ಬ್ರೇಕಿಂಗ್ ನ್ಯೂಸ್
11-01-21 10:42 am Udupi Correspondent ಕ್ರೈಂ
Photo credits : Representative Image
ಉಡುಪಿ, ಜ.11 : ಪೊಲೀಸರ ಸೋಗಿನಲ್ಲಿ ಅಪರಿಚಿತರಿಬ್ಬರು ಮಹಿಳೆಯೊಬ್ಬರ ಚಿನ್ನಾಭರಣ ದೋಚಿರುವ ಘಟನೆ ಅಂಬಲಪಾಡಿಯ ಶ್ಯಾಮಿಲಿ ಹಾಲ್ ಸಮೀಪ ನಡೆದಿದೆ.
ಅಂಬಲಪಾಡಿ ನಿವಾಸಿ ವಸಂತಿ(47) ಎಂಬವರು ಹಾಲ್ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನೊಂದಿಗೆ ನಿಂತುಕೊಂಡಿದ್ದರು. ಮಹಿಳೆಯನ್ನು ತಡೆದ ಅವರು, ನಾವು ಪೊಲೀಸರು, ಮುಂದೆ ಕಳ್ಳರು ಮಹಿಳೆಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದು ಕೊಂಡು ಹೋಗಿದ್ದಾರೆ. ನಿಮ್ಮ ಚಿನ್ನಾಭರಣಗಳನ್ನು ತೆಗೆದು ಕೊಡಿ, ಪೇಪರ್‌ನಲ್ಲಿ ಕಟ್ಟಿಕೊಡುತ್ತೇನೆ ಎಂದು ನಂಬಿಸಿದರು.
ಅದರಂತೆ ವಸಂತಿ ತನ್ನಲ್ಲಿದ್ದ 40,000 ರೂ. ಮೌಲ್ಯದ ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್ ತೂಕದ ಎರಡು ಚಿನ್ನದ ಬಳೆಗಳನ್ನು ಅವರಿಗೆ ನೀಡಿದರು. ಅವರು ಅದನ್ನು ಪೇಪರ್ ನಲ್ಲಿ ಸುತ್ತಿ ವಾಪಸು ಕೊಟ್ಟಿದ್ದು ಬೈಕಿನಲ್ಲಿ ಹೋದರೆನ್ನಲಾಗಿದೆ. ಆದರೆ, ಕೆಲಹೊತ್ತಿನ ಬಳಿಕ ಅನುಮಾನಗೊಂಡ ವಸಂತಿ ಪೇಪರ್ ಬಿಡಿಸಿ ನೋಡಿದ್ದು ಅದರಲ್ಲಿ ಐದು ನಕಲಿ ಬಳೆಗಳಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi Bike Brone Chain Snatachers loot gold from a woman stating they are police and escape from the spot.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm