ಬ್ರೇಕಿಂಗ್ ನ್ಯೂಸ್
16-01-21 06:22 pm Mangalore Correspondent ಕ್ರೈಂ
ಮಂಗಳೂರು, ಜ.16: ದೇವಸ್ಥಾನಗಳಿಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಹ್ಯಾಂಡ್ ಬ್ಯಾಗ್ ಎಳೆದು ಹಣ ಎಗರಿಸುವ ಪ್ರಕರಣವನ್ನು ಬೆಂಬತ್ತಿದ ಬಜ್ಪೆ ಪೊಲೀಸರು ಗದಗ ಮೂಲದ ಕಳ್ಳರ ಕುಟುಂಬವನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಯಮುನವ್ವ ಮುತ್ತಪ್ಪ ಛಲವಾದಿ (55) , ಪ್ರಕಾಶ್ ಚೆನ್ನಪ್ಪ (27) , ಶೋಭಾ ಮುಟಗಾರ (45), ಕುಮಾರವ್ವ ಮಾರುತಿ ಮೆಟಗಾರ (40), ಶಾಂತಮ್ಮ ಮೆಟಗಾರ(56), ಚಂದ್ರಶೇಖರ್ ಕಮರುಡಿ (49) ಬಂಧಿತರು.


ಜ.12ರಂದು ಯಶೋಧಾ ಗೌಡ ಎಂಬವರು ಕಟೀಲು ದೇವಸ್ಥಾನಕ್ಕೆ ಹೋಗಿದ್ದಾಗ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನಿದ್ದ ತಂಡ, ಅವರ ಬ್ಯಾಗ್ ಎಳೆದು ಅದರಲ್ಲಿದ್ದ ನಾಲ್ಕು ಸಾವಿರ ಹಣವನ್ನು ಕಳವು ಮಾಡಿತ್ತು. ಪ್ರಕರಣ ಸಂಬಂಧಿಸಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂಡ ತೂಫಾನ್ ವಾಹನದಲ್ಲಿ ಪರಾರಿಯಾಗಿದ್ದರು ಎಂಬ ಸುಳಿವು ಆಧರಿಸಿ, ತನಿಖೆ ಕೈಗೊಂಡಿದ್ದರು. ಬಳಿಕ ಪೊಳಲಿ ದೇವಸ್ಥಾನದ ಬಳಿ ತೂಫಾನ್ ವಾಹನ ಕಂಡುಬಂದಿದ್ದು ಪೊಲೀಸರು ಅಡ್ಡೂರಿನಲ್ಲಿ ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಕುಟುಂಬಸ್ಥರ ಕಳವು ಕೃತ್ಯ ಬಯಲಾಗಿದೆ.


ವಿಚಾರಣೆ ವೇಳೆ, ಇದೇ ತಂಡ ಕೊಲ್ಲೂರು, ಮುರುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಜನ ಸೇರುವ ಉತ್ಸವ ಸಂದರ್ಭ ಮಹಿಳೆಯರ ಬ್ಯಾಗ್ ಕಳವುಗೈದು ಹಣ ಎಗರಿಸುವ ಜಾಲದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಏಳು ಮೊಬೈಲ್, 71 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.
Bajpe police arrested six people include four women of Gadag district theft case in the temple premise
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm