ಬ್ರೇಕಿಂಗ್ ನ್ಯೂಸ್
21-01-21 04:28 pm Mangaluru Correspondent ಕ್ರೈಂ
ಮಂಗಳೂರು, ಜ.21: ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಡಿಕೇರಿ ಮೂಲದ ಉಬೈದ್ ಬೆಲ್ಲಿಯತ್ ಅಝೀಝ್ ಎಂಬಾತ ಆರೋಪಿಯಾಗಿದ್ದು 800 ಗ್ರಾಮ್ ಚಿನ್ನವನ್ನು ಗುದ ದ್ವಾರದಲ್ಲಿಟ್ಟು ತರುತ್ತಿದ್ದ.
ಚಿನ್ನವನ್ನು ಪೇಸ್ಟ್ ರೂಪಕ್ಕಿಳಿಸಿ, ಉಂಡೆಯಾಗಿಸಿ ಗುದ ದ್ವಾರದಲ್ಲಿ ತುರುಕಿಸಿಟ್ಟುಕೊಂಡು ತರುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಉಬೈದ್ ಆಗಮಿಸಿದ್ದು ಪರಿಶೀಲನೆ ವೇಳೆ ಸಂಶಯ ಬಂದು ತಪಾಸಣೆ ನಡೆಸಿದ್ದಾರೆ. 24 ಕ್ಯಾರೆಟ್ ಗುಣಮಟ್ಟದ ಚಿನ್ನವಾಗಿದ್ದು 800 ಗ್ರಾಮ್ ಚಿನ್ನದ ಬೆಲೆ 44.2 ಲಕ್ಷ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪತ್ತೆಯಾಗದ್ದು ಹತ್ತು ಪಟ್ಟು ?!
ನಾಲ್ಕು ದಿನಗಳಿಗೊಮ್ಮೆ ಗುದದಲ್ಲಿ ಚಿನ್ನದ ಪೇಸ್ಟ್ ಇಟ್ಟುಕೊಂಡು ಅಕ್ರಮ ಸಾಗಣೆಯ ಪ್ರಕರಣ ಬೆಳಕಿಗೆ ಬರುತ್ತಿದ್ದು ಚಿನ್ನ ಕಳ್ಳಸಾಗಣೆಗೆ ಗುದ ದ್ವಾರವೇ ಹೆಚ್ಚು ಸುರಕ್ಷಿತ ಎನ್ನುವಂತಾಗಿದೆ. ದುಬೈನಿಂದ ನೂರಾರು ಮಂದಿ ಇಂಥ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದ್ದು ಒಂದೆರಡು ಪ್ರಕರಣಗಳಷ್ಟೇ ಹೊರಬರುತ್ತಿವೆ. ಈ ರೀತಿಯ ಕಳ್ಳಸಾಗಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ಪಾತ್ರವೂ ಇಲ್ಲದಿಲ್ಲ. ಪದೇ ಪದೇ ಒಂದೇ ಪ್ರಕಾರದ ಪ್ರಕರಣ ಹೊರ ಬರುತ್ತಿರುವುದರಿಂದ ಇದೇ ಮಾದರಿಯ ಕಳ್ಳಸಾಗಣೆ ಇದರ ನೂರು ಪಟ್ಟು ಆಗುತ್ತಿರುವುದರ ಮುನ್ಸೂಚನೆ ಅನ್ನುವ ಮಾತೂ ಕೇಳಿಬರುತ್ತಿದೆ.
Based on intelligence Customs sleuths of Mangaluru International Airport, one passenger from Dubai was intercepted and gold worth Rs 44.2 lac was recovered and seized on Thursday, January 21.
14-07-25 12:50 pm
Bangalore Correspondent
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm