ಬ್ರೇಕಿಂಗ್ ನ್ಯೂಸ್
24-01-21 08:26 pm Mangaluru Correspondent ಕ್ರೈಂ
ಮಂಗಳೂರು, ಜ.24: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಪತ್ನಿ ಮೇಲೆ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು ಪೊಲೀಸರಿಂದ ಬಂಧನ ಭೀತಿ ಶುರುವಾಗಿದೆ. ಈ ಬಗ್ಗೆ ಅವರ ಪತ್ನಿಯೇ ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಎಎಸ್ ಅಧಿಕಾರಿ ಜಿ.ಟಿ. ದಿನೇಶ್ ಕುಮಾರ್ ಹಾಗೂ ಅತ್ತಿಗೆ ರಮ್ಯಾ ಎಂಬವರ ವಿರುದ್ದ ಪತ್ನಿ ಕೆ.ಪಿ. ದೀಪ್ತಿ ದೂರು ದಾಖಲು ಮಾಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೂಲತಃ ಚಿತ್ರದುರ್ಗದ ಸಂತೆಬೆನ್ನೂರಿನ ದೀಪ್ತಿ ಆರ್.ಆರ್.ನಗರದಲ್ಲಿ ವಾಸವಾಗಿದ್ದು, 2015ರಲ್ಲಿ ಹಿಂದು ಸಂಪ್ರದಾಯದಂತೆ ದಿನೇಶ್ ಕುಮಾರ್ ಜೊತೆಗೆ ಮದುವೆಯಾಗಿದ್ದರು. ದೀಪ್ತಿ ಪೋಷಕರು ವರದಕ್ಷಿಣೆ ರೂಪದಲ್ಲಿ ಒಂದು ಕೆಜಿ ಚಿನ್ನ, ಐದು ಕೆಜಿ ಬೆಳ್ಳಿ ನೀಡಿ ಅದ್ಧೂರಿಯಾಗಿ ಮೈಸೂರಿನಲ್ಲಿ ಮದುವೆ ಮಾಡಿದ್ದರು. ಮದುವೆಯ ಫಲವಾಗಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು.
ಆರಂಭದಲ್ಲಿ ಇಬ್ಬರೂ ಅನೋನ್ಯವಾಗಿದ್ದರು. ನಂತರ ಇಬ್ಬರ ಮಧ್ಯೆ ಮನಸ್ತಾಪ ಆಗಿದ್ದು ದಿನೇಶ್ ಮಗು ಮತ್ತು ಪತ್ನಿಗೆ ಏನನ್ನೂ ಕೊಡದೆ ನಿರ್ಲಕ್ಷ್ಯ ವಹಿಸುತ್ತಿದ್ದರು. ಇದನ್ನು ಪ್ರಶ್ನಿಸಿದರೆ ಮನೆಯಿಂದ ಚಿನ್ನಾಭರಣ ತಂದುಕೊಡುವಂತೆ ಮಾನಸಿಕ ಹಾಗೂ ದೈಹಿಕವಾಗಿ ನಿಂದಿಸುತ್ತಿದ್ದ. ಇದಕ್ಕೆ ದಿನೇಶ್ ಕುಮಾರ್ನ ಅತ್ತಿಗೆ ರಮ್ಯಾ ಸಾಥ್ ನೀಡಿದ್ದಳು. ಕಿರುಕುಳದ ಬಗ್ಗೆ ಗೊತ್ತಾಗಿ ಪತ್ನಿ ಕಡೆಯವರು ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯನ್ನೂ ನಡೆಸಿದ್ದರು. ಸಂಧಾನದ ಬಳಿಕವೂ ಮತ್ತೆ ವರದಕ್ಷಿಣೆ ತರುವಂತೆ ಗಂಡ ಪೀಡಿಸುತ್ತಿದ್ದ ಎಂದು ಪತ್ನಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
A case of Dowry has been filed against Mangalore Urban Development Authority Commissioner Dinesh Kumar by his wife in Bangalore.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 01:37 pm
HK News Staffer
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm