ಬ್ರೇಕಿಂಗ್ ನ್ಯೂಸ್
21-01-26 09:35 pm HK News Desk ಕ್ರೈಂ
ಶಿವಮೊಗ್ಗ, ಜ.21: ಮಲಗಿದ್ದಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದ ಭದ್ರಾವತಿ ಪಟ್ಟಣದ ಭೂತನಗುಡಿಯ ವೃದ್ಧ ದಂಪತಿಯ ಪ್ರಕರಣವನ್ನು 24 ಗಂಟೆಯಲ್ಲಿಯೇ ಭೇದಿಸಿದ ಭದ್ರಾವತಿ ಹಳೇ ನಗರ ಪೊಲೀಸರು, ಆರೋಪಿ ಡಾಕ್ಟರ್ ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃದ್ಧ ದಂಪತಿಯ ತಮ್ಮನ ಪುತ್ರ ಡಾ. ಮಲ್ಲೇಶ್ ಕೊಲೆಯ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.
ಜ.19ರಂದು ಭೂತನಗುಡಿಯ ಚಂದ್ರಪ್ಪ ಹಾಗೂ ಜಯಮ್ಮ ತಮ್ಮ ಮನೆಯಲ್ಲಿ ಮಲಗಿದ್ದ ಜಾಗದಲ್ಲೇ ನಿಗೂಢವಾಗಿ ಮೃತಪಟ್ಟಿದ್ದರು. ಆದರೆ, ಮೃತ ವೃದ್ಧ ದಂಪತಿಯ ಮೈಮೇಲಿನ ಆಭರಣಗಳು ಕಳವು ಆಗಿದ್ದವು. ಈ ಕುರಿತು ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದಂಪತಿ ತಮ್ಮ ಮೂವರು ಗಂಡು ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಆದ್ರೆ ಪ್ರತಿನಿತ್ಯ ಮಕ್ಕಳು ಫೋನ್ ಮಾಡಿ ತಂದೆ-ತಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ಆದರೆ, ನಿನ್ನೆ ಫೋನ್ ಮಾಡಿದಾಗ ಯಾರೂ ಫೋನ್ ಸ್ವೀಕರಿಸದ ಹಿನ್ನೆಲೆ ತನ್ನ ಸಹೋದರನಿಗೆ ಫೋನ್ ಮಾಡಿ ತಿಳಿಸಿದ್ದರು. ಅವರು ಸಹ ಫೋನ್ ಮಾಡಿದ್ದರು. ಫೋನ್ ರಿಸಿವ್ ಮಾಡದ ಕಾರಣ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಚಾರಿಸಲು ಹೇಳಿದ್ದರು. ಪಕ್ಕದ ಮನೆಯವರು ಬಾಗಿಲು ತೆಗೆದು ಒಳಗೆ ಬಂದು ನೋಡಿದಾಗ ದಂಪತಿ ಇಬ್ಬರು ಮಂಚದ ಮೇಲೆ ಪ್ರತ್ಯೇಕವಾಗಿ ಮಲಗಿದ್ದು ಕಂಡುಬರುತ್ತದೆ. ಚಂದ್ರಪ್ಪ ಅವರ ಬಾಯಿಯಿಂದ ನೊರೆ ಬರುತ್ತಿರುವುದನ್ನು ಕಂಡು ಸ್ಥಳೀಯರು, ಮಕ್ಕಳಿಗೆ ಫೋನ್ ಮಾಡಿ ತಿಳಿಸಿದ್ದರು. ಸುದ್ದಿ ತಿಳಿದು ಮನೆಗೆ ಬಂದ ಮಕ್ಕಳು, ತಕ್ಷಣ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲೇ ಅವರ ಜೀವ ಹಾರಿಹೋಗಿತ್ತು. ಆದರೆ, ವೃದ್ಧ ದಂಪತಿಯ ಮೈಮೇಲಿದ್ದ ಆಭರಣಗಳು ಕಳ್ಳತನ ಆಗಿದ್ದರಿಂದ ಅನುಮಾನದ ಹಿನ್ನೆಲೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಅನುಮಾನದ ಹಿನ್ನೆಲೆ ಡಾ.ಮಲ್ಲೇಶನನ್ನು ಕರೆದು ವಿಚಾರಿಸಿದಾಗ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ವಂತ ತಮ್ಮನ ಮಗನಿಂದಲೇ ಕೊಲೆ:
ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಮುಖ ಆರೋಪಿ ಡಾ.ಮಲ್ಲೇಶ್ ಜೂಜಾಟದಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಅಲ್ಲದೆ, ಸಾಲ ಕೂಡ ಮಾಡಿಕೊಂಡು, ಅವರಿವರ ಬಳಿ ಹಣ ಕೇಳುತ್ತಿದ್ದ. ಇತ್ತೀಚೆಗೆ ತನ್ನ ದೊಡ್ಡಪ್ಪ ಚಂದ್ರಪ್ಪ ಅವರ ಬಳಿ ಬಂದು ತನಗೆ 15 ಲಕ್ಷ ರೂ. ಸಾಲ ಕೊಡುವಂತೆ ಕೇಳಿದ್ದ. ಆದರೆ, ಚಂದ್ರಪ್ಪ ಹಣ ಇಲ್ಲವೆಂದು ವಾಪಸ್ ಕಳುಹಿಸಿದ್ದರು. ಆದರೆ, ಮೊನ್ನೆ ಮನೆಗೆ ಬಂದ ಮಲ್ಲೇಶ್, ದೊಡ್ಡಪ್ಪ-ದೊಡ್ಡಮ್ಮ ನಿಮಗೆ ಚಿಕಿತ್ಸೆ ನೀಡಬೇಕು, ನಿಮ್ಮ ಹಳೇ ವೈದ್ಯರ ರಿಪೋರ್ಟ್ ಕೊಡುವಂತೆ ಕೇಳಿ ಪಡೆದಿದ್ದ. ಈ ವೇಳೆ ದಂಪತಿಗೆ Propofol ಎಂಬ ಇಂಜೆಕ್ಷನ್ ನೀಡಿ ಕೊಂದು ಅವರ ಮೈಮೇಲಿದ್ದ ಒಡವೆ ಹಾಗೂ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ. ಈ ಕುರಿತು ಅಕ್ಕ-ಪಕ್ಕದ ಮನೆಯವರು ಮೃತ ದಂಪತಿ ಮಕ್ಕಳ ಬಳಿ ಹೇಳಿದ್ದರು. ಡಾ.ಮಲ್ಲೇಶನ ಮೇಲೆ ಅನುಮಾನ ಮೂಡಿದ್ದರಿಂದ ಮೃತನ ಮಕ್ಕಳು ಪೊಲೀಸರ ಬಳಿ ಹೇಳಿಕೆ ನೀಡಿದ್ದರು. ನಮ್ಮ ತಂದೆ-ತಾಯಿ ಮೃತಪಟ್ಟ ಸುದ್ದಿ ತಿಳಿದರು ಸಹ ಮಲ್ಲೇಶನು ಶವ ನೋಡಲು ಬಂದಿಲ್ಲ. ಹಾಗಾಗಿ ಆತನ ಮೇಲೆ ಅನುಮಾನ ಇದೆ ಎಂದು ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಮಲ್ಲೇಶನನ್ನು ಹಿಡಿದು ವಿಚಾರಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನಿಡಿದ್ದಾರೆ.
ಪ್ರಕರಣ ಭೇದಿಸಿದ ಬಗ್ಗೆ ಎಸ್ಪಿ ಹೇಳಿದ್ದಿಷ್ಟು:
ಕೊಲೆ ಕುರಿತು ಮಾಹಿತಿ ನೀಡಿದ ಎಸ್ಪಿ ನಿಖಿಲ್, ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿಯಲ್ಲಿ ದಂಪತಿಯ ನಿಗೂಢ ಸಾವಾಗಿತ್ತು. ಇದನ್ನು ನಮ್ಮ ಪೊಲೀಸರು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದರು. ಆದರೆ, ಇಲ್ಲಿ ಕೊಲೆಯ ಕುರಿತು ಯಾವುದೇ ಕುರುಹುಗಳಿರಲಿಲ್ಲ. ಅಲ್ಲದೆ ಕಳ್ಳತನ ಮಾಡುವವರು ಮನೆ ಬಾಗಿಲು ಒಡೆದು ಹಾಕುವುದು, ಕನ್ನ ಹಾಕುವುದನ್ನು ಮಾಡಬೇಕಿತ್ತು. ಆದರೆ, ಇಲ್ಲಿ ಆ ರೀತಿಯ ಸನ್ನಿವೇಶ ಕಂಡುಬಂದಿರಲಿಲ್ಲ. ನಂತರ ತನಿಖೆ ಪ್ರಾರಂಭಿಸಿದಾಗ ಮೃತ ಚಂದ್ರಪ್ಪನ ತಮ್ಮನ ಮಗನಾದ ಡಾ.ಮಲ್ಲೇಶನ ಮೇಲೆ ಅನುಮಾನ ಬಂದಿತ್ತು. ಈತ ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದನು. ಈತ ಜೂಜಾಡಿ ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಾಟ ಹೆಚ್ಚಾಗಿತ್ತು. ಇದಕ್ಕಾಗಿ ತನ್ನ ದೊಡ್ಡಪ್ಪನಾದ ಚಂದ್ರಪ್ಪನ ಬಳಿ ಹೋಗಿ 15 ಲಕ್ಷ ರೂ. ಸಾಲ ಕೇಳಿದ್ದನು. ಅವರು ಹಣ ಇಲ್ಲವೆಂದು ಹೇಳಿ ಕಳುಹಿಸಿದ್ದರು. ಆದರೆ, ತನ್ನ ದೊಡ್ಡಪ್ಪ-ದೊಡ್ಡಮ್ಮ ಬಳಿ ಹಣ-ಒಡವೆ ಇದೆ. ಅದನ್ನು ಲಪಟಾಯಿಸಬೇಕೆಂದು ಸೋಮವಾರ(ಜ.19) ಮಧ್ಯಾಹ್ನ ಅವರ ಮನೆಗೆ ಬಂದಿದ್ದಾನೆ. ಅವರ ಅನಾರೋಗ್ಯದ ವಿಷಯವಾಗಿ ಮಾತನಾಡುತ್ತಾ ಅವರ ಹಿಂದಿನ ಮೆಡಿಕಲ್ ಚೆಕಪ್ ಬಗ್ಗೆ ಮಾಹಿತಿ ಕೇಳಿ ಪಡೆದಿದ್ದಾನೆ. ಹಳೆ ರಿಪೋರ್ಟ್ ನೋಡಿ ನಿಮಗೆ ಕಾಲು, ಮಂಡಿ ನೋವಿಗೆ ಔಷಧ ಇದೆ ಎಂದು ಹೇಳಿ Propofol ಎಂಬ Injection ನೀಡಿದ್ದಾನೆ ಎಂಬ ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ. ಇದು ಸಾಮಾನ್ಯವಾಗಿ ಆಪರೇಷನ್ ಮಾಡುವಾಗ ಒಬ್ಬರಿಗೆ ಕೇವಲ 5mg ನೀಡಬೇಕು. ಆದರೆ, ಈತ ಇಬ್ಬರಿಗೂ ತಲಾ 50mg ನೀಡಿದ್ದಾನೆ. ಇಂಜೆಕ್ಷನ್ ನೀಡಿದ ಕೆಲವೇ ಕ್ಷಣದಲ್ಲಿ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ.
ಇಬ್ಬರನ್ನು ಮಂಚದ ಮೇಲೆ ಮಲಗಿಸಿ ಈತ ದೊಡ್ಡಮ್ಮಳಾದ ಜಯಮ್ಮಳ ಮೈಮೇಲೆ ಇದ್ದ ಮಾಂಗಲ್ಯದ ಸರ, ಕೈಬಳೆ, ಚಂದ್ರಪ್ಪ ಅವರ ಕೊರಳಿನಲ್ಲಿದ್ದ ಸರ ಹಾಗೂ ಮನೆಯಲ್ಲಿದ್ದ ಇತರೆ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದನು. ಕದ್ದ ಚಿನ್ನಾಭರಣವನ್ನು ಗಿರವಿ ಇಟ್ಟು ಅದನ್ನು ಸಾಲಗಾರರಿಗೆ ಸಾಲ ವಾಪಸ್ ಮಾಡಿದ್ದಲ್ಲದೇ, ತನ್ನ ಅಕೌಂಟ್ನಲ್ಲಿ ಸ್ವಲ್ಪ ಹಣ ಉಳಿಸಿಕೊಂಡಿದ್ದನು. ತನಿಖೆ ವೇಳೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದು, ಸದ್ಯ ಈತನನ್ನು ಬಂಧಿಸಲಾಗಿದೆ. ಕುರುಹು ಇಲ್ಲದ ಪ್ರಕರಣದಲ್ಲಿ ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಭದ್ರಾವತಿಯ ಹಳೇನಗರ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಎಸ್ಪಿ ನಿಖಿಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ರಿವಾರ್ಡ್ ನೀಡುವುದಾಗಿ ಕೂಡ ಘೋಷಿಸಿದ್ದಾರೆ.
In a shocking crime driven by gambling losses and debt, a doctor from Bhadravati allegedly murdered his own uncle and aunt by administering a lethal dose of Propofol while they slept. The elderly couple was initially found dead under mysterious circumstances, but police cracked the case within 24 hours using CCTV footage and interrogation. The accused reportedly stole gold jewellery to repay his debts. Bhadravati Old Town police have arrested the doctor, drawing praise for swiftly solving the case.
21-01-26 01:31 pm
HK News Desk
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
21-01-26 11:10 am
HK News Desk
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಎಂದು ವಿಡಿಯೋ ; ನೊಂದು...
19-01-26 11:03 pm
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
21-01-26 10:55 pm
Mangalore Correspondent
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ನಿಂದ ಟ್ರಾಫಿಕ್ ಸಮ...
20-01-26 10:33 pm
21-01-26 09:35 pm
HK News Desk
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm