ಬ್ರೇಕಿಂಗ್ ನ್ಯೂಸ್
30-01-21 10:26 pm Mangaluru Correspondent ಕ್ರೈಂ
ಪುತ್ತೂರು, ಜ.30: ಅಡವಿರಿಸಿದ ಚಿನ್ನವನ್ನು ಯೋಗ್ಯ ಬೆಲೆಗೆ ಖರೀದಿಸಲು ಬಂದಿದ್ದ ಮೈಸೂರು ಮೂಲದ ಸಂಸ್ಥೆಯ ಸಿಬಂದಿಗೇ ಯಾಮಾರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು ಕೊನೆಗೆ ಸಿಬಂದಿಯೇ ಖದೀಮನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಅಡವಿಟ್ಟ ಚಿನ್ನದ ಬಡ್ಡಿ ಕಟ್ಟಲಾಗದೆ ನೀವು ಕಂಗೆಟ್ಟಿರುವಿರಾ.. ನಾವು ಯೋಗ್ಯ ಬೆಲೆ ನೀಡಿ ಖರೀದಿಸುತ್ತೇವೆಂದು ಜಾಹೀರಾತು ನೀಡುತ್ತಿದ್ದ ಮೈಸೂರು ಮೂಲದ ಸಂಸ್ಥೆಯೊಂದು ಉಪ್ಪಿನಂಗಡಿಯ ಗ್ರಾಹಕನ ಮಾತು ಕೇಳಿ ಚಿನ್ನ ಖರೀದಿಸಲು ಬಂದಿತ್ತು. ಸಹಕಾರಿ ಬ್ಯಾಂಕ್ ಒಂದರಲ್ಲಿ ಚಿನ್ನದ ಬಡ್ಡಿ, ಅಸಲು ಇನ್ನಿತರ ಮೊತ್ತ ಭರಿಸಿ, ಚಿನ್ನಾಭರಣವನ್ನು ಪಡೆಯಲು ಸಂಸ್ಥೆಯ ಸಿಬಂದಿ ಆಗಮಿಸಿದ್ದರು. ಈ ವೇಳೆ, ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಉಮ್ಮರ್ ಫಾರೂಕ್ (26) ಎಂಬಾತ ಗ್ರಾಹಕನಾಗಿದ್ದು, ಆತನ 81 ಗ್ರಾಮ್ ಚಿನ್ನವನ್ನು ಬ್ಯಾಂಕಿನಿಂದ ಬಿಡಿಸಿ ಖರೀದಿಸಲು ಒಪ್ಪಂದ ಆಗಿತ್ತು.
ಅದರಂತೆ, ಸಂಸ್ಥೆಯ ಸಿಬಂದಿ ಬ್ಯಾಂಕಿಗೆ ಕಟ್ಟಲೆಂದು 2.69 ಲಕ್ಷ ಮತ್ತು 32 ಲಕ್ಷ ಆಭರಣದ ಮೌಲ್ಯದ ಹೆಚ್ಚುವರಿ ಮೊತ್ತ ಎಂದು ಒಟ್ಟು ಮೂರು ಲಕ್ಷ ರೂಪಾಯಿಯನ್ನು ಫಾರೂಕ್ ಕೈಗೆ ನೀಡಿದ್ದರು. ಫಾರೂಕ್ ಬ್ಯಾಂಕಿನಲ್ಲಿ ಹಣವನ್ನು ಕೊಟ್ಟು ಚಿನ್ನಾಭರಣದ ಕಟ್ಟನ್ನು ಪಡೆದಿದ್ದು, ಸಂಸ್ಥೆಯ ಸಿಬಂದಿ ಈ ಬಗ್ಗೆ ದಾಖಲೆ ಪತ್ರಗಳನ್ನು ಸಿದ್ಧಪಡಿಸುವ ತರಾತುರಿಯಲ್ಲಿದ್ದರು.
ಈ ವೇಳೆ, 81 ಗ್ರಾಮಿನ ಚಿನ್ನದ ಕಟ್ಟನ್ನು ಹಿಡಿದುಕೊಂಡಿದ್ದ ಫಾರೂಕ್, ಸಿಬಂದಿಯ ಗಮನ ಬೇರೆಡೆ ಇರುವುದನ್ನು ಗಮನಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬ್ಯಾಂಕಿನಿಂದ ಹೊರಬಂದು ಚಿನ್ನದ ಕಟ್ಟು ಹಿಡಿದು ಓಡಿದ್ದು, ಕೂಡಲೇ ವಿಷಯ ಅರಿತ ಫೈನಾನ್ಸ್ ಸಂಸ್ಥೆಯ ಸಿಬಂದಿ ಕೂಡ ಆತನ ಹಿಂದೆ ಓಡಿದ್ದಾರೆ. ಕೊನೆಗೆ ಉಪ್ಪಿನಂಗಡಿ ಪೇಟೆಯಾದ್ಯಂತ ಆರೋಪಿ ಫಾರೂಕ್ ಓಡಿದ್ದು, ಹಿಂದಿನಿಂದಲೇ ಸಿಬಂದಿ ಕೂಡ ಓಡಿದ್ದಲ್ಲದೆ ಕಾಲರ್ ಹಿಡಿದಿದ್ದಾರೆ. ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಯ್ದು ಆರೋಪಿಯನ್ನು ಪೊಲೀಸರಿಗೊಪ್ಪಿಸಿ, ಚಿನ್ನದ ಆಭರಣವನ್ನು ಸಂಸ್ಥೆಯ ಸಿಬಂದಿ ಪಡೆದುಕೊಂಡು ಹಿಂತಿರುಗಿದ್ದಾರೆ.
A person tried to escape with the ornaments he had pledged to a cooperative bank in Puttur, after getting them released with the help of a firm that volunteered to clear the loan and buy the ornaments so pledged.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm