ಬ್ರೇಕಿಂಗ್ ನ್ಯೂಸ್
16-01-21 02:29 pm Mangalore Correspondent ಕ್ರೈಂ
ಮಂಗಳೂರು, ಜ.16: ಕೊಂಚಾಡಿಯ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾವೂರಿನ ರಕ್ಷಕ್ ಶೆಟ್ಟಿ (22), ಬೊಂದೇಲ್ ನಿವಾಸಿ ಆಲಿಸ್ಟರ್ ತಾವ್ರೋ(21) ಮತ್ತು ಕಾವೂರಿನ ಕೆಐಓಸಿಎಲ್ ಕ್ವಾಟ್ರಸ್ ನಿವಾಸಿ ರಾಹುಲ್ ಸಿನ್ಹಾ(21) ಬಂಧಿತರು.
ಪೊಲೀಸರು ಸಿಸಿಟಿವಿ ಆಧರಿಸಿ, ತನಿಖೆ ನಡೆಸಿದಾಗ ಮೂರು ಮಂದಿ ಒಂದೇ ಸ್ಕೂಟರಿನಲ್ಲಿ ಬಂದಿದ್ದು ಕೊಂಚಾಡಿ ಮಹಾಲಸಾ ನಾರಾಯಣಿ ದೇವಸ್ಥಾನದ ಮುಂಭಾಗದಲ್ಲಿ ಬಾಲಕರನ್ನು ಅಪಹರಣ ನಡೆಸಲು ಯತ್ನಿಸಿದ್ದು ಕಂಡುಬಂದಿತ್ತು. ಮೂವರನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು ಬೇರೆಯದ್ದೇ ಕತೆ ಹೇಳಿದ್ದಾರೆ.
ತಾವು ಅಣಕು (ಫ್ರಾಂಕ್) ವಿಡಿಯೋ ಮಾಡುವುದಕ್ಕಾಗಿ ಬಾಲಕರನ್ನು ಗೋಣಿ ಚೀಲದಲ್ಲಿ ಮುಸುಕು ಹಾಕುವ ಪ್ರಯೋಗ ನಡೆಸಿದ್ದೆವು. ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಯೂಟ್ಯೂಬ್ ಅಪ್ಲೋಡ್ ಮಾಡಲು ಯೋಜನೆ ಹಾಕಿದ್ದೆವು. ಬೇರಾವುದೇ ದುರುದ್ದೇಶ ಇರಲಿಲ್ಲ ಎಂದು ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದಾರೆ. ಆದರೆ, ಪೊಲೀಸರು ಮೂವರ ಪೂರ್ವಾಪರ ವಿಚಾರಿಸಿದಾಗ, ಮೂವರ ವಿರುದ್ಧವೂ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ.
ರಕ್ಷಕ್ ಶೆಟ್ಟಿ ವಿರುದ್ಧ ಮಂಗಳೂರು ಪೂರ್ವ ಠಾಣೆಯಲ್ಲಿ 2018ರಲ್ಲಿ ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಆಲಿಸ್ಟರ್ ವಿರುದ್ಧ ಕಾವೂರು ಠಾಣೆಯಲ್ಲಿ 2017, 2019 ಮತ್ತು 2020ರಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಗಾಂಜಾ ಸಂಬಂಧ ಪ್ರಕರಣ ದಾಖಲಾಗಿದೆ. ರಾಹುಲ್ ಸಿನ್ಹ ವಿರುದ್ಧವೂ ಕಾವೂರು ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ, ಪೊಲೀಸರು ಅವರನ್ನು ಅಷ್ಟಕ್ಕೇ ಬಿಡಲು ತಯಾರಿಲ್ಲ. ಅಪರಾಧ ಪ್ರಕರಣಗಳ ಹಿನ್ನೆಲೆ ಇರುವುದರಿಂದ ಬಾಲಕರನ್ನು ಯಾವುದೋ ಉದ್ದೇಶ ಇಟ್ಟುಕೊಂಡು ಕಿಡ್ನಾಪ್ ನಡೆಸಲು ಸಂಚು ಹೂಡಿದ್ದರೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ಮೂವರು ಬಾಲಕರು ದೇವಸ್ಥಾನ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮೂವರು ಆಗಂತುಕರು ಗೋಣಿಚೀಲ ಮುಸುಕು ಹಾಕಿ ಅಪಹರಿಸಲು ಯತ್ನಿಸಿದ್ದರು. ಆದರೆ, ಬಾಲಕರು ಬೊಬ್ಬಿಟ್ಟಿದ್ದರಿಂದ ಅಲ್ಲಿಂದ ಓಡಿ ಹೋಗಿದ್ದರು. ವಿಡಿಯೋ ಮಾಡುವುದಕ್ಕಾಗಿಯೇ ಈ ಕೃತ್ಯ ನಡೆಸಿದ್ದರೆ, ಏನೋ ಮಾಡಲು ಹೋಗಿ ಹರೆಯದ ಯುವಕರು ಜೈಲು ಪಾಲಾದಂತಾಗಿದೆ.
Video:
Three youths who were in an attempt of Kidnapping three children at Konchady in Mangalore have been arrested by the city police.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm