ಬ್ರೇಕಿಂಗ್ ನ್ಯೂಸ್
09-01-21 01:31 pm Headline Karnataka News Network ಕ್ರೈಂ
ರಾಂಚಿ, ಜ.9: ಉತ್ತರ ಪ್ರದೇಶದಲ್ಲಿ 50 ವರ್ಷದ ಅಂಗನವಾಡಿ ಕಾರ್ಯಕರ್ತೆಯನ್ನು ಸಾಮೂಹಿಕ ಅತ್ಯಾಚಾರಗೈದು ಬರ್ಬರ ಹತ್ಯೆ ನಡೆಸಿದ ಪ್ರಕರಣದ ಬೆನ್ನಲ್ಲೇ ಜಾರ್ಖಂಡ್ ನಲ್ಲೂ ಅಂಥದ್ದೇ ರೀತಿಯ ಘಟನೆ ಬೆಳಕಿಗೆ ಬಂದಿದೆ.
50 ವರ್ಷದ ವಿಧವೆ ಮಹಿಳೆಯ ಮನೆಗೆ ನುಗ್ಗಿ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆಕೆಯ ಗುಪ್ತಾಂಗಕ್ಕೆ ಸ್ಟೀಲ್ ಲೋಟ ತುರುಕಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಜಾರ್ಖಂಡ್ ರಾಜ್ಯದ ಛಾತ್ರ ಜಿಲ್ಲೆಯ ಕೋಬ್ನಾ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ ಹಂಟರ್ ಗಂಜ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಳೆ ಜಗಳವನ್ನೇ ಮುಂದಿಟ್ಟು ಮಹಿಳೆಯ ಜೊತೆ ಗುರುವಾರ ರಾತ್ರಿ ಜಗಳ ತೆಗೆದಿದ್ದ ಮೂವರು, ಮಾತಿಗೆ ಮಾತು ಬೆಳೆದು ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಡಿಐಜಿ ಅಮೋಲ್ ಹೋಂಕಾರ್ ತಿಳಿಸಿದ್ದಾರೆ.
ಈ ಹಿಂದೆ ಮೇಕೆ ವಿಷಯಕ್ಕೆ ಜಗಳವಾಗಿತ್ತು. ನನ್ನ ಮನೆ ಸಮೀಪ ಗುರುವಾರ ರಾತ್ರಿ ಜಮೀನಿಗೆ ತೆರಳಿದ್ದ ಸಂದರ್ಭ ಮತ್ತೆ ಜಗಳಕ್ಕೆ ಬಂದಿದ್ದಾರೆ. ಮೂವರು ಸೇರಿ ಅತ್ಯಾಚಾರ ನಡೆಸಿದ್ದು ಗುಪ್ತಾಂಗಕ್ಕೆ ಲೋಟ ತುರುಕಿ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ.
ವಿಧವೆ ಮಹಿಳೆ ಒಬ್ಬಂಟಿಯಾಗಿ ವಾಸವಿದ್ದು ಆಕೆಯ ಮನೆಯಲ್ಲೇ ಕೃತ್ಯ ನಡೆಸಿದ್ದಾರೆ. ಆಕೆಯನ್ನು ಬಳಿಕ ನೆರೆಹೊರೆಯವರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವಾರದ ಹಿಂದೆ ನಡೆದಿದ್ದು 50 ವರ್ಷದ ಅಂಗನವಾಡಿ ಕಾರ್ಯಕರ್ತೆ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅರ್ಚಕ ಸೇರಿ ನಾಲ್ವರು ಅತ್ಯಾಚಾರಗೈದು ಗುಪ್ತಾಂಗಕ್ಕೆ ರಾಡ್ ಹಾಕಿ ಕೊಲೆಗೈದಿದ್ದರು.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 06:55 pm
Mangalore Correspondent
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
29-10-25 02:53 pm
Mangalore Correspondent
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm