ಗಂಜಿಮಠ ; ದರೋಡೆಗೆ ಹೊಂಚು ಹಾಕಿದ್ದ ಐವರು ಪೊಲೀಸರ ಬಲೆಗೆ 

31-01-21 03:22 pm       Mangaluru Reporter   ಕ್ರೈಂ

ಗಂಜಿಮಠ ಬಳಿಯ ಕೈಗಾರಿಕಾ ಪ್ರಾಂಗಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಬಜ್ಪೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಮಂಗಳೂರು, ಜ.31: ಗಂಜಿಮಠ ಬಳಿಯ ಕೈಗಾರಿಕಾ ಪ್ರಾಂಗಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಬಜ್ಪೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಮುಲ್ಲರಪಟ್ನ ನಿವಾಸಿಗಳಾದ ಅಬ್ದುಲ್ ಹಕೀಂ (33), ಅಬ್ದುಲ್ ರಝಾಕ್ (45), ಮುಹಮ್ಮದ್ ರಫೀಕ್ (42), ಮುಹಮ್ಮದ್ ಮನ್ಸೂರ್ (29), ಇರ್ಫಾನ್ (31) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನ, ಎರಡು ಬೈಕ್, ಇತರ ಸೊತ್ತುಗಳು ಮತ್ತು 15 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಸ್ವಾಧೀನ ಪಡಿಸಿದ ಸೊತ್ತಿನ ಮೌಲ್ಯ ಆರು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ್ ನೇತೃತ್ವದಲ್ಲಿ ಪಿಎಸ್ಸೈ ಪೂವಪ್ಪ ಎಚ್.ಎಂ., ರಾಘವೇಂದ್ರ ನಾಯ್ಕ, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ರಾಮ ಪೂಜಾರಿ, ಸುಧೀರ್ ಶೆಟ್ಟಿ, ಸಂತೋಷ ಡಿ.ಕೆ., ವಕೀಲ್ ಎನ್ ಲಮಾಣಿ, ರಶೀದ್ ಶೇಖ್ ಹಾಗೂ ಸಿಬ್ಬಂದಿ ಲಕ್ಷ್ಮಣಗೌಡ, ಹೊನ್ನಪ್ಪಗೌಡ, ರಾಜೇಶ್, ಜಗದೀಶ್, ಮಡಿವಾಳಪ್ಪ, ಜಗದೀಶ್ ಪುತ್ತೂರು, ರವಿಕುಮಾರ್, ರಾಮ ನಾಯ್ಕ, ದೇವಪ್ಪ, ಕಿಸ್ಟಪ್ಪ ರಾಥೋಡ್, ಲಕ್ಷ್ಮಣ ತಿರುಪತಿ, ಹೇಮಂತ್, ಉಮೇಶ್, ಮುತ್ತಣ್ಣ, ಸಂಜೀವ ಮತ್ತು ಮಂಜುನಾಥ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Five members who had planned for robbery in Gajimata in Mangalore have been arrested by Police.