ಬ್ರೇಕಿಂಗ್ ನ್ಯೂಸ್
18-01-21 06:56 pm Mangalore Correspondent ಕ್ರೈಂ
ಉಳ್ಳಾಲ, ಜ.18: ಹದಿನೈದು ವರ್ಷದ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಬ್ರಾಹ್ಮಣ ಹೆಣ್ಮಗಳನ್ನು ಗಂಡನಿಂದ ದೂರವಾದ ಬಳಿಕ ಉಳ್ಳಾಲ ಎಸ್ ಡಿಪಿಐ ಮುಖಂಡನೊಬ್ಬ ಆಕೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಲ್ಲದೆ ಇಬ್ಬರು ಸಣ್ಣ ಮಕ್ಕಳಿಗೂ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಎಸ್ ಡಿಪಿಐ ಉಳ್ಳಾಲ ಸಮಿತಿ ಕ್ಷೇತ್ರಾಧ್ಯಕ್ಷ ಸಿದ್ದೀಕ್ ಉಳ್ಳಾಲ್ ಕಾಮುಕ ಕೃತ್ಯ ನಡೆಸಿರುವ ಆರೋಪಿಯಾಗಿದ್ದು ಕೇಸು ದಾಖಲಾಗುತ್ತಲೇ ಪರಾರಿಯಾಗಿದ್ದಾನೆ. ಜನವರಿ 16 ರಂದು ಈತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು ಪೊಲೀಸರು ಗಂಭೀರ ಪ್ರಕರಣವನ್ನು ಹೊರಗೆ ಬಾರದಂತೆ ಮುಚ್ಚಿಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.
ಕೊಣಾಜೆ ನಡುಪದವಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಬ್ರಾಹ್ಮಣ ಯುವತಿಯನ್ನು ಕೇರಳ ಮೂಲದ ಮುಸ್ಲಿಂ ಯುವಕ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆಕೆಯನ್ನ ಮುಸ್ಲಿಂ ಆಗು ಮತಾಂತರಗೊಳಿಸಿದ್ದ. ಮತಾಂತರ ನಂತರ ಯುವತಿ ಆಕೆಯ ಹೆಸರನ್ನು ಹಿಬಾ ಫಾತಿಮಾ ಎಂದು ಬದಲಿಸಿಕೊಂಡಿದ್ದಳು. ಯುವತಿಯನ್ನು ಪ್ರೀತಿಸಿ ಮದುವೆಯಾದ ಕೇರಳದ ಯುವಕ ಆಕೆಗೆ ಎರಡು ಹೆಣ್ಮಕ್ಕಳನ್ನು ಕರುಣಿಸಿದ ಬಳಿಕ ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾನೆ.

ಫಾತಿಮಾ ತನ್ನ 9 ವರ್ಷ ಮತ್ತು 6 ವರ್ಷದ ಎರಡು ಮಕ್ಕಳೊಂದಿಗೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ವಾಸವಾಗಿದ್ದಳು. ಈ ಸಮಯದಲ್ಲಿ ಉಳ್ಳಾಲದ SDPI ಅಧ್ಯಕ್ಷ ಸಿದ್ದೀಕ್ ಉಳ್ಳಾಲ, ಆಕೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಿತನಾಗಿದ್ದ. ಅಲ್ಲದೆ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ಅಕ್ರಮ ಸಂಬಂಧಕ್ಕೆ ಮುಂದಾಗಿದ್ದ. ಆದರೆ, ಈ ನಡುವೆ ಆತ ಮಹಿಳೆಯ ಇಬ್ಬರು ಮಕ್ಕಳ ಮೇಲೆ ಕಣ್ಣು ಹಾಕಿದ್ದ. ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಇದರಿಂದ ಎಚ್ಚೆತ್ತ ಮಹಿಳೆ ಕಳೆದ ಜನವರಿ 16 ರಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದಾಳೆ.
ಮಹಿಳೆಯ ಎರಡು ಹೆಣ್ಮಕ್ಕಳ ಮುಂದೆ ಸಿದ್ದೀಕ್ ಬೆತ್ತಲಾಗಿ ನಿಲ್ಲುತ್ತಿದ್ದನಂತೆ. ಎಚ್ಚೆತ್ತ ಮಹಿಳೆ ಪ್ರತಿಭಟಿಸಿ ದೂರು ಕೊಡುವುದಾಗಿ ಹೇಳಿದ್ದಳು. ಕಳೆದ ಡಿಸೆಂಬರ್ ತಿಂಗಳಲ್ಲೇ ಈ ಬೆಳವಣಿಗೆ ನಡೆದಿದ್ದು ಮಹಿಳೆಗೆ SDPI ಮುಖಂಡರು ಸೇರಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾಳೆ. ಇದರಿಂದ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ ಮಹಿಳೆ, ಇದೀಗ ಮತ್ತೆ ಸಿದ್ದೀಕನ ಕಾಮದಾಟ ಜಾಸ್ತಿ ಯಾಗುತ್ತಿಲೇ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಸಿದ್ದೀಕ್ ಪರಾರಿಯಾಗಿದ್ದಾನೆ.
ಕಳೆದ ಶನಿವಾರ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇಂತಹ ಗಂಭೀರ ಪ್ರಕರಣದ ಬಗ್ಗೆ ಹಿರಿಯ ಪೊಲೀಸರು ಮಾತ್ರ ಟಿಕ್ ಪಿಟಿಕ್ ಎನ್ನುತ್ತಿಲ್ಲ. ಆರೋಪಿಯ ಬಂಧನಕ್ಕೂ ಮುಂದಾಗಿಲ್ಲ.
Love jihad and sexual assault to girl child Ullal police registered pocso act against SDPI leader
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm