ಬ್ರೇಕಿಂಗ್ ನ್ಯೂಸ್
18-01-21 11:13 am Headline Karnataka News Network ಕ್ರೈಂ
ಬಳ್ಳಾರಿ, ಜ.18 : ದೊಡ್ಡ ಮೊತ್ತದ ಲೋನ್ ಕೋಡಿಸುತ್ತೇವೆ ಎಂದು ನಂಬಿಸಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರನ್ನು ವಂಚಿಸಿ 34 ಲಕ್ಷ ರೂಪಾಯಿ ದೋಚಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಆರೋಗ್ಯಪ್ಪ (43) ಖದೀಮರಿಂದ ಮೋಸ ಹೋಗಿರುವ ಹೆಡ್ ಕಾನ್‌ಸ್ಟೇಬಲ್. ಇವರು ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿದ್ದು ಸಂಜಯ್ ಶರ್ಮ ಎಂಬಾತ ಲೋನ್ ಕೊಡಿಸುವುದಾಗಿ ಮೋಸ ಮಾಡಿದ್ದಾನೆ.
ರಾಜಸ್ಥಾನದಿಂದ ಕಂಪನಿಯೊಂದರಿಂದ ಕವಿತಾದೇವಿ ಎಂದು ಹೇಳಿಕೊಂಡು ಕರೆ ಮಾಡಿ 50 ಲಕ್ಷ ರೂ. ಹೌಸಿಂಗ್ ಸಾಲದ ಆಫರ್ ಇದೆ. ವರ್ಷಕ್ಕೆ ಎರಡರಷ್ಟು ಬಡ್ಡಿ ಮಾತ್ರ ಎಂದು ಹೇಳಿದ್ದರು. ನಿಜವೆಂದು ನಂಬಿದ ಆರೋಗ್ಯಪ್ಪ, ಅವರು ಹೇಳಿದ ಹಾಗೆ ಕೇಳಿದ್ದಾರೆ. ತಮ್ಮ ಮೂಲ ದಾಖಲೆಗಳನ್ನು ವ್ಯಾಟ್ಸಪ್ ಮೂಲಕ ಆರ್ಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಲ್ಲ ಪ್ರತಿಗಳನ್ನು ಕಳಿಸಿದ್ದಾರೆ. ನಿಮಗೆ 50 ಲಕ್ಷ ಹೌಸ್ ಲೋನ್ ಮಂಜೂರಾಗಿದೆ. ಅದಕ್ಕೆ ಶುಲ್ಕ ಭರಿಸಬೇಕು ಎಂದು ತಿಳಿಸಿದ್ದಾರೆ. ಕಾರಣ ಮೊದಲಿಗೆ 93 ಸಾವಿರ ರೂಪಾಯಿಗಳನ್ನು ಅಡ್ವಕೇಟ್ ಮತ್ತು ಶೂರಿಟಿ ಶುಲ್ಕಕ್ಕೆ 2 ಲಕ್ಷ 50 ಸಾವಿರ, ಜಿಎಸ್‍ಟಿ 3 ಲಕ್ಷ 98 ಸಾವಿರ ಜೊತೆಗೆ ಇನ್ನಿತರ ಶುಲ್ಕ ಎಂದು ಒಟ್ಟು 22 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಆರ್‍ಟಿಜಿಎಸ್ ಮತ್ತು ನೆಫ್ಟ್ ನಲ್ಲಿ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಇದರಂತೆ ಆರೋಗ್ಯಪ್ಪ ಹಣವನ್ನು ಕಳುಹಿಸಿದ್ದಾರೆ. ತದನಂತರ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿದ್ದು ತಾವು ಮೋಸ ಹೋಗಿರುವುದು ತಿಳಿದು ಬಂದಿದೆ.
ವಂಚಕರು ಆರೋಗ್ಯಪ್ಪ ಅವರಿಂದ ಹಂತ ಹಂತವಾಗಿ 12 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಆರೋಗ್ಯಪ್ಪ ಒಂದು ಫೋನ್ ಕರೆ ನಂಬಿ 34 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಬಳ್ಳಾರಿ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a Schoking Incident, a Bellary Head Constable has been cheated of Rs 34 Lakhs in the name of House Laon. The caller called himself naming a company from Rajasthan.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
16-01-25 03:54 pm
Mangalore Correspondent
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm