ಬ್ರೇಕಿಂಗ್ ನ್ಯೂಸ್
11-01-21 05:15 pm Bangalore Correspondent ಕ್ರೈಂ
ಬೆಂಗಳೂರು, ಜ.11: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಮೂಲದ ಮುಸ್ಲಿಂ ಸೋದರರಿಬ್ಬರು ಹಿಂದು ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿ, ಮುಸ್ಲಿಂ ಆಗಿ ಮತಾಂತರಿಸಲು ಯತ್ನಿಸಿದ ಪ್ರಕರಣದ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.
ಧರ್ಮಸ್ಥಳ ಬಳಿಯ ನಿವಾಸಿಗಳಾಗಿರುವ ಶಬೀರ್ ಅಹ್ಮದ್ ಮತ್ತು ಆತನ ತಮ್ಮ ಮೊಹಮ್ಮದ್ ರಿಲ್ವಾನ್ ಯುವತಿಗೆ ಅತ್ಯಾಚಾರಗೈದು ಲೈಂಗಿಕ ಹಿಂಸೆ ನೀಡಿದ ಧೂರ್ತ ಯುವಕರು. ಚನ್ನಮ್ಮನ ಕೆರೆ ನಿವಾಸಿಯಾಗಿರುವ ಯುವತಿ ಎರಡು ವರ್ಷಗಳ ಹಿಂದೆ ಸ್ಪಾ ಒಂದರಲ್ಲಿ ರಿಸೆಪ್ಶನ್ ಆಗಿ ಕೆಲಸಕ್ಕಿದ್ದಳು. ಅಲ್ಲಿಗೆ ಬರುತ್ತಿದ್ದ ಶಬೀರ್ ಅಹ್ಮದ್, ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು ತನ್ನನ್ನು ಹೊಟೇಲ್ ಓನರ್ ಎಂದು ಹೇಳಿಕೊಂಡಿದ್ದಾನೆ. ಆನಂತರ ಆಕೆಯನ್ನು ಬ್ರಿಗೇಡ್ ರಸ್ತೆಯಲ್ಲಿರುವ ಹೊಟೇಲ್ ಒಂದಕ್ಕೆ ರಿಸೆಪ್ಶನ್ ಆಗಿ ಸೇರಿಸಿದ್ದ. ಆನಂತರ ಪ್ರೀತಿಯ ನಾಟಕವಾಡಿ ಮದುವೆಯಾಗುವ ಆಮಿಷವೊಡ್ಡಿ ಅತ್ಯಾಚಾರ ನಡೆಸಿದ್ದಾನೆ. ಅದೇ ಹೊಟೇಲಿನಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಬೀರ್ ತಮ್ಮ ಮೊಹಮ್ಮದ್ ರಿಲ್ವಾನ್, ನಿನಗೆ ಅಣ್ಣ ಮೋಸ ಮಾಡಿದ್ದಾನೆ. ನಾನು ಬಾಳು ಕೊಡುತ್ತೇನೆ. ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಆಕೆಯ ಮನೆಯವರೊಂದಿಗೆ ಸ್ನೇಹ ಬೆಳೆಸಿಕೊಂಡು ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ.
ಎರಡು ತಿಂಗಳ ಹಿಂದೆ ಈ ಬಗ್ಗೆ ಮನೆಯವರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ಜ.24ರಂದು ಮದುವೆಗೆ ಮುಹೂರ್ತ ರೆಡಿ ಮಾಡಿದ್ದಾನೆ. ಇದೇ ವೇಳೆಗೆ, ಮೊಹಮ್ಮದ್ ರಿಲ್ವಾನ್ ಗೆ ಈ ಮೊದಲೇ ಮದುವೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಉಜಿರೆ ಬಳಿಯ ನಿವಾಸಿಗಳಾಗಿರುವ ಈ ಸೋದರರಿಬ್ಬರು ಬೆಂಗಳೂರಿನಲ್ಲಿ ಲವ್ ಜಿಹಾದ್ ನಡೆಸುತ್ತಿದ್ದಾರೆಂದು ವದಂತಿ ಹಬ್ಬಿತ್ತು. ಹಳೆಯ ಮದುವೆಯ ಮತ್ತು ಈಗ ನಿಶ್ಚಿತಾರ್ಥ ಆಗಿರುವ ಯುವತಿಯ ಫೋಟೋಗಳು ಹರಿದಾಡಿದ್ದವು. ಇಷ್ಟಾಗುತ್ತಿದ್ದಂತೆ, ಯುವತಿಯ ತಂದೆಗೆ ಬಜರಂಗದಳ ಕಾರ್ಯಕರ್ತರು ಫೋನ್ ಮಾಡಿ, ಆತನಿಗೆ ಮೊದಲೇ ಮದುವೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಶಾಕ್ ಗೆ ಒಳಗಾಗಿದ್ದ ಯುವತಿ ತಂದೆಯನ್ನು ಸೋದರರಿಬ್ಬರು ಹೊಟೇಲಿಗೆ ಕರೆಸಿ, ದೂರು ದಾಖಲಿಸದಂತೆ ಒತ್ತಡ ಹೇರಿದ್ದಾರೆ. ಆದರೆ, ಮದುವೆ ಗಂಡು ಆನಂತರ ನಾಪತ್ತೆಯಾಗಿದ್ದ.
ಅಚ್ಚುಕಟ್ಟು ಠಾಣೆಯ ಪೊಲೀಸರು ಕೂಡ, ಮೊದಲಿಗೆ ಮುಸ್ಲಿಂ ಸೋದರರಿಬ್ಬರ ಪರವಾಗಿ ವಕಾಲತ್ತು ನಡೆಸಿದ್ದಾರೆ. ಆ ಹೊಟೇಲ್ ಶಾಸಕ ಎನ್.ಎ.ಹ್ಯಾರಿಸ್ ಗೆ ಸೇರಿದ್ದು ಎನ್ನಲಾಗುತ್ತಿದ್ದು, ಅದನ್ನು ಶಬೀರ್ ಅಹ್ಮದ್ ಬಾಡಿಗೆ ಪಡೆದು ನಡೆಸುತ್ತಿದ್ದ. ಬಳಿಕ ತಮ್ಮ ರಿಲ್ವಾನ್ ಕೂಡ ಅಲ್ಲಿಗೆ ತೆರಳಿ, ಹೊಟೇಲ್ ಉಸ್ತುವಾರಿ ನೋಡಿಕೊಂಡಿದ್ದ. ಹೀಗಾಗಿ ಪೊಲೀಸರ ಮೂಲಕ ಪ್ರಭಾವ ಬಳಸ್ಕೊಂಡು ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದಾರೆ. ಆದರೆ, ಈ ಮಧ್ಯೆ ಮುಸ್ಲಿಂ ಸೋದರರ ಕಿತಾಪತಿ ಜಾಲತಾಣದಲ್ಲಿ ಬಹಿರಂಗವಾಗಿದ್ದು, ಲವ್ ಸೆಕ್ಸ್ ದೋಖಾ ನಡೆಸುವ ಲವ್ ಜಿಹಾದ್ ದಂಧೆ ಎನ್ನುವ ಶಂಕೆ ಮೂಡಿದೆ. ಆನಂತರ ಬಜರಂಗದಳ ಪ್ರಮುಖರು ಸೇರಿ ಯುವತಿ ಮೂಲಕ ಪೊಲೀಸ್ ಕೇಸು ದಾಖಲಿಸಿದ್ದಾರೆ.
ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಒತ್ತಡ ಹೇರಿದ್ದಾಗಿ ಉಲ್ಲೇಖಿಸಿದ್ದಾಳೆ. ಅಲ್ಲದೆ, ನಿಶ್ಚಿತಾರ್ಥದ ಬಳಿಕ ಮುಸ್ಲಿಂ ಆಗಲು ಒತ್ತಾಯಿಸಿದ್ದ. ತಾನು ಹಣೆಗೆ ಕುಂಕುಮ ಇಡದಂತೆ ತಡೆಯುತ್ತಿದ್ದರು. ನೀನು ದುಬೈಗೆ ಬಂದರೆ ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ಹೇಳಿ ನನ್ನ ಪಾಸ್ ಪೋರ್ಟ್, ಇನ್ನಿತರ ದಾಖಲೆಗಳನ್ನು ಪಡೆದು ಖಾಲಿ ಹಾಳೆಗಳಿಗೆ ಸಹಿ ಹಾಕಿಸಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಕೇರಳದ ಲವ್ ಜಿಹಾದ್ ಪ್ರಕರಣದಲ್ಲಿ ಹುಡುಗಿಯನ್ನು ಲೈಂಗಿಕವಾಗಿ ಬಳಸ್ಕೊಂಡು ಮದುವೆಯಾಗುವ ನಾಟಕವಾಡಿ ವಿದೇಶಕ್ಕೆ ಕೊಂಡೊಯ್ದು ಮಾರಾಟ ಮಾಡುವ ದಂಧೆಯೂ ಇರುವ ಬಗ್ಗೆ ಬೆಳಕಿಗೆ ಬಂದಿತ್ತು. ಪಾಸ್ ಪೋರ್ಟ್ ಪಡೆದು ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದಿದ್ದರ ಹಿಂದೆ ಅದೇ ತೆರನಾದ ದುರುದ್ದೇಶ ಇರುವ ಸಾಧ್ಯತೆಯಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಈಗ ಶಬೀರ್ ಅಹ್ಮದ್ ನನ್ನು ಬಂಧಿಸಿದ್ದು, ಮೊಹಮ್ಮದ್ ರಿಲ್ವಾನ್ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
Mangalorean Muslim brothers from Ujre alleged of rape and love jihad in Bangalore. It is believed that the guy who promised to marry was raped by his brother and him several times.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm