ಬ್ರೇಕಿಂಗ್ ನ್ಯೂಸ್
25-01-21 05:05 pm Headline Karnataka News Network ಕ್ರೈಂ
ಹೈದರಾಬಾದ್, ಜ.25 : ಮೂಢ ನಂಬಿಕೆಗೆ ಬಲಿ ಬಿದ್ದು ಹೆತ್ತವರೇ ತಮ್ಮ ಕೈಯಾರೆ ಬೆಳೆದು ನಿಂತ ಇಬ್ಬರು ಹೆಣ್ಮಕ್ಕಳನ್ನು ಕೊಂದು ಹಾಕಿದ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಪದ್ಮಜಾ ಮತ್ತು ಪುರುಷೋತ್ತಮ ನಾಯ್ಡು ಎಂಬ ದಂಪತಿ, ತಮ್ಮ ಮಕ್ಕಳಾದ ಅಲೇಖ್ಯಾ (27) ಮತ್ತು ಸಾಯಿ ದಿವ್ಯಾ(22) ಅವರನ್ನು ಕೊಲೆಗೈದಿರುವ ಘಟನೆ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ನಡೆದಿದೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು ಕಲಿಯುಗ ಇಲ್ಲಿಗೆ ಮುಗಿದಿದ್ದು ಸೋಮವಾರದಿಂದ ಸತ್ಯಯುಗ ಶುರುವಾಗಲಿದೆ. ಸತ್ಯಯುಗದಲ್ಲಿ ತಮ್ಮ ಇಬ್ಬರು ಮಕ್ಕಳು ಮತ್ತೆ ಬದುಕಿ ಬರಲಿದ್ದಾರೆಂದು ದಂಪತಿ ನಂಬಿದ್ದರು. ರಾತ್ರಿ ವೇಳೆ ಮನೆಯಿಂದ ಚೀರಾಟ ಕೇಳಿದ್ದರಿಂದ ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಬಂದಾಗ, ದಂಪತಿ ಮನೆಯ ಒಳಗೆ ಬಾರದಂತೆ ತಡೆದಿದ್ದರು. ಬಳಿಕ ಬಲವಂತದಿಂದ ಮನೆಯ ಒಳ ಹೊಕ್ಕು ನೋಡಿದಾಗ ಪೂಜಾ ಕೊಠಡಿ ಮತ್ತೊಂದು ರೂಮಿನಲ್ಲಿ ಯುವತಿಯರ ಶವ ಪತ್ತೆಯಾಗಿದೆ. ಶವಕ್ಕೆ ಕೆಂಪು ಬಟ್ಟೆ ಸುತ್ತಿಟ್ಟಿದ್ದನ್ನು ನೋಡಿ, ಪ್ರಶ್ನಿಸಿದಾಗ ಅವರಿಬ್ಬರು ಮತ್ತೆ ಎದ್ದು ಬರುತ್ತಾರೆ. ನೀವು ಮುಟ್ಟಬೇಡಿ ಎಂದರಂತೆ.
ವಿಶೇಷ ಅಂದ್ರೆ, ಹೆತ್ತವರಿಬ್ಬರೂ ವಿದ್ಯಾವಂತರು. ಪದ್ಮಜಾ ಉಪ ಪ್ರಾಂಶುಪಾಲರಾಗಿದ್ದರೆ, ಪುರುಷೋತ್ತಮ ನಾಯ್ಡು ಬೇರೊಂದು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದಲ್ಲದೆ, ಹಿರಿ ಮಗಳು ಅಲೇಖ್ಯಾ ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾಳೆ. ಇನ್ನೊಬ್ಬ ಮಗಳು ಸಾಯಿ ದಿವ್ಯಾ ಬಿಬಿಎ ಮಾಡಿದ್ದು ಮುಂಬೈನಲ್ಲಿ ಎ.ಆರ್.ರೆಹ್ಮಾನ್ ಮ್ಯೂಸಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಯಾಗಿದ್ದಳು. ಕಳೆದ ಲಾಕ್ಡೌನ್ ಸಂದರ್ಭದಲ್ಲಿ ದಿವ್ಯಾ ಮನೆಗೆ ಮರಳಿದ್ದಳು.
ಲಾಕ್ಡೌನ್ ವೇಳೆ ಮನೆಯಲ್ಲಿ ದಂಪತಿ ವಿಚಿತ್ರವಾಗಿ ವರ್ತಿಸುತ್ತಿದ್ದರು. ಅದರಲ್ಲೂ ಪ್ರತಿ ಭಾನುವಾರ ರಾತ್ರಿ ವರ್ತನೆ ವಿಚಿತ್ರವಾಗಿರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಯುವತಿಯರ ಚೀರಾಟ, ಅಳು ಜೋರಾಗಿ ಕೇಳಿದ್ದರಿಂದ ಪೊಲೀಸರಿಗೆ ತಿಳಿಸಿದ್ದರು. ಹೆತ್ತವರೇ ಈ ಕೃತ್ಯವನ್ನು ನಡೆಸಿದ್ದಾರೆಯೇ ಘಟನೆಯಲ್ಲಿ ಇನ್ನಾರದ್ದಾದ್ರೂ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮೇಲ್ನೋಟಕ್ಕೆ ಡಂಬಲ್ಸ್ ಮಾದರಿಯ ದೊಣ್ಣೆಯಿಂದ ಮಕ್ಕಳನ್ನು ತಾಯಿಯೇ ಹೊಡೆದು ಕೊಂದಿದ್ದಾಳೆ ಎನ್ನಲಾಗಿದೆ. ಪೊಲೀಸರು ಇಬ್ಬರ ಶವವನ್ನು ಪೋಸ್ಟ್ ಮಾರ್ಟಂ ಕಳಿಸಿದ್ದು ದಂಪತಿಯನ್ನು ಬಂಧಿಸಿದ್ದಾರೆ.
In a shocking case of human sacrifice, a mother clubbed her two daughters to death on Sunday night in Madanapalle town of Chittoor district in Andhra Pradesh.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm