ಬ್ರೇಕಿಂಗ್ ನ್ಯೂಸ್
06-01-21 05:24 pm Headline Karnataka News Network ಕ್ರೈಂ
ಲಕ್ನೋ, ಜ.6: ದೆಹಲಿಯ ನಿರ್ಭಯಾ ಪ್ರಕರಣದ ರೀತಿಯಲ್ಲೇ ಮತ್ತೊಂದು ಅತ್ಯಾಚಾರ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ತೆರಳಿದ್ದ 50 ವರ್ಷದ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡಿ, ವಿಕೃತವಾಗಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬದೌನ್ ಜಿಲ್ಲೆಯ ಉಘೈಟಿ ಗ್ರಾಮದಲ್ಲಿ ಜ.3ರಂದು ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಮಹಿಳೆ ಜ.3ರಂದು ಸಂಜೆ ದೇವಸ್ಥಾನಕ್ಕೆ ತೆರಳಿದ್ದರು. ಆದರೆ, ದೇಗುಲಕ್ಕೆ ತೆರಳಿದ್ದ ಮಹಿಳೆ ಬಂದಿರಲಿಲ್ಲ. ಮರುದಿನ ದೇವಸ್ಥಾನದ ಅರ್ಚಕ ಮತ್ತು ಇತರ ಇಬ್ಬರು ಸೇರಿ ಮಹಿಳೆಯ ಶವವನ್ನು ಆಕೆಯ ಮನೆಗೆ ತಂದು ಇರಿಸಿದ್ದಾರೆ. ಈ ಬಗ್ಗೆ ಮನೆಯವರು ಕೇಳಿದಾಗ, ಮಹಿಳೆ ದೇವಸ್ಥಾನದ ಬಳಿಯ ಬಾವಿಗೆ ಬಿದ್ದಿದ್ದಳು. ರಕ್ಷಣೆಗಾಗಿ ಬೊಬ್ಬೆ ಹಾಕಿದ್ದು ನಾವು ಹೋಗಿ ರಕ್ಷಿಸಲು ಪ್ರಯತ್ನಿಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಮಹಿಳೆಯ ಮನೆಯವರ ನಂಬರ್ ಏನೂ ಇರಲಿಲ್ಲ. ಹೀಗಾಗಿ ಶವ ತಂದಿದ್ದೇವೆ ಎಂಬುದಾಗಿ ಅರ್ಚಕ ಹೇಳಿದ್ದಾಗಿ ಮಹಿಳೆಯ ಮಗ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಆದರೆ, ಮಹಿಳೆಯ ಮನೆಯವರು ಅರ್ಚಕ ಮತ್ತು ಇತರ ಇಬ್ಬರು ಸೇರಿ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆಂದು ಆರೋಪಿಸಿದ್ದಾರೆ. ಇದಲ್ಲದೆ, ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಎಫ್ಐಆರ್ ಮಾಡುವುದಕ್ಕೆ ನಿರ್ಲಕ್ಷ್ಯ ತೋರಿದ್ದಾಗಿ ಹೇಳಿದ್ದಾರೆ. ಊರ ಗ್ರಾಮಸ್ಥರ ಆಕ್ರೋಶ ಕೇಳಿಬಂದ ಬಳಿಕ ಪೊಲೀಸರು ಶವವನ್ನು ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈದಿದ್ದಲ್ಲದೆ, ಗುಪ್ತಾಂಗ ಮತ್ತು ಕಾಲುಗಳಿಗೆ ಗಾಯಗೊಳಿಸಿರುವುದು ಕಂಡುಬಂದಿದೆ.
ಆಬಳಿಕ ಮಹಿಳೆಯ ಗ್ಯಾಂಗ್ ರೇಪ್ ಮತ್ತು ಕೊಲೆಗೈದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬ ನೀಡಿದ ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಕರಣ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದಂತೆ, ಬಧೌನ್ ಜಿಲ್ಲೆಯ ಎಸ್ಪಿ ಸಂಕಲ್ಪ್ ಶರ್ಮಾ, ಘಟನೆಯ ತನಿಖೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
A 50-year-old woman was allegedly gang-raped and brutalised in the Ughaiti area of Uttar Pradesh's Badaun district, police have said. The woman had gone to the temple but never returned. The post-mortem report of the deceased confirmed rape, injury in her private parts, and fracture in her legs.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm