ಬ್ರೇಕಿಂಗ್ ನ್ಯೂಸ್
30-01-21 12:00 pm Headline Karnataka News Network ಕ್ರೈಂ
ಇಂದೋರ್, ಜ.30: ಇಂದಿನ ಕಾಲದ ಯುವಕ-ಯುವತಿಯರು ಸೋಶಿಯಲ್ ಮೀಡಿಯಾಗೆ ಫುಲ್ ಅಡಿಕ್ಟ್ ಆಗಿ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಕೈನಲ್ಲೂ ಒಂದಲ್ಲ ಒಂದು ಮೊಬೈಲ್ ಇದ್ದೇ ಇರುತ್ತದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರೊಂದಿಗೆ ಚಾಟಿಂಗ್, ಡೇಟಿಂಗ್ ಎಂದು ಲೋಕವನ್ನೇ ಮರೆತು ಹೋಗಿರುತ್ತಾರೆ. ಹೀಗೆ ಆನ್‍ಲೈನ್ ನಲ್ಲಿ ಶುರುವಾದ ಪ್ರೀತಿಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪ್ರಿಯಾ ಅಗರ್‍ವಾಲ್(26) ಎಂಬ ಮಹಿಳೆಯೊಬ್ಬಳು ಪತಿ ಮತ್ತು ಮುದ್ದಾದ ಮಗಳೊಂದಿಗೆ ಇಂದೋರ್ ನಲ್ಲಿ ನೆಲೆಸಿದ್ದಳು. ಆದರೆ ಪ್ರಿಯಾ ಅಗರ್‍ವಾಲ್‍ಗೆ ಆನ್‍ಲೈನ್ ಮೂಲಕ ಕಳೆದ ವರ್ಷ ಸೌರಭ್ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಹೀಗೆ ಚಾಟ್ ಮಾಡುತ್ತಾ, ಮಾಡುತ್ತಾ ಒಬ್ಬರಿಗೊಬ್ಬರು ಬಹಳ ಆತ್ಮೀಯರಾದರು. ಇತ್ತೀಚೆಗೆ ಪ್ರಿಯಾ ಸೌರಭ್ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸೌರಭ್, ಆಕೆಯನ್ನು ಭೇಟಿ ಮಾಡುವಂತೆ ಕರೆಸಿಕೊಂಡಿದ್ದಾನೆ.
ಅಂತೆಯೇ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪ್ರಿಯಾ, ಆತನನ್ನು ಭೇಟಿ ಮಾಡಲು ಮಗಳೊಂದಿಗೆ ಗ್ಯಾನಶೀಲ ಸೂಪರ್ ಸಿಟಿ ಬಳಿ ಇರುವ ಖಾಲಿ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಮಾಡುತ್ತಾ ವಿಕೋಪಕ್ಕೆ ತಿರುಗಿ ಸೌರಭ್ ತನ್ನ ಬಳಿ ಇದ್ದ ಕತ್ತರಿಯಿಂದ ಆಕೆಗೆ ಎರಡು ಬಾರಿ ಚುಚ್ಚಿದ್ದಾನೆ. ಮುಖ ಮತ್ತು ಕತ್ತಿಗೆ ಇರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಪ್ರಿಯಾಗೆ ರಕ್ತ ಹರಿಯಲು ಆರಂಭಿಸಿದೆ. ಮಗಳ ಮುಂದೆ ಉಸಿರಾಡಲು ಕೂಡ ಆಗದೇ ಪ್ರಿಯಾ ಸಮೀಪದಲ್ಲಿದ್ದ ಅಂಗಡಿ ಮುಂದೆ ಕುಸಿದಿದ್ದಾಳೆ. ಆದರೂ ಸೌರಭ್ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸ್ಕೂಟರ್ ಹತ್ತಿ ಆರಾಮವಾಗಿ ಸ್ಥಳದಿಂದ ಹೋಗುತ್ತಾನೆ. ಇನ್ನೂ ಈ ವೀಡಿಯೋ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
A woman was allegedly stabbed to death by a person and his accomplice with a sharp-edged weapon in Madhya Pradesh's Indore's Lasudia police station area after which the accused has been taken into custody.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm