ಬ್ರೇಕಿಂಗ್ ನ್ಯೂಸ್
28-01-21 04:52 pm Mangalore Correspondent ಕ್ರೈಂ
ಮಂಗಳೂರು, ಜ.28: ಮಂಗಳೂರು ನಗರ, ಉಳ್ಳಾಲ, ಕೊಣಾಜೆ ಸೇರಿ ಈ ಭಾಗದ ಹತ್ತಕ್ಕೂ ಹೆಚ್ಚು ಸಹಕಾರಿ ಕ್ಷೇತ್ರದ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವ್ಯಕ್ತಿಯೊಬ್ಬ ಸಾಮೂಹಿಕ ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಚಿನ್ನವನ್ನು ಅಡವಿಟ್ಟು ಸೊಸೈಟಿ ಸೇರಿದಂತೆ ಸಹಕಾರಿ ಕ್ಷೇತ್ರದ ಬ್ಯಾಂಕುಗಳಲ್ಲಿ ಸುಮಾರು 2ರಿಂದ 3 ಕೋಟಿ ರೂಪಾಯಿ ಸಾಲ ಪಡೆದು ಭಾರೀ ವಂಚನೆ ಎಸಗಿದ್ದಾನೆಂದು ಮಾಹಿತಿ ಕೇಳಿಬಂದಿದೆ. ಉಳ್ಳಾಲದ ನಿವಾಸಿ ಸಾದಿಕ್ ಎಂಬಾತ ಆರೋಪಿಯಾಗಿದ್ದು, ಚಿನ್ನದ ಆಭರಣಗಳದ್ದೇ ಮಾದರಿಯ ನಕಲಿ ಚಿನ್ನವನ್ನು ಸೊಸೈಟಿಗಳಲ್ಲಿ ಅಡವಿಟ್ಟು ಸಾಲ ಪಡೆದಿದ್ದಾನೆ. ಕಳೆದ ಆಗಸ್ಟ್, ಸೆಪ್ಟಂಬರ್ ನಂತರದಲ್ಲಿ ಸರದಿಯಂತೆ ಈ ರೀತಿ ಚಿನ್ನಾಭರಣ ಅಡವಿಟ್ಟು ಸಾಲ ತೆಗೆದಿದ್ದಾನೆ. ಈ ಬಗ್ಗೆ ತಲಪಾಡಿಯ ಜಾಗೃತ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಮೊದಲು ಶಂಕೆ ಕಂಡುಬಂದಿತ್ತು. ಆಬಳಿಕ ವಿವಿಧ ಸೊಸೈಟಿಗಳಲ್ಲಿ ಪರಿಶೀಲನೆ ನಡೆಸಿದಾಗ ಇದೇ ವ್ಯಕ್ತಿ ಹಲವು ಕಡೆ ಚಿನ್ನ ಇಟ್ಟು ಹಣ ಸಾಲ ಪಡೆದಿರುವುದು ಕಂಡುಬಂದಿದೆ.
ಈ ಬಗ್ಗೆ ಮಾಹಿತಿ ಆಧರಿಸಿ, ನಿನ್ನೆ ಬೆಳಗ್ಗೆ ಆತ್ಮಶಕ್ತಿ ಸಹಕಾರಿ ಸಂಘದ ಮುಡಿಪು ಶಾಖೆಗೆ ಆರೋಪಿ ಸಾದಿಕ್ ನನ್ನು ಕರೆಸಿದ್ದು ಬ್ಯಾಂಕಿನ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಬಳಿಕ ಕೊಣಾಜೆ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಲಾಗಿತ್ತು. ಮಾಹಿತಿ ಪ್ರಕಾರ, ಮಂಗಳೂರು ಡಿಸಿಸಿ ಬ್ಯಾಂಕ್, ಎಂಸಿಸಿ ಬ್ಯಾಂಕ್, ಗುರುದೇವ ಸಹಕಾರಿ ಸಂಘ, ಆತ್ಮಶಕ್ತಿ ಸಹಕಾರಿ ಸೊಸೈಟಿ, ಎಂಸಿಸಿ ಬ್ಯಾಂಕ್ ಸೇರಿ ಹತ್ತಕ್ಕೂ ಹೆಚ್ಚು ಕಡೆ ಸಾದಿಕ್ ಈ ರೀತಿಯ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾನೆ.
ಆದರೆ, ಸಾದಿಕ್ ತನ್ನ ಸಂಬಂಧಿಕರು ಮತ್ತು ಬೇರೆಯವರ ಹೆಸರಲ್ಲಿಯೂ ಈ ರೀತಿ ಬಂಗಾರ ಅಡವಿಟ್ಟು ಸಾಲ ಪಡೆದಿದ್ದು, ಅದರ ಬಗ್ಗೆ ಇನ್ನಷ್ಟೇ ತಪಾಸಣೆ ಆಗಬೇಕಷ್ಟೆ. ಅಲ್ಲದೆ, ಇದೇ ರೀತಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಚಿನ್ನ ಅಡ ಇಟ್ಟು ಮೋಸ ಮಾಡಿದ್ದಾನೆಯೇ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಕಲಿ ಅಂದ್ರೆ, ಅದು ಪೂರ್ತಿ ನಕಲಿ ಅಲ್ಲ !
ಬ್ಯಾಂಕಿನ ಮಾಹಿತಿ ಪ್ರಕಾರ, ನಕಲಿ ಚಿನ್ನ ಅಂದರೆ ಅದು ಪೂರ್ತಿ ನಕಲಿಯಾಗಿಲ್ಲ. ಇತರೇ ಲೋಹದ ಆಭರಣಗಳಿಗೆ ಗೋಲ್ಡ್ ಕೋಟಿಂಗ್ ಕೊಡಲಾಗಿರುತ್ತದೆ. ಎರಡು ಮೂರು ಬಾರಿ ಒರಿಜಿನಲ್ ಚಿನ್ನದ ಕೋಟಿಂಗ್ ಮಾಡಿರುವುದರಿಂದ ಅದನ್ನು ಪರಿಶೀಲನೆ ನಡೆಸುವ ವೇಳೆ ಉಜ್ಜಿದರೂ ಅದು ನಕಲಿ ಎಂದು ಗೊತ್ತಾಗಲ್ಲ. ಅದರಲ್ಲಿ 30 ಶೇಕಡದಷ್ಟು ಚಿನ್ನ ಇರುತ್ತದೆ ಎನ್ನುತ್ತಿದ್ದಾರೆ. ವಿದೇಶದಲ್ಲಿ ತಯಾರಾದ ಈ ರೀತಿಯ ಚಿನ್ನದ ಆಭರಣಗಳನ್ನು ಅಡವಿಟ್ಟು ಉದ್ದೇಶಪೂರ್ವಕವಾಗಿ ವಂಚಿಸಲಾಗಿದೆ ಎಂದು ಬ್ಯಾಂಕ್ ಸಿಬಂದಿ ಹೇಳುತ್ತಾರೆ.
ನಿರ್ಲಕ್ಷ್ಯ ವಹಿಸಿದ ಕೊಣಾಜೆ ಪೊಲೀಸರು !
ವಂಚನೆ ಜಾಲದ ಬಗ್ಗೆ ತಿಳಿದು ಆರೋಪಿಯನ್ನು ಹಿಡಿದಿಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದರೂ, ಕೊಣಾಜೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಲಿಖಿತ ದೂರು ನೀಡಿದರೂ, ಎಫ್ಐಆರ್ ದಾಖಲಿಸದೆ ಬ್ಯಾಂಕ್ ಸಿಬಂದಿಯ ದೂರಿನ ಬಗ್ಗೆ ಅಲ್ಲಿನ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾಗಿ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ 11 ಗಂಟೆ ವರೆಗೂ ಬ್ಯಾಂಕ್ ಸಿಬಂದಿ ಠಾಣೆಯಲ್ಲಿ ಕುಳಿತಿದ್ದು, ಕೊನೆಗೆ ಮೇಲಧಿಕಾರಿಗಳಿಗೆ ಒತ್ತಡ ಹಾಕಿದ ಬಳಿಕ ಠಾಣಾಧಿಕಾರಿ ಎಫ್ಐಆರ್ ಮಾಡಿದ್ದಾರಂತೆ. ವಂಚನೆ ಬಯಲಾಗುತ್ತಿದ್ದಂತೆ ಇಂದು ಉಳ್ಳಾಲ, ಮಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿ ವಿರುದ್ಧ ದೂರು ನೀಡಲು ಆಯಾ ಭಾಗದ ಸೊಸೈಟಿ ಸಿಬಂದಿ ಮುಂದಾಗಿದ್ದಾರೆ.
Few Society Banks of Mangalore have been duped by team of persons with Fake Gold Pledging in Crores has been exposed. 2-3 crores of fraud has been taken place at various banks.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm