ಬ್ರೇಕಿಂಗ್ ನ್ಯೂಸ್
15-01-21 05:30 pm Mangalore Correspondent ಕ್ರೈಂ
Photo credits : Instagram: azlins_quotes today
ಮಂಗಳೂರು, ಜ.15: ಬಸ್ಸಿನಲ್ಲಿ ಕಿಡಿಗೇಡಿಯೊಬ್ಬ ತನ್ನ ಮೈಯನ್ನು ಮುಟ್ಟಿ ಕಿರುಕುಳ ನೀಡಿದ್ದಲ್ಲದೆ, ಇದರ ಬಗ್ಗೆ ಬಸ್ಸಿನ ಸಿಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ನೊಂದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಯುವತಿಯ ಜಾಲತಾಣದ ಪೋಸ್ಟ್ ಈಗ ವೈರಲ್ ಆಗಿದ್ದು ಆರೋಪಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜನವರಿ 14ರಂದು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಬಸ್ ನಿಲ್ದಾಣದಿಂದ ಖಾಸಗಿ ಬಸ್ಸಿನಲ್ಲಿ ಮಂಗಳೂರಿನ ಪಂಪ್ ವೆಲ್ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಿರುಕುಳಕ್ಕೆ ಒಳಗಾದ ಮುಸ್ಲಿಂ ಹುಡುಗಿ ತನ್ನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಯುವಕನ ಕುಕೃತ್ಯದ ಬಗ್ಗೆ ಬರೆದುಕೊಂಡಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಜ.15ರ ಸಂಜೆ ವೇಳೆಗೆ ಈ ಪೋಸ್ಟ್ 43 ಸಾವಿರಕ್ಕೂ ಹೆಚ್ಚು ಷೇರ್ ಆಗಿದ್ದು 1500ರಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಯುವತಿಯ ಧೈರ್ಯದ ಬಗ್ಗೆ ಮೆಚ್ಚುಗೆ ತೋರಿದ್ದಾರೆ.
ಹುಡುಗಿ ಇಂಗ್ಲಿಷ್ ನಲ್ಲಿ ಬರೆದಿರುವ ಪತ್ರ ಹೀಗಿದೆ. ‘’ಇಂದು (14-01-2021) ಮಧ್ಯಾಹ್ನ 3.45ರ ಸುಮಾರಿಗೆ ನಾನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ನಿಲ್ದಾಣದಿಂದ ಮಂಗಳೂರಿನ ಪಂಪ್ ವೆಲ್ ಗೆಂದು ಮಹೇಶ್ ಬಸ್ಸಿನಲ್ಲಿ ಬರುತ್ತಿದ್ದೆ. ಈ ಚಿತ್ರದಲ್ಲಿರುವ ವ್ಯಕ್ತಿ ಕೆ.ಎಸ್. ಹೆಗ್ಡೆ ಬಸ್ ನಿಲ್ದಾಣದಲ್ಲಿ ಬಸ್ ಏರಿದ್ದು, ನನ್ನ ಹತ್ತಿರದ ಸೀಟಿನಲ್ಲಿ ಕುಳಿತಿದ್ದ. ಆದರೆ, ಸೀಟಿನಲ್ಲಿ ಕುಳಿತು ಒಂದು ಮೊಬೈಲ್ ನಲ್ಲಿ ಮಾತನಾಡುತ್ತಾ ಬಿಝಿ ಎನ್ನುವಂತೆ ನಟಿಸುತ್ತಿದ್ದ. ಮತ್ತೊಂದು ಕೈಯಲ್ಲಿ ನನ್ನ ಮೈಯನ್ನು ಮುಟ್ಟುತ್ತಿದ್ದ. ನನಗೆ ಕಿರುಕುಳ ನೀಡುವುದನ್ನು ಅರಿತು, ಸೀಟಿನ ಬದಿಗೆ ಸರಿದೆ. ಆದರೆ, ಆತ ಆನಂತರವೂ ನನ್ನ ಮೈಯನ್ನು ಮುಟ್ಟುವುದನ್ನು ಮುಂದುವರಿಸಿದ. ಆಬಳಿಕ ಆತನನ್ನು ಗಟ್ಟಿ ಸ್ವರದಲ್ಲಿ ಗದರಿದ್ದು, ನಂತರ ಅಲ್ಲಿಂದ ಎದ್ದು ಬಸ್ಸಿನ ಹಿಂದಕ್ಕೆ ಹೋಗಿದ್ದ. ಆದರೆ, ಸ್ವಲ್ಪ ಹೊತ್ತಿನಲ್ಲಿ ಎರಡು ಮೂರು ಸ್ಟಾಪ್ ಕಳೆದು ನೋಡಿದಾಗ, ಆತ ಇನ್ನೊಂದು ಬಸ್ಸಿನಿಂದ ಇಳಿದು ಮತ್ತೆ ಅದೇ ಮಹೇಶ್ ಬಸ್ಸಿಗೆ ಬರುವುದನ್ನು ಕಂಡೆ. ಮತ್ತೆ ಬಂದು ನಾನು ಕುಳಿತಿದ್ದ ಸೀಟಿನ ಹಿಂಭಾಗದಲ್ಲಿ ಕುಳಿತಿದ್ದಲ್ಲದೆ, ಅದೇ ಚಾಳಿಯನ್ನು ಮುಂದುವರಿಸಿದ…
‘’ನಾನು ಆತನಿಗೆ ಮತ್ತೆ ಬೈದಿದ್ದಲ್ಲದೆ, ಬೇರೆ ಜಂಟ್ಸ್ ಸೀಟಿಗೆ ಹೋಗಿ ಕುಳಿತುಕೊಳ್ಳಬಹುದಲ್ಲವೇ ಎಂದು ಹೇಳಿದೆ. ಆದರೆ, ನನ್ನ ಮಾತನ್ನು ಆತ ಕೇರ್ ಮಾಡಲಿಲ್ಲ. ನಾನು ಎಲ್ಲ ಪಬ್ಲಿಕ್ ಮುಂದೆ ಬೈದರೂ ಆತ ಏನೂ ಆಗಿಲ್ಲವೆಂಬಂತೆ ನನ್ನನ್ನು ಮುಟ್ಟುವ ಚಾಳಿಯನ್ನು ಮುಂದುವರಿಸಿದ್ದ. ವಿಶೇಷ ಅಂದರೆ, ಇದೆಲ್ಲವನ್ನೂ ಇತರೇ ಪ್ರಯಾಣಿಕರೆಲ್ಲ ನೋಡಿದ್ದು ಬಿಟ್ಟರೆ ಏನೂ ಪ್ರತಿಕ್ರಿಯಿಸಲಿಲ್ಲ. (ಛೀ.. ನಾನು ಅವರನ್ನು ಪ್ಯಾಸೆಂಜರ್ ಅನ್ನಲ್ಲ, ಪ್ರೇಕ್ಷಕರು ಅಂತೇನೆ) ಬಸ್ಸಿನ ಡ್ರೈವರ್, ಕಂಡಕ್ಟರ್ ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಮತ್ತೆ ಆತನನ್ನು ಬೈದಿದ್ದಲ್ಲದೆ, ನಿನ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ. ಮುಂದೆ ಯಾವತ್ತೂ ಜೀವಮಾನದಲ್ಲಿ ಇಂಥ ಕೆಲಸ ಮಾಡಬಾರದು, ಹಾಗೆ ಮಾಡ್ತೀನಿ ಎಂದು ಹೇಳಿದೆ. ಅದಕ್ಕಾತ, ತನ್ನ ಮುಖದಲ್ಲಿದ್ದ ಮಾಸ್ಕ್ ತೆಗೆದು ಫೋಟೋಗೆ ಪೋಸು ನೀಡಿದ್ದಲ್ಲದೆ, ಫೋಟೋ ತೆಗೆದಿದ್ದಕ್ಕೆ ಥ್ಯಾಂಕ್ಸ್ ಎಂದುಬಿಟ್ಟ…
‘’ಹುಡುಗಿಯರು ಎಚ್ಚತ್ತುಕೊಳ್ಳಬೇಕು ಎಂಬ ನೆಲೆಯಲ್ಲಿ ಈ ಪೋಸ್ಟ್ ಮಾಡುತ್ತಿದ್ದೇನೆ. ಯಾಕಂದ್ರೆ, ಬಸ್ಸಿನಲ್ಲಿ ಹೋಗುವ ಯುವತಿಯರು, ಕಾಲೇಜು ಹುಡುಗಿಯರಿಗೆ ಇಂಥ ಕಿರುಕುಳ ಸಾಮಾನ್ಯ ಅನ್ನುವಂತಾಗಿದೆ. ಇದೇನು ಮೊದಲ ಬಾರಿಗೆ ಆಗ್ತಿರೋದೂ ಅಲ್ಲ. ಹಲವು ಬಾರಿ ಆಗಿರುವುದನ್ನು ಕೇಳಿದ್ದೇನೆ. ಆದರೆ, 99 ಶೇಕಡಾ ಮಂದಿ ಇದರ ಬಗ್ಗೆ ಹೇಳಿಕೊಳ್ಳುವುದಿಲ್ಲ. ಗೌರವ, ಸಮಾಜಕ್ಕೆ ಅಂಜಿ ಯಾರಲ್ಲೂ ಹೇಳಿಕೊಳ್ಳಲು ಮುಂದೆ ಬರಲ್ಲ. ಯಾವ ಕಾನೂನು, ಯಾವುದೇ ಪೊಲೀಸ್ ಆಗಲೀ, ಯಾವನೇ ಮನುಷ್ಯ ಕೂಡ ನಮ್ಮ ಸಹಾಯಕ್ಕೆ ಬರುವುದಿಲ್ಲ. ಎಲ್ಲರೂ ಏನೋ ರಿಯಾಲಿಟಿ ಶೋ ಎನ್ನುವ ರೀತಿ ನೋಡುತ್ತಾರೆ.
‘’ನನ್ನ ಕಳಕಳಿಯ ವಿನಂತಿ ಏನಂದ್ರೆ, ಈ ಪೋಸ್ಟ್ ಓದುವ ಸೋದರ, ಸೋದರಿಯರೆಲ್ಲ ಇದನ್ನು ಸಾಧ್ಯವಾದಷ್ಟು ಷೇರ್ ಮಾಡಿ. ಹೀಗೆ ಮಾಡುವುದರಿಂದ ಇಂಥ ಕುಕೃತ್ಯ ಮರುಕಳಿಸುವುದನ್ನು ತಪ್ಪಿಸಬಹುದು. ಇನ್ನೂ ಸೈಲಂಟ್ ಆಗಿದ್ದರೆ, ಇಂಥ ವ್ಯಕ್ತಿಗಳು ನಾಳೆ ಬೇರೊಬ್ಬ ಯುವತಿಗೆ ಇಂಥದ್ದೇ ಕಿರುಕುಳ ನೀಡುವುದನ್ನು ಮುಂದುವರಿಸುತ್ತಾರೆ…’’ ಹೀಗೆಂದು ಆ ಯುವತಿ ತನ್ನ ದೀರ್ಘ ಪತ್ರದಲ್ಲಿ ಬರೆದುಕೊಂಡಿದ್ದಾಳೆ. ಘಟನೆ ಬಗ್ಗೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿ, ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಒಳಪಡಿಸಬೇಕಾಗಿದೆ.
A Muslim woman has alleged sexual harassment on her way from KS Hegde to Pumpwell in the private bus. She has shared this message with a picture on Instagram.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm