ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ ;  5.15 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಪೊಲೀಸರ ಬಲೆಗೆ ಬಿದ್ದ ನೈಜೀರಿಯಾದ ವ್ಯಕ್ತಿ ! 

20-01-26 05:01 pm       Bangalore Correspondent   ಕ್ರೈಂ

ಎರಡು ದಿನಗಳ ಹಿಂದೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಹಾಗೂ ಮೈಸೂರಿಗೆ ಬಂದು ಡ್ರಗ್ ಫ್ಯಾಕ್ಟರಿಗಳ ದಾಳಿ ಮಾಡಬೇಕಿತ್ತಾ? ನಮ್ಮ ಪೊಲೀಸರು ಏನು ಮಾಡ್ತಿದ್ರು? ಎಂದು ಕ್ಲಾಸ್ ತೆಗೆದುಕೊಂಡ ಬೆನ್ನಲ್ಲೇ 5.15 ಕೋಟಿ ರೂ. ಮೌಲ್ಯದ ಡ್ರಗ್ಸ್ ನನ್ನ ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. 

ಬೆಂಗಳೂರು, ಜ 19 : ಎರಡು ದಿನಗಳ ಹಿಂದೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಹಾಗೂ ಮೈಸೂರಿಗೆ ಬಂದು ಡ್ರಗ್ ಫ್ಯಾಕ್ಟರಿಗಳ ದಾಳಿ ಮಾಡಬೇಕಿತ್ತಾ? ನಮ್ಮ ಪೊಲೀಸರು ಏನು ಮಾಡ್ತಿದ್ರು? ಎಂದು ಕ್ಲಾಸ್ ತೆಗೆದುಕೊಂಡ ಬೆನ್ನಲ್ಲೇ 5.15 ಕೋಟಿ ರೂ. ಮೌಲ್ಯದ ಡ್ರಗ್ಸ್ ನನ್ನ ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. 

ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆಯನ್ನ ಸಿಸಿಬಿಯ ಪೊಲೀಸರು ಬಂಧಿಸಿದ್ದಾರೆ. ಅರ್ನೆಸ್ಟ್ ಯುಗಾಹ್ಸ್ (45) ಬಂಧಿತ ಆರೋಪಿ. ಆತನಿಂದ 2.5 ಕೆ.ಜಿ ಎಂಡಿಎಂಎ, 300 ಎಕ್ಸ್‌ಟಸಿ ಮಾತ್ರೆಗಳ ಸಹಿತ ಒಟ್ಟು 5.15 ಕೋಟಿ ರೂ. ಮೌಲ್ಯದ ಮಾದಕ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕಾಡುಗೋಡಿ, ಹೆಣ್ಣೂರು ಠಾಣೆಗಳಲ್ಲಿ ಅರ್ನೆಸ್ಟ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿಗೆ ಜೈಲಿನಿಂದ‌ ಬಿಡುಗಡೆಯಾಗಿದ್ದ ಆರೋಪಿ ಪುನಃ ಮಾದಕ ದಂಧೆ‌ ಮುಂದುವರೆಸಿದ್ದ. ಮಾರತ್‌ಹಳ್ಳಿ ವ್ಯಾಪ್ತಿಯ ಮುನೇಕೊಳಲು ಬಳಿ ಬಾಡಿಗೆ ಮನೆ ಪಡೆದಿದ್ದ ಆರೋಪಿ, ಅಲ್ಲಿಂದಲೇ ತನ್ನ ದಂಧೆಯನ್ನ ಮುಂದುವರೆಸಿದ್ದ. ಆರೋಪಿಯ ಜೊತೆ ಸಂಪರ್ಕದಲ್ಲಿದ್ದವರು, ಗಿರಾಕಿಗಳನ್ನ ಪತ್ತೆಹಚ್ಚುವ ಕೆಲಸ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು 106 ಕೆ.ಜಿ ಗಾಂಜಾ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ನಿವಾಸಿಗಳಾದ ರಫೀಕ್ ಪಿ(37), ಅಬ್ದುಲ್ ಸಾದಿಕ್ (37) ಬಂಧಿತರು.

ಜ.19ರ ಸಂಜೆ ಕಾರು ಮತ್ತು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್‌ ಉಪ ನಿರೀಕ್ಷಕರು, ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಕಾರು ಹಾಗೂ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಿದ್ದು, ಕಾರಿನ ಚಾಲಕನನ್ನು ವಿಚಾರಿಸಿದಾಗ ಆತ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಪಿ(37) ಎಂಬುದಾಗಿ ತಿಳಿದು ಬಂದಿದೆ. ಆತನ ವರ್ತನೆಯಿಂದ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್​ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿ ಇದ್ದ ಕಟ್ಟು ಪತ್ತೆಯಾಗಿದೆ.

Days after Chief Minister Siddaramaiah pulled up police officials over lax action against drug networks, Bengaluru Police seized narcotics worth ₹5.15 crore and arrested a Nigerian national. The accused, Ernest Yugahs (45), was caught by the CCB with 2.5 kg of MDMA and 300 ecstasy pills. In a separate operation in Dakshina Kannada, police seized 106 kg of ganja and arrested two persons, intensifying the state’s crackdown on drug trafficking.