ಪಿಎಂಸಿ ಬ್ಯಾಂಕ್‌ ಹಗರಣ ; ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌ ಬಂಧನ

28-01-21 01:29 pm       Headline Karnataka News Network   ಕ್ರೈಂ

ಯೆಸ್‌ ಬ್ಯಾಂಕ್‌ ಸಹ ಸಂಸ್ಥಾಪಕ ರಾಣಾ ಕಪೂರ್‌ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.  

ನವದೆಹಲಿ, ಜ. 28 : ಯೆಸ್‌ ಬ್ಯಾಂಕ್‌ ಸಹ ಸಂಸ್ಥಾಪಕ ರಾಣಾ ಕಪೂರ್‌ ಅವರನ್ನು ಪಿಎಂಸಿ ಬ್ಯಾಂಕ್‌ ಸಾಲ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.  

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಜ.23ರಂದು ಮೆಹುಲ್ ಥಾಕೂರ್ ಮತ್ತು ವಿವಾ ಗ್ರೂಪ್ ಡೈರೆಕ್ಟರ್ ಮದನ್ ಗೋಪಾಲ್ ಚತುರ್ವೇದಿ ಎಂಬವರನ್ನು ಬಂಧಿಸಿದ್ದರು. ಇಡಿ ಅಧಿಕಾರಿಗಳು ಅಂಡರ್ ವರ್ಲ್ಡ್ ಡಾನ್ ಭಾಯಿ ಠಾಕೂರ್ ಮನೆ, ವಿವಾ ಗ್ರೂಪ್ ಕಚೇರಿ ಸೇರಿದಂತೆ ಹತ್ತು ಕಡೆ ದಾಳಿ ನಡೆಸಿದ್ದರು. 

ಎಚ್ ಡಿಐಎಲ್ ಪ್ರವರ್ತಕರಾದ ಸಾರಂಗ್ ಮತ್ತು ರಾಕೇಶ್ ವಾಧ್ವಾನ್ ಪಿಎಂಸಿ ಬ್ಯಾಂಕ್ ಹಗರಣದಲ್ಲಿ ಪ್ರಮುಖ ಆರೋಪಿಗಳು. ಎಚ್ ಡಿಐಎಲ್, ಮ್ಯಾಕ್ ಸ್ಟಾರ್ ಗ್ರೂಪ್ ನಲ್ಲಿ ಪಾಲುದಾರಿಕೆ ಹೊಂದಿದ್ದು ಯೆಸ್ ಬ್ಯಾಂಕ್ ನಿಂದ ಇನ್ನೂರು ಕೋಟಿ ರೂಪಾಯಿ ಸಾಲ ಪಡೆದಿತ್ತು. ಆದರೆ, ಈ ಸಾಲ ಪಡೆದಿದ್ದು ಮ್ಯಾಕ್ ಸ್ಟಾರ್ ಗ್ರೂಪಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈಗ ಇಡಿ ಅಧಿಕಾರಿಗಳು ಎರಡೂ ಕಂಪನಿಗಳ ನಿರ್ದೇಶಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

The Enforcement Directorate (ED) on Wednesday arrested YES Bank founder Rana Kapoor in another money laundering case related to Mack star Group and PMC Bank. Kapoor is the third person to be arrested in the case.