ಕ್ರಿಸ್ಮಸ್ ಉಡುಗೊರೆ ಆಮಿಷ ; ಖಾತೆಯಿಂದ 1.29 ಲಕ್ಷ ರೂ. ಮಾಯ !

07-01-21 12:53 pm       Mangalore Correspondent   ಕ್ರೈಂ

ಕ್ರಿಸ್ಮಸ್ ಹಬ್ಬಕ್ಕೆ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು, ಜ.7 : ಕ್ರಿಸ್ಮಸ್ ಹಬ್ಬಕ್ಕೆ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಅಪರಿಚಿತನೊಬ್ಬ 1.29 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ನಗರದ ವ್ಯಕ್ತಿಯೋರ್ವರ ಮೊಬೈಲ್ ಫೋನ್ ಗೆ ಡಿ.15ರಂದು +44748290281 ದೂರವಾಣಿ ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನನ್ನು ನೆಲ್ಸನ್ ವಿಲಿಯಮ್ಸ್ ಎಂದು ಪರಿಚಯ ಮಾಡಿದ್ದ. ತಾನು ಕ್ರಿಸ್ಮಸ್ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದು ಅವರು ಅದನ್ನು ನಿರಾಕರಿಸಿದ್ದಾರೆ.

ಆದರೆ ಡಿ.21ರಂದು 9821814383 ಮೊಬೈಲ್ ಫೋನ್ ನಿಂದ ಕರೆ ಬಂದಿದ್ದು, ಆತ ತನ್ನನ್ನು ಕಸ್ಟಮ್ಸ್ ಅಧಿಕಾರಿಯೆಂದು ನಂಬಿಸಿದ್ದಾನೆ. ಅಲ್ಲದೆ, ನೆಲ್ಸನ್ ವಿಲಿಯಮ್ಸ್ ಎಂಬಾತ ತಮಗೆ ಉಡುಗೊರೆ ಕಳುಹಿಸಿದ್ದು, ಅದನ್ನು ಬಿಡಿಸಿಕೊಳ್ಳಲು ಶುಲ್ಕ ತೆರುವಂತೆ ಹೇಳಿದ್ದಾನೆ. ಕೊನೆಗೆ ಒತ್ತಾಯ ಮಾಡಿ, ತನ್ನ ಬ್ಯಾಂಕ್ ಖಾತೆ ಸಂಖ್ಯೆ ಪಡೆದಿದ್ದು 1,29,300 ರೂ. ವರ್ಗಾಯಿಸಿದ್ದಾನೆ. ಬಳಿಕ ಕ್ರಿಸ್ಮಸ್ ಉಡುಗೊರೆ ಬರದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಮೋಸದ ಅರಿವಾಗಿದ್ದು ವಾರದ ಬಳಿಕ ಮಂಗಳೂರಿನ ಪಾಂಡೇಶ್ವರ ಎನ್ ಇಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

A person from Mangalore fell for the oldest trick of customs clearance scam and lost Rs1.23 lakh as a Christmas gift.