ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್ ಮೂಲದ ಹವಾಲಾ ಏಜಂಟ್ ವಿರಾಟ್ ಗಾಂಧಿ ಸೇರಿ ಐವರ ಬಂಧನ, ಉದ್ಯಮಿ ಕಿಶೋರ್ ಸಾವ್ಲಾ ನಾಪತ್ತೆ 

25-01-26 10:11 pm       HK staffer   ಕ್ರೈಂ

400 ಕೋಟಿ ಮೌಲ್ಯದ ಅಮಾನ್ಯಗೊಂಡ 2000 ರೂ. ನೋಟುಗಳಿದ್ದ ಕಂಟೈನರ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಗುಜರಾತ್ ಮೂಲದ ಹವಾಲಾ ಏಜೆಂಟ್ ವಿರಾಟ್ ಗಾಂಧಿ ಸಹಿತ ಐದು ಮಂದಿಯನ್ನು ಬಂಧಿಸಿದ್ದಾರೆ. 

ಬೆಂಗಳೂರು, ಜ.24: 400 ಕೋಟಿ ಮೌಲ್ಯದ ಅಮಾನ್ಯಗೊಂಡ 2000 ರೂ. ನೋಟುಗಳಿದ್ದ ಕಂಟೈನರ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಗುಜರಾತ್ ಮೂಲದ ಹವಾಲಾ ಏಜೆಂಟ್ ವಿರಾಟ್ ಗಾಂಧಿ ಸಹಿತ ಐದು ಮಂದಿಯನ್ನು ಬಂಧಿಸಿದ್ದಾರೆ. 

ಮಹಾರಾಷ್ಟ್ರದ ವಿಶೇಷ ತನಿಖಾ ತಂಡ ಜ.23 ರಂದು ತಡರಾತ್ರಿ ಮುಂಬೈನ ಡೊಂಬಿವಿಲಿಯಲ್ಲಿ ವಿರಾಟ್ ಗಾಂಧಿಯನ್ನು ಬಂಧಿಸಿದೆ. ಈತ ಅಹ್ಮದಾಬಾದ್ ಮೂಲದ ನಟೋರಿಯಸ್ ಹವಾಲಾ ಏಜಂಟ್ ಆಗಿದ್ದು ಮುಂಬೈನಲ್ಲಿ ನೆಲೆಸಿದ್ದ. ಜಯೇಶ್ ಕದಂ, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ಜನಾರ್ದನ್ ಧಾಯ್ಗುಡೆ ಇತರ ಬಂಧಿತರು.‌ ಇವರೆಲ್ಲ ಮುಂಬೈ ನಿವಾಸಿಗಳಾಗಿದ್ದು ಸಂದೀಪ್ ಪಾಟೀಲ್ ನನ್ನು ಅಪಹರಿಸಿ ಕಿರುಕುಳ ನೀಡಿದವರು ಎನ್ನಲಾಗಿದೆ. 

ಪ್ರಮುಖ ಆರೋಪಿಗಳು ಎನ್ನಲಾದ ಅಝರ್ ಮತ್ತು ಥಾಣೆಯ ದೊಡ್ಡ ಉದ್ಯಮಿ ಕಿಶೋರ್ ಸಾವ್ಲಾ ತಲೆಮರೆಸಿಕೊಂಡಿದ್ದಾರೆ. ವಿರಾಟ್ ಗಾಂಧಿ ಹವಾಲಾ ಆಪರೇಟರ್ ಆಗಿದ್ದಲ್ಲದೆ, ರಾಜಸ್ಥಾನ ಮೂಲದ ಧಾರ್ಮಿಕ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ನಾಶಿಕ್ ಪೊಲೀಸರು ತಿಳಿಸಿದ್ದಾರೆ. 

ದೂರಿನ ಪ್ರಕಾರ, ಗೋವಾದಿಂದ ಕರ್ನಾಟಕದ ಒಂದು ಧಾರ್ಮಿಕ ಸಂಸ್ಥೆಗೆ ಎರಡು ಟ್ರಕ್ ಕಂಟೈನರ್‌ಗಳಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರದ್ದಾದ ಹಳೆಯ 2000 ರೂಪಾಯಿ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಈ ಕಂಟೈನರ್‌ಗಳು ಕರ್ನಾಟಕದ ಚೋರಲಾ ಘಾಟ್‌ನಲ್ಲಿ ಕಳ್ಳತನವಾಗಿದ್ದವು. ಹೀಗಾಗಿ ಬೆಳಗಾವಿ ಪೊಲೀಸರನ್ನೂ ತನಿಖೆಗೆ ಸೇರಿಸಿಕೊಳ್ಳಲಾಗಿದೆ.

In connection with the robbery of container trucks carrying invalidated ₹2000 currency notes worth nearly ₹400 crore, Maharashtra Police have arrested five persons, including a Gujarat-based hawala agent identified as Virat Gandhi.