ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂಡ್ ಇಟ್ಟು ಜೈಲು ಸೇರಿದ ಚಿಕ್ಕಮಗಳೂರಿನ ಯುವತಿ ! ಕಚ್ಚೆ ಜಾರಿಸಲು ಹೋಗಿ ಗುನ್ನಾ ಮಾಡ್ಕೊಂಡ ! 

22-01-26 02:40 pm       Bangalore Correspondent   ಕ್ರೈಂ

ರಾಜ್ಯದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿಗೈದ ಆರೋಪದಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯಿಂದ 4.5 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪಿ ಒಂದು ಕೋಟಿ ನೀಡುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ. 

ಬೆಂಗಳೂರು, ಜ.22 : ರಾಜ್ಯದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿಗೈದ ಆರೋಪದಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯಿಂದ 4.5 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪಿ ಒಂದು ಕೋಟಿ ನೀಡುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ. 

ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದ ಸ್ಪೂರ್ತಿ ಎಂಬ ಯುವತಿ ತಿಪಟೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ಪರಿಚಯಿಸಿದ್ದಳು. ಚಾಟಿಂಗ್ ಮೂಲಕ ಪರಿಚಯವಾಗಿ ಬಳಿಕ ಯುವತಿ ಹಣಕ್ಕೆ ಬೇಡಿಕೆ ಇಟ್ಟದ್ದಳು. ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು. 

ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದಾಗ ಅವರಿಂದ 4.5 ಲಕ್ಷ ರೂ. ಪಡೆದಿದ್ದು, ಮತ್ತೆ 1 ಕೋಟಿ ರೂ. ಕೊಡಬೇಕೆಂದು ಬೆದರಿಕೆ ಮುಂದುವರಿಸಿದ್ದಳು. ಆರೋಪಿ ಮಹಿಳೆ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸಿದ್ದರಿಂದ ಆತಂಕಗೊಂಡ ಸ್ವಾಮೀಜಿ ಸಿಸಿಬಿ ಪೊಲೀಸರ ಮೊರೆ ಹೋಗಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಸ್ಪೂರ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಇದೇ ಸ್ವಾಮೀಜಿ ವಿರುದ್ಧ ಎರಡು ವರ್ಷಗಳ ಹಿಂದೆ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಆ ವೇಳೆ 6 ಕೋಟಿ ರೂ. ಬೇಡಿಕೆ ಇಟ್ಟಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈಗ ಬ್ಲ್ಯಾಕ್​ಮೇಲ್ ಪ್ರಕರಣದ ಹಿನ್ನೆಲೆಯಲ್ಲಿ ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದು, ತಮಗೆ ಸಂಬಂಧಿಸಿದ ಯಾವುದೇ ಫೋಟೊ, ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಪಡೆದಿದ್ದಾರೆ.

Bengaluru CCB police have arrested a young woman from Chikkamagaluru for allegedly blackmailing a Swami and extorting money from him. The accused reportedly collected ₹4.5 lakh and later demanded ₹1 crore, threatening defamation if the money was not paid.