 ರಷ್ಟು ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರಿಗೆ ಮಾಡಿಕೊಟ್ಟಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಸಂತ್ರಸ್ತರು ಹಣವನ್ನು ಹಾಕಿದ ಕೆಲ ಹೊತ್ತಿನಲ್ಲೇ ಅದನ್ನು ಇನ್ನೊಂದು ಖಾತೆಗೆ ವರ್ಗಾಯಿಸಿ, ಎಲ್ಲಿಯೋ ಮತ್ತೊಂದು ಕಡೆಯಲ್ಲಿ ವಂಚಕರು ಡ್ರಾ ಮಾಡಿಸುತ್ತಿದ್ದರು.

ದೆಹಲಿಯಲ್ಲಿತ್ತು ಪ್ರಧಾನ ಕಚೇರಿ
ಒಟ್ಟು ಜಾಲವನ್ನು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನಿರಿಸಿ ಅದರ ಮೂಲಕ ನಡೆಸುತ್ತಿದ್ದರು. ಅಲ್ಲಿ ವಿದ್ಯಾವಂತರನ್ನು ಕೆಲಸಕ್ಕಿಟ್ಟು ಅವರಿಂದ ಗ್ರಾಹಕರನ್ನು ಸೆಳೆಯುವುದು, ಅವರಿಗೆ ಬಲ್ಕ್ ಮೆಸೇಜ್ ಮಾಡುವುದು, ಪ್ರೇಮ್ ತನೇಜಾ ಹೇಳಿದಂತೆ ಫಂಡ್ ವರ್ಗಾವಣೆ ಮಾಡುವುದನ್ನು ಮಾಡುತ್ತಿದ್ದರು. ಒಟ್ಟು ಮೋಸದ ಜಾಲ ಸುಲಲಿತವಾಗಿ ನಡೆಯಲು ಇವರನ್ನು ತಿಂಗಳ ಸಂಬಳ ಕೊಟ್ಟು ಕಚೇರಿಯಲ್ಲಿ ಇರಿಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಮೊಹಮ್ಮದನ ಹೈಫೈ ಬದುಕು
ಮೊಹಮ್ಮದ್ ಹುಝೈಫಾ ಕಾಲೇಜನ್ನು ಅರ್ಧಕ್ಕೆ ಬಿಟ್ಟಿದ್ದರೂ ಏನೂ ಕೆಲಸ ಮಾಡಿಕೊಳ್ಳದೆಯೂ ಹೈಫೈ ಬದುಕು ನಡೆಸುತ್ತಿದ್ದ. ಐಷಾರಾಮಿ ಜೀವನ ಮಾಡುತ್ತಾ, ದುಬೈ ಟೂರ್ ಹೋಗುತ್ತಾ, ಅಂಜನಾಪುರದಲ್ಲಿ ಫ್ಲಾಟ್ ಖರೀದಿಸಿ, ಗರ್ಲ್ ಫ್ರೆಂಡಿಗೆ ದುಬಾರಿ ಗೋಲ್ಡ್ ಗಿಫ್ಟ್ ಕೊಟ್ಟು ಭಾರೀ ಠಾಕುಠೀಕಾಗಿ ಇರುತ್ತಿದ್ದ. ಈತನ ತಿಂಗಳ ಕಮಾಯಿ ಏನಿಲ್ಲ ಅಂದ್ರೂ 30ರಿಂದ 35 ಲಕ್ಷ ಇತ್ತು ಎನ್ನುವುದು ಪೊಲೀಸರು ಸದ್ಯಕ್ಕೆ ಕಂಡುಕೊಂಡ ಮಾಹಿತಿ. ವಿಚಿತ್ರ ಅಂದ್ರೆ, ಇವರು ಯಾರ ಕೈಗೂ ಸಿಗದೆ ತಮ್ಮ ನೆಟ್ವರ್ಕ್ ಬೆಳೆಸಲು ಉಗ್ರರ ರೀತಿಯಲ್ಲಿ ಸ್ಯಾಟಲೈಟ್ ಫೋನನ್ನೂ ಬಳಸುತ್ತಿದ್ದರು.
Bengaluru police have busted what is believed to be India’s largest cyber fraud racket, which allegedly cheated people of over ₹1,000 crore within just 2–3 years through fake stock market and betting apps. Twelve accused, including a mother and son from Bengaluru and several suspects from North India, have been arrested. Police have frozen more than 4,500 bank accounts containing ₹240 crore. Investigations revealed the syndicate operated from a head office in Delhi, while the mastermind controlled the network from Dubai.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm